Monday, December 23, 2024

ಜಾನುವಾರುಗಳ ರಕ್ಷಣೆಗೆ ದೋಸೆ ಹಬ್ಬ ಆಚರಣೆ

ಹಾವೇರಿ: ಸಾಮಾನ್ಯವಾಗಿ ಮುಂಜಾನೆ ಮನೆಯಲ್ಲಿ ದೋಸೆ ಸುಡೋದನ್ನ ನೋಡಿದ್ದೆವೆ.‌ಆದ್ರೆ ಆ ಗ್ರಾಮದಲ್ಲಿ ಪ್ರತಿವರ್ಷ ಆಷಾಡ ಮಾಸದಲ್ಲಿ ಪ್ರತಿಯೊಂದು ಮನೆಯಲ್ಲಿ ದೋಸೆ ಸುಡುತ್ತಾರೆ. ಹೀಗೆ ದೋಸೆ ಸುಟ್ಟು ದೋಸೆ ಹಬ್ಬವನ್ನ‌ಆಚರಣೆ ಮಾಡುತ್ತಾರೆ.

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಹುಲ್ಲತ್ತಿ ಗ್ರಾಮದಲ್ಲಿ ಪ್ರತಿವರ್ಷ ಆಷಾಡ ಮಾಸದಲ್ಲಿ ದೋಸೆ ‌ಹಬ್ಬದ ಸಂಭ್ರಮ ಮನೆ ಮಾಡಿರುತ್ತೆ. ಕಳೆದ 135 ವರ್ಷಗಳಿಂದ ಚಾಚು ತಪ್ಪದೆ ಈ ದೋಸೆ ಹಬ್ಬವನ್ನ ಸಡಗರ ಸಂಭ್ರಮದಿಂದ ಗ್ರಾಮದಲ್ಲಿ ಆಚರಿಸುತ್ತಿದ್ದಾರೆ. ಮನೆಯಲ್ಲಿ ದೋಸೆ ಮಾಡಿ ಬಳಿಕ‌ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ನೇವೆದ್ಯ ಮಾಡುತ್ತಾರೆ.

ದೇವರಿಗೆ ದೋಸೆ ಇಟ್ಟು ಪೂಜೆ ಸಲ್ಲಿಸಿದ ಬಳಿಕವೆ ಮನೆಯಲ್ಲಿ ದೋಸೆಯನ್ನ‌ ಊಟಕ್ಕೆ ಬಳಸುತ್ತಾರೆ. ಅಕ್ಕ ಪಕ್ಕದ ಗ್ರಾಮದಲ್ಲಿರುವ ಸಂಬಂಧಿಕರ ಮನೆಗಳಿಗು ದೋಸೆ ಕಳುಹಿಸುವ ಸಂಪ್ರದಾಯವನ್ನ‌ ಚಾಚು ತಪ್ಪದೆ ಪಾಲಿಸುತ್ತಿದ್ದಾರೆ.

RELATED ARTICLES

Related Articles

TRENDING ARTICLES