Wednesday, January 22, 2025

ತೆರೆಮೇಲೆ ಪರಮಾತ್ಮನಾಗಿಯೇ ರಾಜರತ್ನ ಅಪ್ಪು ದರ್ಶನ

ಮತ್ತೆ ನಗುಮುಖದಲ್ಲೇ ಕನ್ನಡಿಗರಿಗೆ ದರ್ಶನ ನೀಡಿದ ಪರಮಾತ್ಮ. ಡಾರ್ಲಿಂಗ್ ಕೃಷ್ಣ ನಿಜಕ್ಕೂ ಲಕ್ಕಿಮ್ಯಾನ್. ಎರಡು ಕಣ್ಣು ಸಾಲದು ಅಪ್ಪು- ಪ್ರಭುದೇವ ಡ್ಯಾನ್ಸ್ ಧಮಾಕ ನೋಡೋಕೆ. ಇದೆಲ್ಲವೂ ಸಾಧ್ಯವಾಗಿರೋದು ಲಕ್ಕಿಮ್ಯಾನ್ ಚಿತ್ರದ ಕಲರ್​ಫುಲ್ ಟೀಸರ್​ನಲ್ಲಿ.

ತೆರೆಮೇಲೆ ಪರಮಾತ್ಮನಾಗಿಯೇ ರಾಜರತ್ನ ಅಪ್ಪು ದರ್ಶನ

ಕೃಷ್ಣ ಲಕ್ಕಿಮ್ಯಾನ್.. ಅಪ್ಪು- ಪ್ರಭುದೇವ ಡ್ಯಾನ್ಸ್ ಧಮಾಕ..!

ಕಾಣದಂತೆ ಮಾಯವಾದ ರಾಜರತ್ನ ಅಪ್ಪು ಅವ್ರ ಕೊನೆಯ ಚಿತ್ರ ಜೇಮ್ಸ್ ಅಲ್ಲ.. ಲಕ್ಕಿಮ್ಯಾನ್. ಯೆಸ್.. ಇದು ಲಕ್ಕಿಮ್ಯಾನ್ ಚಿತ್ರದ ಫಸ್ಟ್ ಎಕ್ಸ್​ಕ್ಲೂಸಿವ್ ಟೀಸರ್ ಝಲಕ್. ಇಲ್ಲಿ ಡಾ ಪುನೀತ್ ರಾಜ್​ಕುಮಾರ್ ಪರಮಾತ್ಮನಾಗಿಯೇ ಕನ್ನಡ ಕಲಾಭಿಮಾನಿಗಳಿಗೆ ದರ್ಶನ ನೀಡ್ತಿರೋದು ವೆರಿ ವೆರಿ ಇಂಟರೆಸ್ಟಿಂಗ್.

ಡಾರ್ಲಿಂಗ್ ಕೃಷ್ಣ ಹಾಗೂ ಸಂಗೀತಾ ಶೃಂಗೇರಿ ಜೋಡಿಯ ಲಕ್ಕಿಮ್ಯಾನ್ ಸಿನಿಮಾದಲ್ಲಿ ಅಪ್ಪು ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ. ಕೃಷ್ಣ ಅವ್ರು ಪುನೀತ್ ಅವ್ರ ಸಿನಿಮಾಗಳಿಂದಲೇ ಅಸಿಸ್ಟೆಂಟ್, ಅಸೋಸಿಯೇಟ್ ಡೈರೆಕ್ಟರ್ ಆದವ್ರು. ಹಾಗಾಗಿಯೇ ಅಪ್ಪು ಸಾಥ್ ಅವ್ರ ಈ ಸಿನಿಮಾಗೂ ಸಿಕ್ಕಿದೆ. ಚಿತ್ರದಲ್ಲಿ ದೇವರಾಗಿ ಲವರ್ ಬಾಯ್​ಗೆ ಟಿಪ್ಸ್ ಕೊಡ್ತಾರೆ ಅಪ್ಪು.

ಪ್ರಭುದೇವ ಹಾಗೂ ಪುನೀತ್ ರಾಜ್​ಕುಮಾರ್ ಡ್ಯಾನ್ಸ್ ಧಮಾಕ ನೋಡೋಕೆ ಎರಡು ಕಣ್ಣು ಸಾಲದು. ಡ್ಯಾನ್ಸ್ ಕಿಂಗ್​ಗಳಿಬ್ಬರ ಕುಣಿತ ನಿಜಕ್ಕೂ ಅತ್ಯದ್ಭುತ ಅನಿಸಿದ್ದು, ಈ ಚಿತ್ರಕ್ಕೆ ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಲಿದ್ದು, ಸದ್ಯ ಟೀಸರ್ ಟಾಕ್ ಆಫ್ ದಿ ಟೌನ್ ಆಗಿದೆ. ಅಪ್ಪುರನ್ನ ದೇವರಂತೆ ಕಂಡು ಫ್ಯಾನ್ಸ್ ಭಾವುಕರಾಗಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES