Monday, November 25, 2024

ಒಂದೇ ತಿಂಗಳಲ್ಲಿ ಮೂರುವರೆ ಕೋಟಿ ಒಡತಿಯಾದ ಚಾಮುಂಡೇಶ್ವರಿ

ಮೈಸೂರು : ಆಷಾಡ ಮಾಸದಲ್ಲಿ ಚಾಮುಂಡೇಶ್ವರಿ ದೇವಾಲಯ ಇತಿಹಾಸದಲ್ಲೇ ಒಂದೇ ತಿಂಗಳಲ್ಲಿ ಅತಿ ಹೆಚ್ಚು ಆದಾಯ ಗಳಿಸಿದೆ.

2 ಕೋಟಿ, 33 ಲಕ್ಷದ , 51 ಸಾವಿರದ 270 ರೂ ಹುಂಡಿ ಕಾಣಿಕೆ ಸಂದಾಯವಾಗಿದ್ದು, 270 ಗ್ರಾಂ ಚಿನ್ನ, ಒಂದು ಕೆಜಿ ಬೆಳ್ಳಿ ಕಾಣಿಕೆ ರೂಪದಲ್ಲಿ ಸಂದಾಯವಾಗಿದೆ. 1 ಕೋಟಿ, 3 ಲಕ್ಷದ, 69 ಸಾವಿರದ ,270 ರೂ ಪ್ರವೇಶದ ಟಿಕೆಟ್ ನಿಂದ ಆದಾಯ ಗಳಿಸುತ್ತಿದ್ದು, ಹಿಂದಿನ ಎಲ್ಲಾ ದಾಖಲೆಯನ್ನು ಮೀರಿಸಿದೆ.

ಇನ್ನು, 250 ಮಂದಿಯಿಂದ ದಿನವಿಡೀ ನಡೆದ ಹುಂಡಿ ಎಣಿಕೆಯಲ್ಲಿ, ವಿದೇಶಿಯರಿಂದಲೂ ಹುಂಡಿಗೆ ಕಾಣಿಕೆ ಸಲ್ಲಿಕೆಯಾಗಿದೆ. ಹುಂಡಿ ಸೇರಿದ ರದ್ದಾದ 500, 1000 ಮುಖ ಬೆಲೆಯ ನೋಟುಗಳು. ಒಂದು ಲಕ್ಷಕ್ಕೂ ಅಧಿಕ ಬೆಲೆಯ ರದ್ದಾದ ನೋಟುಗಳು ಹುಂಡಿಯಲ್ಲಿ ಪತ್ತೆಯಾಗಿದೆ. ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಸಿ.ಜಿ.ಕೃಷ್ಣ ಸಮ್ಮುಖದಲ್ಲಿ ನಡೆದ ಹುಂಡಿ ಎಣಿಕೆ ಹಣ ಚಾಮುಂಡಿಬೆಟ್ಟದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಗೆ ಸಂದಾಯವಾಗಿದೆ.

RELATED ARTICLES

Related Articles

TRENDING ARTICLES