Wednesday, January 22, 2025

ಕಿಚ್ಚನಿಗೆ ಸಲ್ಲು ಸಾಥ್; ಪಾಕಿಸ್ತಾನದಲ್ಲೂ ವಿಕ್ರಾಂತ್ ರೋಣ ರಿಲೀಸ್!

ಅಬ್ಬಬ್ಬಾ..! ಆಲ್ ಇಂಡಿಯಾ ಕಟೌಟ್ ಕಿಚ್ಚನ ಹವಾ ಸಖತ್ ಜೋರಿದೆ ಗುರು. ಎಲ್ಲೆಲ್ಲೂ ರೋಣದ ದರ್ಬಾರ್​. ಕಟೌಟ್​ಗಳು ಜೋರ್​ದಾರ್. ಇದು ವರ್ಲ್ಡ್​ ಸಿನಿದುನಿಯಾದಲ್ಲಿ ಪಾಕಿಸ್ತಾನ ಸೇರಿದಂತೆ 50ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಬರೋಬ್ಬರಿ ಏಳು ಸಾವಿರ ಸ್ಕ್ರೀನ್ಸ್​ನಲ್ಲಿ ರೋಣನ ಪ್ರಪಂಚ ತೆರೆದುಕೊಳ್ಳಲಿದೆ. ಇದು ಕಿಚ್ಚನ ಕ್ರೇಜ್ ಕಿಚ್ಚಾಗಿದೆ.

7 ಸಾವಿರ ಸ್ಕ್ರೀನ್ಸ್.. 50 ರಾಷ್ಟ್ರಗಳಲ್ಲಿ ರೋಣನ ಅಬ್ಬರದ ದಿಬ್ಬಣ

ಕಿಚ್ಚನಿಗೆ ಸಲ್ಲು ಸಾಥ್.. ಪಾಕಿಸ್ತಾನದಲ್ಲೂ ವಿಕ್ರಾಂತ್ ತ್ರಿವಿಕ್ರಮ..!

ಕೆಲವೊಂದು ದೃಶ್ಯವೈಭವಗಳನ್ನು ದೊಡ್ಡ ಪರದೆ ಮೇಲೆ ನೋಡಿದ್ರೆ ವ್ಹಾವ್ ಫೀಲ್ ಜೊತೆ ಹೆಮ್ಮೆ ಅನಿಸುತ್ತೆ. ಅಂಥದ್ದೇ ಸಾಲಿಗೆ ಸೇರೋ ಸೌತ್​ನ ಮತ್ತೊಂದು ಮೋಸ್ಟ್ ಎಕ್ಸ್​ಪೆಕ್ಟೆಡ್ ಮೂವಿ ವಿಕ್ರಾಂತ್ ರೋಣ. ಕಾರಣ ಇದು 2ಡಿ ಜೊತೆ ತ್ರೀಡಿಯಲ್ಲೂ ರಂಜಿಸೋಕೆ ಸನ್ನದ್ಧವಾಗಿದೆ. ಮೇಕಿಂಗ್​ನ ಗಮ್ಮತ್ತು, ಕಥೆಯಲ್ಲಿರೋ ಗತ್ತು, ಕಿಚ್ಚನ ನಟನಾ ಗಾಂಭೀರ್ಯ ಚಿತ್ರದ ತೂಕ ಹೆಚ್ಚಿಸಿವೆ.

ಅನೂಪ್ ಭಂಡಾರಿ ನಿರ್ದೇಶನ ಹಾಗೂ ಜಾಕ್ ಮಂಜು ನಿರ್ಮಾಣದ ವಿಕ್ರಾಂತ್ ರೋಣ ಕಿಚ್ಚ ಸುದೀಪ್ ಕರಿಯರ್​ನ ಬಿಗ್ಗೆಸ್ಟ್ ಎಂಟರ್​ಟೈನರ್. ಇದು ಇದೇ ಜುಲೈ 28ಕ್ಕೆ ವಿಶ್ವದಾದ್ಯಂತ ಗ್ರ್ಯಾಂಡ್ ರಿಲೀಸ್ ಆಗ್ತಿದ್ದು, 27ರಂದೇ ವರ್ಲ್ಡ್​ ಪ್ರೀಮಿಯರ್ ಆಗ್ತಿದೆ. ಬರೋಬ್ಬರಿ 3500ರಿಂದ 7 ಸಾವಿರ ಸ್ಕ್ರೀನ್ಸ್​ನಲ್ಲಿ ವಿಶ್ವದ 50ಕ್ಕೂ ಅಧಿಕ ರಾಷ್ಟ್ರಗಳಲ್ಲಿ ತೆರೆಗಪ್ಪಳಿಸಲಿದೆ. ಅದ್ರಲ್ಲೂ ನಮ್ಮ ಶತ್ರು ರಾಷ್ಟ್ರ ಪಾಕಿಸ್ತಾನದಲ್ಲಿ ರೋಣ ರಂಗೇರಲಿರೋದು ಇಂಟರೆಸ್ಟಿಂಗ್.

ದೇಶದಾದ್ಯಂತ ಭರ್ಜರಿ ಪ್ರೊಮೋಷನ್ಸ್ ಮಾಡ್ತಿರೋ ಕಿಚ್ಚ ಅಂಡ್ ಟೀಂ, ಡೆಲ್ಲಿ, ಮುಂಬೈ, ಚೆನ್ನೈ, ಕೊಚ್ಚಿ ಎಲ್ಲಾ ಸುತ್ತಿಬಂದಿದ್ರು. ಇದೀಗ ಚೆನ್ನೈ, ಹೈದ್ರಾಬಾದ್ ಹಾಗೂ ಮುಂಬೈಗೆ ಮತ್ತೊಂದು ರೌಂಡ್ ತೆರಳಿದ್ದಾರೆ. ನಿನ್ನೆ ಚೆನ್ನೈನಲ್ಲಿ ಪ್ರೀ ರಿಲೀಸ್ ಇವೆಂಟ್ ನಡೆಸಿದ್ದು, ಇಂದು ಬಾಂಬೆಯಲ್ಲಿ ಸಲ್ಮಾನ್ ಖಾನ್ ಸಮಕ್ಷಮದಲ್ಲಿ ಇವೆಂಟ್ ನಡೆದಿದೆ.

ಆನ್​ಲೈನ್ ಟಿಕೆಟ್ ಬುಕಿಂಗ್ ಶುರುವಾಗಿದ್ದು, ದೇಶ ವಿದೇಶಗಳಲ್ಲಿ 2ಡಿ ಹಾಗೂ ತ್ರೀಡಿ ಥಿಯೇಟರ್ ಲಿಸ್ಟ್ ಕೂಡ ಅನೌನ್ಸ್ ಆಗಿದೆ. ಪಕ್ಕದ ಆಂಧ್ರದಲ್ಲಿ ದೊಡ್ಡ ಮಟ್ಟದಲ್ಲಿ ರೋಣ ರಾಕ್ ಮಾಡಲಿದೆ. ಇನ್ನು ಕಟೌಟ್ಸ್ ಕೂಡ ಬಹುತೇಕ ಎಲ್ಲಾ ಕಡೆ ತಲೆ ಎತ್ತಿದ್ದು, ರೋಣನ ಉತ್ಸವಕ್ಕೆ ಸುದೀಪಿಯನ್ಸ್ ಕಾತರರಾಗಿದ್ದಾರೆ. ಫ್ಯಾನ್ಸ್ ಶೋ ಮಧ್ಯರಾತ್ರಿಯಿಂದಲೇ ಶುರುವಾಗುತ್ವಾ ಅನ್ನೋದು ಇನ್ನಷ್ಟೇ ನಿರೀಕ್ಷಿಸಬೇಕಿದೆ. ಇನ್ನು ಇದೇ ಜುಲೈ 26ಕ್ಕೆ ಬೆಂಗಳೂರಿನಲ್ಲಿ ವಿಆರ್ ಪ್ರೀ ರಿಲೀಸ್ ಫಂಕ್ಷನ್ ರಂಗೇರಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES