ಬಹುಭಾಷಾ ಅಪ್ಸರೆಯರಾದ ಊರ್ವಶಿ ರೌಟೆಲಾ ಹಾಗೂ ಲಕ್ಷ್ಮೀ ರಾಯ್ ಒಟ್ಟಿಗೆ ಒಂದೇ ವೇದಿಕೆಯಲ್ಲಿ ಕಲರ್ಫುಲ್ ಹಾಡಿಗೆ ಸ್ಟೆಪ್ ಹಾಕೋ ಮೂಲಕ ಅದ್ರ ಅಂದೆ ಚೆಂದ ಹೆಚ್ಚಿಸಿದ್ರು. ಅದಕ್ಕೆ ಸಾಕ್ಷಿ ಆಗಿದ್ದು ಲೆಜೆಂಡ್ ಸರವಣನ್. ಅಪ್ಪುಗೆ ಆ್ಯಡ್ ಡೈರೆಕ್ಟ್ ಮಾಡಿದ್ದ ಜೆಡಿ- ಜೆರ್ರಿ ಸಾರಥ್ಯದ ಲೆಜೆಂಡ್ ಕಹಾನಿ ಇಲ್ಲಿದೆ.
ಬೆಂಗಳೂರಲ್ಲಿ ಊರ್ವಶಿ ಜೊತೆ ಲಕ್ಷ್ಮಿ ರಾಯ್ ಮಸ್ತ್ ಮ್ಯಾಜಿಕ್
ಅಪ್ಪು ಆ್ಯಡ್ ಡೈರೆಕ್ಟರ್ ಗರಡಿಯಿಂದ ‘ದಿ ಲೆಜೆಂಡ್’ ಸರವಣನ್
ದಿ ಲೆಜೆಂಡ್.. ಸೈಂಟಿಸ್ಟ್ ಬೇಸ್ಡ್ ಕಥಾನಕವಿರೋ ಪಕ್ಕಾ ಕಮರ್ಷಿಯಲ್ ಪ್ಯಾನ್ ಇಂಡಿಯಾ ಸಿನಿಮಾ. ನಮ್ಮ ಕಿಚ್ಚನ ವಿಕ್ರಾಂತ್ ರೋಣನ ಎದುರು ರಿಲೀಸ್ ಆಗ್ತಿರೋ ಚಿತ್ರವಿದು. ತಮಿಳಿನ ನಟ ಸರವಣನ್ ಈ ಚಿತ್ರದ ಮುಖೇನ ನಾಯಕನಟನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡ್ತಿದ್ದು, ಟ್ರೈಲರ್ ಹಾಗೂ ಸಾಂಗ್ಸ್ನಿಂದ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದಾರೆ.
ಸಿನಿಮಾ ಪ್ರೊಮೋಷನ್ಸ್ ವಿಚಾರ ನಮ್ಮ ಬೆಂಗಳೂರಿಗೆ ಬಂದಿದ್ದ ಚಿತ್ರತಂಡ, ಖಾಸಗಿ ಹೋಟೆಲ್ನಲ್ಲಿ ಅದ್ಧೂರಿ ಪ್ರೀ ರಿಲೀಸ್ ಕಾರ್ಯಕ್ರಮ ನಡೆಸಿತು. ಅಲ್ಲಿ 51ರ ಹರೆಯದ ಸರವಣನ್ ಸಿನಿಮೋತ್ಸಾಹ ಹಾಗೂ ಪ್ಯಾಷನ್ ಜೊತೆಗೆ ಸೆಂಟರ್ ಆಫ್ ಅಟ್ರ್ಯಾಕ್ಷನ್ ಅನಿಸಿದ್ದು ಚಿತ್ರದ ನಾಯಕಿಯರಾದ ಊರ್ವಶಿ ರೌಟೆಲಾ ಹಾಗೂ ಕನ್ನಡತಿ ಲಕ್ಷ್ಮೀ ರಾಯ್.
ಅದ್ರಲ್ಲೂ ಈ ಗ್ಲಾಮರ್ ಡಾಲ್ಗಳ ಡ್ಯಾನ್ಸ್ ಧಮಾಕ ಸಖತ್ ಕಿಕ್ ಕೊಟ್ಟಿತು. ಚಿತ್ರದ ಹಾಡುಗಳಿಗೆ ಇಬ್ಬರೂ ಸ್ಟೆಪ್ ಹಾಕಿ ಗಮನ ಸೆಳೆದರು. ಲಕ್ಷ್ಮಿರಾಯ್ ಕನ್ನಡದಲ್ಲೇ ಮಾತನಾಡಿ, ಸದ್ಯದಲ್ಲೇ ಕನ್ನಡಕ್ಕೆ ಕಂಬ್ಯಾಕ್ ಮಾಡ್ತೀನಿ ಅಂದ್ರು. ಇನ್ನು ಬಾಲಿವುಡ್ ಬ್ಯೂಟಿ ಊರ್ವಶಿ, ಕನ್ನಡದಿಂದ ಆಫರ್ಸ್ ಬರ್ತಿದೆ. ಆದ್ರೆ ಯಶ್ ಜೊತೆ ನಟಿಸೋ ಆಸೆಯಿದೆ ಅಂತ ಸೌತ್ ಸಿನಿಮಾಗಳ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ರು.
ರಾಜರತ್ನ ಅಪ್ಪು ಅವ್ರಿಗೆ 8ಕ್ಕೂ ಅಧಿಕ ಆ್ಯಡ್ ಗಳನ್ನು ಡೈರೆಕ್ಟ್ ಮಾಡಿದ್ದ ನಿರ್ದೇಶಕ ಜೆಡಿ-ಜೆರ್ರಿ ಜೋಡಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಗುರುವಾದಿಂದ ಪ್ರೇಕ್ಷಕರ ಮುಂದೆ ಅದೃಷ್ಠ ಪರೀಕ್ಷೆಗೆ ಒಳಗಾಗ್ತಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ