Monday, December 23, 2024

ನಟಿ ಭಾವನಾಗೆ ಕಾಂಗ್ರೆಸ್​​ ಕಾರ್ಯಕರ್ತೆ ತರಾಟೆ

ಬೆಂಗಳೂರು: ಕಾಂಗ್ರೆಸ್ ಪಕ್ಷದ ಮೌನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಚಿತ್ರನಟಿ ಭಾವನಾ ಅವರನ್ನು ಕಾಂಗ್ರಸ್ ನ ಹಿರಿಯ ಮುಖಂಡರ ಮುಂದೆಯೇ ಕೈ ಕಾರ್ಯಕರ್ತೆಯೊಬ್ಬರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಸಲೀಂ ಅಹಮದ್ ಅವರು ಕುಳಿತಿದ್ದ ವೇದಿಕೆಯತ್ತ ತೆರಳಿದ ನಟಿ ಭಾವನಾ ಅವರನ್ನು ಮಹಿಳಾ ಕಾರ್ಯಕರ್ತೆಯೊಬ್ಬರು ತಡೆಹಿಡಿದು, ವೇದಿಕೆ ಬಿಟ್ಟು ಬದಿಗೆ ಬನ್ನಿ ಎಂದು ಅಡ್ಡಿಪಡಿಸಿದರು.

ಅಲ್ಲದೇ ನೀವು ಬಿಜೆಪಿಗೆ ಹೋಗಿದ್ದೀರಿ ಮತ್ಯಾಕೆ ಇಲ್ಲಿಗೆ ಬಂದಿದ್ದೀರೀ ಎಂದು ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆ ಪ್ರಶ್ನಿಸಿದರು. ಈ ವೇಳೆ ನಟಿ ಭಾವನಾ ತಬ್ಬಿಬ್ಬಾದರು. ತಾನು ಬಿಜೆಪಿಗೆ ಹೋಗಿದ್ದು ನಿಜ. ಆದ್ರೆ ಮತ್ತೆ ಕಾಂಗ್ರೆಸ್ ಗೆ ಮರಳಿದ್ದೇನೆ ಎಂದು ಭಾವನಾ ಹೇಳಿದರು.

ಮತ್ತೆ ಈ ಬಗ್ಗೆ ಮಾಧ್ಯಮದಲ್ಲೂ ಸುದ್ದಿ ನೋಡೆ ಇಲ್ಲ ಎಂದು ಮಹಿಳಾ ಕಾರ್ಯಕರ್ತೆ ಪ್ರಶ್ನಿಸಿದರು. ಈ ವೇಳೆ ವೇದಿಕೆಯಲ್ಲೇ ಉಪಸ್ಥಿತರಿದ್ದ ನಾಯಕರು ಮಧ್ಯಪ್ರವೇಶಿಸಿ ಸಮಾಧಾನಪಡಿಸಿದರು. ನಂತರ ನಟಿ ಭಾವನಾ ಕಾರ್ಯಕರ್ತರು ಕುಳಿತಿದ್ದ ಬದಿಯಲ್ಲೆ ನಿಂತು ಮೌನ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

RELATED ARTICLES

Related Articles

TRENDING ARTICLES