ಬೆಳಗಾವಿ : ಹಿಂದೂ ಮುಸ್ಲಿಂ ಭಾವೈಕ್ಯದ ಪ್ರತೀಕವಾದ ಯಕ್ಕುಂಡಿ ದರ್ಗಾಗೆ ಶಾಸಕ ಜಮೀರ್ ಭೇಟಿ ನೀಡಿದ್ದಾರೆ.
ಯಕ್ಕುಂಡಿ ಗ್ರಾಮದ ಕುಮಾರೇಶ್ವರ ವಿರಕ್ತಮಠ ಹಾಗೂ ಪೀರ ದಿಲಾವರಗೋರಿ ಶಾಹವಲಿ ದರ್ಗಾಗೆ ಭೇಟಿ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ದರ್ಗಾಗೆ ಭೇಟಿ ನೀಡಿದ್ದು ನನಗೆ ಖುಷಿ ತಂದಿದೆ. ಮಹಾಂತೇಶ ಕೌಜಲಗಿ ನಮ್ಮಲ್ಲಿ ವಿಶಿಷ್ಟ ಪವಾಡದ ದರ್ಗಾ ಇದೆ ಅಲ್ಲಿ ಬರಬೇಕು ಅಂತಾ ಕೇಳಿದ್ರು. ಆದ್ರೆ ಆಗ ಬರಲಿಕ್ಕೆ ಆಗಿರಲಿಲ್ಲ, ನಾನು ಸಚಿವನಾಗಿದ್ದಾಗ ಅನುದಾನ ನೀಡಿದ್ದೆ ಎಂದರು.
ಇನ್ನು, ಇಂದು ಬಾಬಾ ನನ್ನ ಕರೆಸಿಕೊಂಡಿದ್ದಾರೆ ಅದು ನನ್ನ ಪುಣ್ಯ, ದರ್ಗಾ ಕಮಿಟಿಯವರಿಗೆ ಐದು ಲಕ್ಷ ರೂಪಾಯಿ ಹಣ ನೀಡುತ್ತಿದ್ದೇನೆ. ದರ್ಗಾದಲ್ಲಿ ನಿಜವಾಗಲೂ ಏನೋ ಪವಾಡ ಇದೆ. ಮಠಕ್ಕೆ ಹೋಗಿದ್ದೆ ಅಲ್ಲಿಯೂ ಏನೋ ಶಕ್ತಿ ಇದೆ ಅನಿಸಿತು. ದರ್ಗಾದಲ್ಲಿ ಪ್ರಾರ್ಥನೆ ಮಾಡಿ ಕೇಳಿಕೊಂಡೆ ಒಂದು ಹರಕೆ ಮಾಡಿದೆ. ದರ್ಗಾದಲ್ಲಿ ಏನೋ ಪವಾಡ ಇದೆ ಅಂತಾ ಅನಿಸಿತು ನನಗೆ ಎಂದು ಹೇಳಿದರು.
2023ರಲ್ಲಿ ಚುನಾವಣೆ ಬರ್ತಿದೆ ಏನಾದರೂ ಮಾಡಿ ಆಶೀರ್ವಾದ ಮಾಡಿ. ಮಹಾಂತೇಶ ಕೌಜಲಗಿ ಹೆಚ್ಚಿನ ಮತದಿಂದ ಆರಿಸಿ ಬರಬೇಕು. ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ರೆ ನನ್ನ ವೈಯಕ್ತಿಕವಾಗಿ ನಾನು ಬಂದು ನಿರೀಕ್ಷೆ ಮಾಡಿಲ್ಲ ಅಷ್ಟು ದುಡ್ಡು ನೀಡ್ತೀನಿ. ನಮ್ಮ ಕಾಂಗ್ರೆಸ್ ಸರ್ಕಾರ ಬಂದ್ರೆ ಕನಿಷ್ಟ 50 ಲಕ್ಷ ಹಣ ನೀಡ್ತೀನಿ. ನಮ್ಮ ಸರ್ಕಾರ ಬಂದ ಮೂರು ತಿಂಗಳೊಳಗೆ ಬಂದು ನೀಡ್ತೀನಿ. ನನಗೆ ಸಿಕ್ಕಷ್ಟು ಪ್ರೀತಿ ದೇಶದಲ್ಲಿ ಯಾರಿಗೂ ಸಿಕ್ಕಿಲ್ಲ ಎಂದರು.