Monday, December 23, 2024

ಹೈಕಮಾಂಡ್ ವಾರ್ನಿಂಗ್‌ಗೆ ಬೆದರಿದ ಜಮೀರ್ ಭಾಯ್

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ಯಾರಾಗಬೇಕೆಂಬ ಚರ್ಚೆ ಜೋರಾಗ್ತಿದೆ. ಜಮೀರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನಡುವೆ ವಾಕ್ಸಮರ ಮುಂದುವರೆದಿದೆ.ಇದ್ರ ನಡುವೆ ಮೊನ್ನೆ ಮಾಜಿ ಸಚಿವರ ಜಮೀರ್ ನೀಡಿರುವ ಹೇಳಿಕೆ ಪಕ್ಷಕ್ಕೆ ಮುಜುಗರ ತಂದಿಟ್ಟಿದೆ.ಒಕ್ಕಲಿಗ ಸಮುದಾಯದ ನಾಯಕರ ಅಸಮಧಾನಕ್ಕೂ ಕಾರಣವಾಗಿದೆ. ಆದ್ರೆ, ಹೈಕಮಾಂಡ್‌ ಬಾಯಿ ಮುಚ್ಚಿಸುವ ಕೆಲ್ಸ ಮಾಡಿದೆ.. ಈ ಮಧ್ಯೆ, ಜಮೀರ್‌ ಉಲ್ಟಾ ಹೊಡೆದಿದ್ದಾರೆ

ರಾಜ್ಯ ಕಾಂಗ್ರೆಸ್ ನಲ್ಲಿರುವ ನಾಯಕರ ಕೋಲ್ಡ್ ವಾರ್ ಶಮನವಾಗ್ತಿಲ್ಲ. ಅದ್ರಲ್ಲೂ ಮುಂದಿನ ಸಿಎಂ ವಿಚಾರದಲ್ಲಿ ಡಿಕೆಶಿ,ಸಿದ್ದು ನಡುವಿನ ಕೋಲ್ಡ್ ವಾರ್ ಮತ್ತಷ್ಟು ರಾಜಕೀಯ ಸ್ವರೂಪ ಪಡೆದುಕೊಳ್ತಿದೆ. ಸಿದ್ದು ಪರಮಾಪ್ತ ಜಮೀರ್ ಪದೇ ಪದೇ ಸಿದ್ರಾಮಯ್ಯ ನಮ್ಮ ಸಿಎಂ ಅಂತ ಹೇಳ್ತಾನೇ ಇದ್ರು. ಕೆಪಿಸಿಸಿ ಶಿಸ್ತು ಸಮಿತಿಯಿಂದ ಸೂಚನೆ ಕೊಟ್ರೂ ಅವರ ಬಾಯಿಗೆ ಬೀಗ ಬೀಳಲಿಲ್ಲ. ಒಕ್ಕಲಿಗ ಸಮುದಾಯಕ್ಕಿಂತ ನಮ್ಮ ಮುಸ್ಲಿಂ ಸಮುದಾಯವೂ ದೊಡ್ಡದಿದೆ. ನಾನೂ ಯಾಕೆ ಸಿಎಂ ಆಗಬಾರ್ದು ಅಂತ ಡಿಕೆಶಿಗೆ ತಿರುಗೇಟು ನೀಡಿದ್ದರು. ಜಮೀರ್ ಅವರ ಈ ಹೇಳಿಕೆಯಿಂದ ಒಕ್ಕಲಿಗ ಸಮುದಾಯದ ಮುಖಂಡರು ಅಸಮಾಧಾನಗೊಂಡಿದ್ದಾರೆ. ಮೊದಲು ಜಮೀರ್ ಬಾಯಿಗೆ ಬೀಗ ಹಾಕಿ ಅಂತ ಕೆಲ ಮುಖಂಡರು ಕೆಪಿಸಿಸಿ ಅಧ್ಯಕ್ಷರಿಗೆ ದೂರು ಕೊಟ್ಟಿದ್ದಾರೆ‌.

ಧಕ್ಕೆ ತರುವ ಹೇಳಿಕೆ ನೀಡದಂತೆ ಸುರ್ಜೇವಾಲ ವಾರ್ನಿಂಗ್ :

ಜಮೀರ್‌ ಬಾಯಿಗೆ ನೀವೇ ಬೀಗ ಹಾಕಬೇಕು.ಸಮುದಾಯದ ಯುವ ಜನ ಕಾಂಗ್ರೆಸ್‌ನತ್ತ ಮುಖ ಮಾಡ್ತಿದ್ದಾರೆ. ಮುಂದೆ ಪಕ್ಷಕ್ಕೆ ಬೆಂಗಾವಲಾಗಿ ನಿಲ್ಲುವ ಅವಕಾಶಗಳಿವೆ.ಇದು ಚುನಾವಣೆಯಲ್ಲಿ‌ನಮಗೆ ಅನುಕೂಲವಾಗಲಿದೆ. ಹೀಗಾಗಿ ಜಮೀರ್ ಅವರ ಹೇಳಿಕೆಗಳಿಗೆ ಬ್ರೇಕ್ ಹಾಕುವಂತೆ ಹಳೆ ಮೈಸೂರು ಭಾಗದ ಒಕ್ಕಲಿಗ ಸಮುದಾಯದ ನಾಯಕರು ದೂರು ನೀಡಿದ್ರು. ಈ ದೂರನ್ನ ಆಧರಿಸಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಜಮೀರ್ ಗೆ ಬುದ್ಧಿವಾದ ಹೇಳಿದ್ದಾರೆ ಎನ್ನಲಾಗ್ತಿದೆ. ನೀವು ಪಕ್ಷಕ್ಕೆ ಹಾನಿಯಾಗುವಂತ ಹೇಳಿಕೆ‌ ನೀಡಬೇಡಿ. ನೀವೊಬ್ಬ ಹಿರಿಯರಿದ್ದೀರ. ಪಕ್ಷ ಸಂಘಟನೆಗೆ ಕಡೆ ಗಮನಕೊಡಿ. ಮೊದಲು ಪಕ್ಷವನ್ನ ಅಧಿಕಾರಕ್ಕೆ ತನ್ನಿ..ನಂತರ ಯಾರು ಸಿಎಂ ಆಗ್ಬೇಕು ಅನ್ನೋದನ್ನ ಹೈಕಮಾಂಡ್ ನಿರ್ಧರಿಸುತ್ತೆ ಅಂತ ಬುದ್ದಿವಾದ ಹೇಳಿದ್ದಾರೆ.

ಇನ್ನು ಕಾಂಗ್ರೆಸ್ ಹೈಕಮಾಂಡ್ ವಾರ್ನಿಂಗ್ ನೀಡುತ್ತಿದ್ದಂತೆ ಜಮೀರ್ ಬಾಯ್ ಬೆದರಿದ್ದಾರೆ. ಒಕ್ಕಲಿಗ ವಿಚಾರ ಎತ್ತಿದ್ದು ತಪ್ಪು ಅಂತ ಗೊತ್ತಾಗುತ್ತಿದ್ದಂತೆ ಯುಟರ್ನ್ ಹೊಡೆದಿದ್ದಾರೆ. ದೇವೇಗೌಡರೇ ನಮ್ಮ ರಾಜಕೀಯ ಗುರು. ನಾನು ಚುಂಚನಗಿರಿ ಮಠದ ಭಕ್ತ ಅಂತ ಹೇಳಿಕೊಳ್ತಿದ್ದಾರೆ ಜಮೀರ್‌ ಅಹ್ಮದ್‌ ಖಾನ್‌.

ಒಟ್ನಲ್ಲಿ, ರಾಜ್ಯ ಕಾಂಗ್ರೆಸ್ ನಲ್ಲಿ ಸಿದ್ದು ಹಾಗೂ ಡಿಕೆಶಿ ನಡುವಿನ ಕೋಲ್ಡ್ ವಾರ್ ಗೆ ಸಂಪೂರ್ಣ ಬ್ರೇಕ್ ಬಿದ್ದಿಲ್ಲ.ಅವರು ಮಾತನಾಡದಿದ್ರೂ ಅವರ ಆಪ್ತರು ಮುಂದಿನ ಸಿಎಂ ವಿಚಾರ ಪ್ರಸ್ತಾಪಿಸ್ತಿದ್ದಾರೆ.ಜೊತೆಗೆ ಜಮೀರ್ ಪದೇ ಪದೇ ಬಾಯಿಗೆ ಬಂದಂತೆ ಹೇಳಿಕೆ ನೀಡ್ತಿದ್ದಾರೆ.ಇದು ಪಕ್ಷಕ್ಕೆ ಮುಜುಗರ ತಂದಿಟ್ಟಿದೆ.ಹೀಗಾಗಿಯೇ ಹೈಕಮಾಂಡ್ ಜಮೀರ್ ಗೆ ಬುದ್ಧಿವಾದ ಹೇಳಿದೆ..ಈಗಲಾದ್ರೂ ಮಾಜಿ‌ ಸಚಿವರು ಬಾಯಿಗೆ ಬೀಗ ಹಾಕಿ‌ ಪಕ್ಷ ಸಂಘಟನೆಗೆ ತೊಡಕ್ತಾರೋ ಇಲ್ಲ ಮತ್ತೆ ಹಳೆಚಾಳಿಯನ್ನೇ ಮುಂದುವರೆಸ್ತಾರೋ ಕಾದು ನೋಡ್ಬೇಕಿದೆ‌.

ಗೋವಿಂದ್, ಪೊಲಿಟಿಕಲ್ ಬ್ಯುರೋ,ಪವರ್ ಟಿವಿ

RELATED ARTICLES

Related Articles

TRENDING ARTICLES