ಹುಬ್ಬಳ್ಳಿ : ನಾನು ಎಲ್ಲಿಯವರೆಗೆ ರಾಜಕೀಯದಲ್ಲಿ ಇರುತ್ತೇನೆ ಅಲ್ಲಿಯವರೆಗೆ ನನ್ನ ಸಮುದಾಯದ ಜನರು ತಲೆ ಎತ್ತಿ ನಡೆಯಬೇಕು , ತಲೆ ತಗ್ಗಿಸಬಾರದು ಎಂದು ಜಮೀರ್ ಅಹ್ಮದ್ ಹೇಳಿದ್ದಾರೆ.
ನಾನು ಯಾವಾಗಲೂ ಸಮುದಾಯದ ಬಗ್ಗೆ ಯೋಚನೆ ಮಾಡುವಂತವನು. ನಾನು ಶಾಸಕನಾಗಿ, ಸಚಿವನಾಗಿದ್ದು ದೇವರ ಆಶೀರ್ವಾದ, ನಾನು ಎಲ್ಲಿಯವರೆಗೆ ರಾಜಕೀಯದಲ್ಲಿ ಇರುತ್ತೇನೆ ಅಲ್ಲಿಯವರೆಗೆ ನನ್ನ ಸಮುದಾಯದ ಜನರು ತಲೆ ಎತ್ತಿ ನಡೆಯಬೇಕು , ತಲೆ ತಗ್ಗಿಸಬಾರದು. 2018ರಲ್ಲಿ ನಾನು ಜೆಡಿಎಸ್ ತೊರೆದು ಕಾಂಗ್ರೇಸ್ ಗೆ ಬಂದೆ ಆದ್ರೂ ನಾನೂ ಸಚಿವನಾಗಿದ್ದೆ. ವಕ್ಫ್ ಆಸ್ತಗಳ ಮೂಲಕ ರಾಜ್ಯಾದ್ಯಂತ ನಾನು ಮನೆ ನಿರ್ಮಿಸಿ ಬಡವರಿಗೆ ನೀಡಬೇಕು ಎನ್ನುವ ಯೋಜನೆ ನನ್ನದಾಗಿತ್ತು. ಕುಮಾರಸ್ವಾಮಿ ಸರ್ಕಾರವನ್ನು ಹಣ ಕೇಳಿದಾಗ ಕೊಡಲಿಲ್ಲ, ಸಿದ್ದರಾಮಯ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದರು.
ಇನ್ನು, ವಕ್ಫ್ ಬೋರ್ಡ್ ಎಲ್ಲಾ ಸ್ಕೀಮ್ ಗಳು ಈಗ ಕ್ಯಾನ್ಸಲ್ ಆಗಿದೆ. ನಾವು ನಿಯತ್ತಾಗಿ ಇದ್ದೀವಿ ಆದ್ರೆ ಒಗ್ಗಟ್ಟಾಗಿ ಇಲ್ಲಾ,ನಾವು ಒಗ್ಗಟ್ಟಾಗಿ ಇದ್ದರೆ ಈ ವಾತಾವರಣ ಹೋಗಲಾಡಿಸಬೇಕು ಅಂದ್ರೇ ನಾವು ಒಗ್ಗಟ್ಟಾಗಬೇಕು. ಮುಸಲ್ಮಾನ್ ಅಂದುಕೊಂಡಿದ್ದನ್ನು ಮಾಡ್ತಾನೆ. ನಾನು ಹೆದರುವನಲ್ಲ, ಸಿದ್ದರಾಮಯ್ಯ ಮುಸ್ಲಿಂ ಜನರ ಮೇಲೇ ಪ್ರೀತಿ ಇಟ್ಟವರು. ಇದು ನಮ್ಮೆಲ್ಲರ ಹುಟ್ಟು ಹಬ್ಬ ಆಚರಿಸಿಕೊಂಡ ರೀತಿಯಲ್ಲಿ ಆಚರಿಸಬೇಕು ಎಂದು ಹೇಳಿದರು.
ಅದಲ್ಲದೇ, ಪ್ರಸಾದ್ ಅಬ್ಬಯ್ಯ ಅವರ ಮಗನಿಗೆ ಜ್ವರ ಬಂದಿದೆ ಅಂತ ಅವರು ಬಂದಿಲ್ಲ. ಎಲೆಕ್ಷನ್ ನಲ್ಲಿ ಜ್ವರ ಬಂದಿದ್ದರೆ ಬರ್ತಾ ಇದ್ದರೂ ಇಲ್ವೋ…? ಅವರ ಮಗನಿಗೆ ಜ್ವರ ಬಂದಿದೆ,ಅವರಿಗೆ ಅಲ್ಲಾ ಅಲ್ವಾ…? ಎಲೆಕ್ಷನ್ ನಲ್ಲಿ ನಮಗೂ ಜ್ವರ ಬಂದರೆ ಹೇಗೆ..? 1 ಲಕ್ಷ ಅಲ್ಪಂಖ್ಯಾತರು ಹುಬ್ಬಳ್ಳಿಯಲ್ಲಿ ಇದ್ದಾರೆ,ಅದಕ್ಕೆ ನಾವೆಲ್ಲರೂ ಒಂದಾಗಿ ಇರಬೇಕು ಎಂದರು.