ಬೆಂಗಳೂರು : ಸಿಎಂ ಪಟ್ಟಕ್ಕೆ ಬೊಮ್ಮಾಯಿ ಬಂದ ಮೇಲೆ ಕ್ಯಾಬಿನೆಟ್ ವಿಸ್ತರಣೆಗೆ ಒತ್ತಡ ಹೆಚ್ಚಾಗಿದ್ರು, ಹೈಕಮಾಂಡ್ ನಾಯಕರು ಮಾತ್ರ ಅವಕಾಶ ಕೊಡದೆ ಮುಂದೂಡ್ತಿದ್ದಾರೆ.. ಇನ್ನೇನು ವಿಧಾನಸಭಾ ಚುನಾವಣೆಗೆ ಕೇವಲ 9 ತಿಂಗಳು ಬಾಕಿ ಉಳಿದಿದ್ದು, ಕ್ಯಾಬಿನೆಟ್ ವಿಸ್ತರಣೆ ಮಾಡೋದು ಹೈಕಮಾಂಡ್ ನಾಯಕರಿಗೂ ಅನಿವಾರ್ಯವಾಗಿದೆ.. 5 ಸಚಿವ ಸ್ಥಾನಗಳಿಗೆ 13 ಜನ ರೇಸ್‌ನಲ್ಲಿದ್ದು, ಯಾರಿಗೆಲ್ಲ ವಿಧಾನಸೌಧ 3ನೇ ಮಹಡಿ ರೂಮ್ ಫಿಕ್ಸ್ ಆಗುತ್ತೆ ಎನ್ನೋದು ಭಾರೀ ಕುತೂಹಲ ಮೂಡಿಸಿದೆ. ಇದ್ರಲ್ಲಿ ಇಬ್ಬರು ಮಾಜಿ ಸಚಿವರು ಎಂಟ್ರಿ ಆಗೋಕ್ಕೆ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.
ಚುನಾವಣಾ ಹತ್ತಿರ ಬರ್ತಿದ್ರೂ, ಕ್ಯಾಬಿನೆಟ್ ವಿಸ್ತರಣೆ ಮಾಡೋಕೆ ಹೈಕಮಾಂಡ್ ನಾಯಕರು ಮನಸ್ಸು ಮಾಡದೇ ಇರೋದು ಸಿಎಂ ಬೊಮ್ಮಾಯಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಒಂದು ಕಡೆ ವಿಸ್ತರಣೆ ಮಾಡಿದ್ರೆ ಆಕಾಂಕ್ಷಿಗಳ ಅಸಮಾಧಾನಕ್ಕೆ ಕಾರಣವಾಗುತ್ತೆ.. ವಿಸ್ತರಣೆ ಮಾಡದಿದ್ರೆ ಪಕ್ಷ ಸಂಘಟನೆಗೆ ತೊಂದರೆ ಯಾಗುತ್ತೆ ಅನ್ನೋದು ಸಿಎಂ ಗೆ ಎದುರಾಗಿರುವ ಕ್ಯಾಬಿನೆಟ್ ಸಂಕಷ್ಟವಾಗಿದೆ. ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ ಹಾಗೂ ಕೆ.ಎಸ್. ಈಶ್ವರಪ್ಪ ಅವರಿಗೆ ಮಣೆ ಹಾಕೊ ಸಾಧ್ಯತೆ ಹೆಚ್ಚಾಗಿದೆ. ಅವರ ಮೇಲಿದ್ದ ಆರೋಪಗಳಿಗೆ ಕ್ಲೀನ್ ಚಿಟ್ ಸಿಕ್ಕಿದ್ದು ವಿಪಕ್ಷಗಳ ವಿರುದ್ಧ ಹೋರಾಡೋದಕ್ಕೆ ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಳ್ಳೊ ಪ್ಲಾನ್ ಇದೆ ರಾಜ್ಯ ಬಿಜೆಪಿ ನಾಯಕರಿಗೆ.
ಆರೋಪದಿಂದ ಮುಕ್ತವಾಗ್ತಿದ್ದಂತೆ ಮಾಜಿ ಸಚಿವ ಈಶ್ವರಪ್ಪ ಫುಲ್ ಆಕ್ಟಿವ್ ಆಗಿದ್ದಾರೆ. ಸಿಎಂ ಬೊಮ್ಮಾಯಿ ಜೊತೆ ಮಾತನಾಡಿ ಮತ್ತೆ ಸಂಪುಟಕ್ಕೆ ಸೇರೋ ಆಶಯ ವ್ಯಕ್ತಪಡಿಸಿದ್ದು, ಇದಕ್ಕೆ ಸಿಎಂ ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಲಾಗ್ತಿದೆ. ಇನ್ನೂ ಇದೇ ಹಾದಿ ಹಿಡಿದಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ದೆಹಲಿಯ ಮಟ್ಟದಲ್ಲಿ ಕಸರತ್ತು ನಡೆಸ್ತಿದ್ದಾರೆ.. ಮಹಾರಾಷ್ಟ್ರದಲ್ಲಿ ನಡೆದ ರಾಜಕೀಯ ತಿರುವಿನಲ್ಲಿ ರಮೇಶ್ ಜಾರಕಿಹೊಳಿ ಪವರ್ ತೋರಿ, ಹೈಕಮಾಂಡ್ ನಾಯಕರಿಗೆ ಹತ್ತಿರವಾಗಿದ್ದಾರೆ. ಹಾಗಾಗಿ ಈ ಬಾರಿಯ ಸಚಿವ ಸಂಪುಟ ವಿಸ್ತರಣೆಯಲ್ಲಿ ರಮೇಶ್ ಜಾರಕಿಹೊಳಿ ಎಂಟ್ರಿ ಆದ್ರೂ ಆಶ್ಚರ್ಯವಿಲ್ಲ ಎಂದು ಹೇಳಲಾಗ್ತಿದೆ. ಒಟ್ಟು 5 ಸಚಿವ ಸ್ಥಾನಗಳಲ್ಲಿ ಎರಡು ಮಾಜಿ ಸಚಿವರ ಪಾಲಾದ್ರೆ, ಇನ್ನುಳಿದ ಮೂರು ಸ್ಥಾನಗಳಿಗ ಆಕಾಂಕ್ಷಿಗಳ ಪಟ್ಟಿ ದೊಡ್ಡದೇ ಇದೆ.
ಈಗಾಗಲೇ ಸಚಿವ ಸಂಪುಟ ಸೇರೋದಕ್ಕೆ ಸಾಕಷ್ಟು ಶಾಸಕರ ಹೆಸರು ಕೇಳಿಬರ್ತಿದ್ದು ಶಶಿಕಲಾ ಜೊಲ್ಲೆಗೆ ಕೋಕ್ ಕೊಡುವ ಸಾಧ್ಯತೆಯಿದೆ ಎಂದು ಹೇಳಲಾಗ್ತಿದೆ.. ಅದರಲ್ಲೂ ಪಂಚಮಸಾಲಿ ಹೋರಾಟದಲ್ಲಿ ಸರ್ಕಾರಕ್ಕೆ ದೊಡ್ಡ ಥ್ರೇಟ್ ಅಗಿರೋ ಯತ್ನಾಳ್ ಹಾಗೂ ಬೆಲ್ಲದ್, ರಾಜುಗೌಡ, ಪೂರ್ಣಿಮಾ ಶ್ರೀನಿವಾಸ್, ರೇಣುಕಾಚಾರ್ಯ , ತಿಪ್ಪಾರೆಡ್ಡಿ ಸೇರಿದಂತೆ ಹಲವು ಶಾಸಕರು ರೇಸ್‌ನಲ್ಲಿ ಹೆಸರು ಕೇಳಿಬರ್ತಿದೆ. ಮತ್ತೊಂದು ಅಚ್ಚರಿ ವಿಚಾರ ಅಂದ್ರೆ ಸಿಪಿ ಯೋಗೇಶ್ವರ್ , ಕುಡಚಿ ಶಾಸಕ ಪಿ.ರಾಜೀವ್ ಗೆ ಸಚಿವ ಸ್ಥಾನ ಒಲಿದು ಬರೋ ಭಾಗ್ಯ ಹೆಚ್ಚಾಗಿದೆ ಎಂದು ಹೇಳಲಾಗ್ತಿದೆ.
ಒಟ್ನಲ್ಲಿ ಸಿಎಂ ದೆಹಲಿಯ ಪ್ರವಾಸದಲ್ಲಿದ್ದು, ಹೈಕಮಾಂಡ್ ನಾಯಕರ ಜೊತೆ ಮಾತಾನಾಡಿ ಈ ಬಾರಿ ಶತಾಯಗತಾಯ ಕ್ಯಾಬಿನೆಟ್ ವಿಸ್ತರಣೆಗೆ ಪರ್ಮಿಶನ್ ತೆಗೆದುಕೊಂಡು ಬರ್ತಾರೆ ಎಂದು ಹೇಳಲಾಗ್ತಿದೆ.. ಯಾರಿಗೆ ಮಂತ್ರಿ ಭಾಗ್ಯ ಸಿಗುತ್ತೆ.. ಇನ್ನು ಕ್ಯಾಬಿನೆಟ್ ವಿಸ್ತರಣೆ , ಪುನಾರಚನೆ ಆದ್ರೆ ಪಕ್ಷದಲ್ಲಿ ಏನೆಲ್ಲಾ ಬದಲಾವಣೆಗಳಾಗ್ತಾವೆ. ಎಲ್ಲವನ್ನು ಸಿಎಂ ಬೊಮ್ಮಾಯಿ ಯಾವ ರೀತಿ ನಿಭಾಯಿಸುತ್ತಾರೆ ಅನ್ನೋದು ಕಾದು ನೋಡಬೇಕಿದೆ.
ರಾಘವೇಂದ್ರ ವಿಎನ್ ಪೊಲಿಟಿಕಲ್ ಬ್ಯೂರೋ ಪವರ್ ಟಿವಿ ಬೆಂಗಳೂರು.