Monday, December 23, 2024

ಬೆಂಗಳೂರಿನಲ್ಲಿ ಹೆಚ್ಚಿದ ಬೀದಿ‌ ನಾಯಿಗಳ ಹಾವಳಿ

ಬೆಂಗಳೂರು : ಸಿಲಿಕಾನ್​ ಸಿಟಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು, ಒಂದೇ ತಿಂಗಳಲ್ಲಿ 2 ಸಾವಿರಕ್ಕೂ ಹೆಚ್ಚು ಜನರ ಮೇಲೆ ಬೀದಿ ನಾಯಿ ಅಟ್ಯಾಕ್ ಮಾಡಿದೆ.

ನಗರದಲ್ಲಿ ಸಿಕ್ಕಸಿಕ್ಕಲ್ಲಿ ಬೀದಿ ನಾಯಿಗಳು ದಾಳಿ ಮಾಡುತ್ತಿದ್ದು, ಅಷ್ಟ ದಿಕ್ಕುಗಳಲ್ಲೂ ಬೌಬೌ ಕಾಟ ಮುಂದುವರೆದಿದೆ. ಮನೆಯಿಂದ ಹೊರ ಬರಲು ಭಯ ಪಡ್ತಿರೋ ಜನ, ಒಂದೇ ತಿಂಗಳಲ್ಲಿ 2 ಸಾವಿರಕ್ಕೂ ಹೆಚ್ಚು ಜನರ ಮೇಲೆ ಬೀದಿ ನಾಯಿ ಅಟ್ಯಾಕ್ ಮಾಡಿದೆ.

ಇನ್ನು, ನಿತ್ಯ ಸರಾಸರಿ 70ಕ್ಕೂ ಹೆಚ್ಚು ಮಂದಿ ಮೇಲೆ ಬೀದಿ ನಾಯಿಗಳ ಅಟ್ಟಹಾಸ ಮುಂದುವರೆದಿದ್ದು, 2020ರಿಂದ ಇಲ್ಲಿಯವರೆಗೆ 52 ಸಾವಿರಕ್ಕೂ ಹೆಚ್ಚು ಜನರಿಗೆ ಶ್ವಾನ ಕಡಿದಿದೆ. 2020 ಫೆಬ್ರವರಿಯಲ್ಲಿ ಶ್ವಾನಿ ಕಡಿತದಿಂದ ಓರ್ವ ಮಹಿಳೆ ಸಾವನ್ನಪ್ಪಿದ್ದಾನೆ. ಆದರೆ ಪಾಲಿಕೆ ಲೆಕ್ಕಾಚಾರದ ಪ್ರಕಾರ ನಗರದಲ್ಲಿ 3 ಲಕ್ಷ ಬೀದಿ ನಾಯಿಗಳಿವೆ.

ಯಾವ ತಿಂಗಳು ಎಷ್ಟು ನಾಯಿ ಕಡಿತ ಪ್ರಕರಣ ದಾಖಲು?
ಜನವರಿ – 1677
ಫೆಬ್ರವರಿ – 1135
ಮಾರ್ಚ್ – 1800
ಏಪ್ರಿಲ್ – 1677
ಮೇ – 1841
ಜೂನ್ – 1140
ಜುಲೈ – 483

ಬೀದಿ ನಾಯಿ ಕಡಿತದ ವಲಯವಾರು ವಿವರ
ವಲಯ 2020 – 2021 – 2022
ಬೊಮ್ಮನಹಳ್ಳಿ: 309 – 182 – 51
ದಾಸರಹಳ್ಳಿ: 10 – 18 – 1
ಪೂರ್ವ: 9312 – 6006 – 3271
ಮಹದೇವಪುರ: 508 – 434 – 387
ಆರ್.ಆರ್ ನಗರ: 412 – 316 – 136
ದಕ್ಷಿಣ: 8519 – 6949 – 3441
ಪಶ್ಚಿಮ: 5710 – 2770 – 2240
ಯಲಹಂಕ: 240 – 650 – 390

RELATED ARTICLES

Related Articles

TRENDING ARTICLES