Sunday, June 2, 2024

ರಿಲೀಸ್​ಗೂ ಮೊದ್ಲೇ ಡಾಲಿ ಮಾನ್ಸೂನ್ ರಾಗ ಡಬಲ್ ರೆಕಾರ್ಡ್​

ಮಾನ್ಸೂನ್ ಮಳೆಯಂತೆ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ ನಮ್ಮ ಚಂದನವನದ ಮಾನ್ಸೂನ್ ರಾಗ. ಕ್ಲಾಸ್ ಮತ್ತು ಮಾಸ್ ಕಟೆಂಟ್​ನಿಂದ ನೋಡುಗರ ನಾಡಿಮಿಡಿತ ಹೆಚ್ಚಿಸಿರೋ ಡಾಲಿ-ರಚ್ಚು-ಯಶಾ ಜೋಡಿ, ಇದೀಗ ರಿಲೀಸ್​ಗೂ ಮೊದ್ಲೇ ಡಬಲ್ ರೆಕಾರ್ಡ್​ ಮಾಡಿದೆ.

ರಿಲೀಸ್​ಗೂ ಮೊದ್ಲೇ ಡಾಲಿ ಮಾನ್ಸೂನ್ ರಾಗ ಡಬಲ್ ರೆಕಾರ್ಡ್​

100 ಥಿಯೇಟರ್ಸ್​ಗೆ ರಚಿತಾ ಕಟೌಟ್.. ರಾಗಸುಧಾ ಮಿಲಿಯನ್

ಡಾಲಿ ಧನಂಜಯ ಹಾಗೂ ರಚ್ಚು ಕಾಂಬಿನೇಷನ್​​ನ ಮೋಸ್ಟ್​​ ಎಕ್ಸ್​​ಪೆಕ್ಟೆಡ್​ ಸಿನಿಮಾ ಮಾನ್ಸೂನ್​​ ರಾಗ. ಸದ್ಯ ಈ ಮಾನ್ಸೂನ್​ ಮಾರುತಕ್ಕೆ ಕ್ಲೀನ್​ ಬೋಲ್ಡ್​​ ಆಗಿರೋ ಚಿತ್ರರಸಿಕರು ಸಿನಿಮಾ ಎಂಜಾಯ್​ ಮಾಡೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಇತ್ತ ರಿಲೀಸ್​ಗೂ ಮುನ್ನವೇ ಡಾಲಿ, ರಚ್ಚು ನೂರಾರು ಕಟೌಟ್​ಗಳು ಥಿಯೇಟರ್​​ ಮುಂದೆ ತಲೆಎತ್ತಿ ಸಿನಿಪ್ರಿಯರನ್ನು ಕೈಬೀಸಿ ಕರೆಯುತ್ತಿವೆ.

ರಚ್ಚು ಗ್ಲಾಮರ್​​ ಲುಕ್​​​​, ಡಾಲಿ ರೆಟ್ರೋ ಸ್ಟೈಲ್​​​ ಎಲ್ಲವೂ ಹೊಸ ಬಗೆಯ ನಿರೀಕ್ಷೆ ಮೂಡಿಸಿವೆ. ರಚ್ಚು ತಮ್ಮ ಸಿನಿಜರ್ನಿಯಲ್ಲೇ ಟಫ್​​ ರೋಲ್​ ಲೀಡ್​ ಮಾಡ್ತಿದ್ದಾರೆ. ಪೋರ್ಚುಗೀಸರ ಕಾಲವನ್ನು ಮತ್ತೆ ನೆನಪಿಸುವಂತಿದೆ ಮಾನ್ಸೂನ್​​ ಮೇಕಿಂಗ್​​​​. ಇದ್ರ ಜತೆಯಲ್ಲೇ ಬೈರಾಗಿ ಚಿತ್ರದಲ್ಲಿ ಶಿವಣ್ಣನ ಜತೆ ಸ್ಕ್ರೀನ್​ ಶೇರ್​ ಮಾಡಿದ್ದ ಯಶಾ ಶಿವಕುಮಾರ್ ಮಾನ್ಸೂನ್​​ ರಾಗಕ್ಕೆ ಮಸ್ತ್​​ ಸ್ಟೆಪ್ ಹಾಕಿದ್ದಾರೆ. ಚಂಡೆ ಸಪ್ಪಳ, ವಯೋಲಿನ್​​​ ನಾದ ನಿನಾದದ ನಡುವೆ ಯಶಾ ಮಳೆಕುಣಿತ ಸಖತ್​ ವೈರಲ್​ ಆಗಿದೆ. ಯ್ಯೂಟ್ಯೂಬ್​​ನಲ್ಲಿ ಮಿಲಿಯನ್​​ ವೀವ್ಸ್​​ ದಾಖಲೆಯತ್ತ ಮುನ್ನುಗ್ತಿದೆ ಯಶಾ ಮಳೆ ಕುಣಿತ.

ಆಟಿಟ್ಯೂಡ್​​ ರೆಬಲ್​​ ರೋಲ್​ನಲ್ಲಿ ಯಶಾ ಮಿಂಚಿದ್ರೆ, ಹಾಟ್​​ ಗ್ಲಾಮರ್​ ರೋಲ್​ನಲ್ಲಿ ರಚಿತಾ ರಾಮ್​​ ನಿದ್ದೆಗೆಡಿಸುತ್ತಾರೆ. ಅಂತೂ ಇಬ್ಬರೂ ನಾಯಕಿಯರ ಜತೆ ಡಾಲಿ ರೊಮ್ಯಾನ್ಸ್​ ಮಾಡಲಿದ್ದಾರೆ. ರಿಲೀಸ್​ಗೂ ಮುನ್ನವೇ ಈ ಪಾಟಿ ಕ್ರೇಜ್​ ಕ್ರಿಯೇಟ್​ ಮಾಡಿರೋ ಮಾನ್ಸೂನ್​ ರಾಗ ಸಿನಿಮಾ, ಒಂದಿಲ್ಲೊಂದು ವಿಶೇಷತೆಗಳಿಂದ ಹಲ್​ಚಲ್​ ಎಬ್ಬಿಸ್ತಿದೆ. ಕಟೌಟ್​​ ದಾಖಲೆ ಒಂದ್ಕಡೆಯಾದ್ರೆ, ಮ್ಯೂಸಿಕ್​ ಡ್ಯಾನ್ಸ್​​​ ಮಿಲಿಯನ್​​ ವೀವ್ಸ್​ ದಾಖಲೆ ಮತ್ತೊಂದ್ಕಡೆ. ಇದ್ರ ಜತೆಯಲ್ಲಿ ಮ್ಯೂಸಿಕ್​ ಡ್ಯಾನ್ಸ್​​ ಕವರ್​ ವರ್ಷನ್​​ ಸಖತ್​ ಹೈಪ್​ ಕ್ರಿಯೇಟ್​ಮಾಡ್ತಿದೆ.

ರಮೇಶ್​ ಅರವಿಂದ್​ ಅಭಿನಯದ ಪುಷ್ಪಕ ವಿಮಾನ ಖ್ಯಾತಿಯ ರವೀಂದ್ರನಾಥ್​ ಮಾನ್ಸೂನ್​​ ರಾಗ ಚಿತ್ರಕ್ಕೆ ಆ್ಯಕ್ಷನ್ ಕಟ್​ ಹೇಳಿದ್ದಾರೆ. ವಿಖ್ಯಾತ್​​ ನಿರ್ಮಾಣದಲ್ಲಿ 60ರ ದಶಕದ ಕಥೆಯನ್ನು ಅದ್ಧೂರಿಯಾಗಿ ತೋರಿಸಲಾಗಿದೆ. ಅನೂಪ್​​ ಸೀಳಿನ್ ಸಂಗೀತ ಚಿತ್ರಕ್ಕಿದೆ. ಮ್ಯೂಸಿಕಲ್ ಹಿಟ್​ ಸಿನಿಮಾ ಇದಾಗಲಿದ್ದು, ಆಗಸ್ಟ್​ 19ಕ್ಕೆ ಥಿಯೇಟರ್​ ಸ್ಕ್ರೀನ್​ಗೆ ಮಾನ್ಸೂನ್​ ಎಫೆಕ್ಟ್​​ ತಗಲಲಿದೆ.

ರಾಕೇಶ್​ ಆರುಂಡಿ, ಫಿಲ್ಮ್​​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES