Monday, May 20, 2024

ನರಕಾಸುರನ ಅಟ್ಟಹಾಸಕ್ಕೆ ಸ್ಟನ್​ ಆದ ಸಿನಿಪ್ರಿಯರು

ಟೈಗರ್​ ಟಾಕೀಸ್​​ ಬ್ಯಾನರ್​ ಅಡಿಯಲ್ಲಿ ಮೊದಲ ಬಾರಿಗೆ ನಿರ್ಮಾಣಕ್ಕೆ ಕೈ ಹಾಕಿರುವ ಮರಿಟೈಗರ್​​​ ಲಂಕಾಸುರನಾಗಿ ಅಬ್ಬರಿಸ್ತಿದ್ದಾರೆ. ಗಡ್ಡ ಬಿಟ್ಟು ರಗಡ್​​​​ ಲುಕ್​​​ನಲ್ಲಿ ಘರ್ಜಿಸುತ್ತಿದ್ದ ಟೈಗರ್​​​ ನೋಡಿ ಯಾರಿವ ಅಂತಾ ಎಲ್ಲರೂ ಬಾಯಲ್ಲಿ ಬೆರಳಿಟ್ಟುಕೊಂಡಿದ್ದರು. ಇದೀಗ ಲಂಕಾಧಿಪತಿಯ ಟೈಟಲ್​ ಟ್ರ್ಯಾಕ್​​ ರಿಲೀಸ್​ ಆಗಿದ್ದು ಲಂಕಾಸುರನ ಗತ್ತು ಗಾಂಭೀರ್ಯ ಎಂತದ್ದು ಅನ್ನೋದನ್ನು ತೋರಿಸಿದೆ.

  • ಬಿಸಿ ರಕ್ತವ ಹೀರುವ ರಕ್ತಾಸುರ ಈ ಲಂಕಾಸುರ..!

ಸ್ಯಾಂಡಲ್​ವುಡ್​ ಮರಿಟೈಗರ್​ ಯಾರು ಅಂತಾ ನಿಮಗೆಲ್ಲಾ ಗೊತ್ತೆ ಇದೆ. ಟೈಗರ್ ಪ್ರಭಾಕರ್​ ಅವರ  ಪುತ್ರ ವಿನೋದ್​​ ಪ್ರಭಾಕರ್​ ಮರಿಟೈಗರ್​ ಅವತಾರದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ರು. ಅವರ ಅಜಾನುಬಾಹು ದೇಹ, ರಗಡ್​ ವಾಯ್ಸ್​​​, ಎದೆಯುಬ್ಬಿಸಿ ಗಜಗಾಂಭೀರ್ಯದೊಂದಿಗೆ ನಡೆದು ಬರೋ ಸ್ಟೈಲ್​​ ಎಲ್ಲವೂ ಕನ್ನಡಿಗರ ಮನಸೆಳೆಯುವಂತೆ ಮಾಡಿದೆ. ಅವರ ಫಿಟ್​​​ನೆಸ್​​ಗೆ , ಅದ್ಭುತ ಆ್ಯಕ್ಟಿಂಗ್​​ಗೆ ಬ್ರೇಕ್​​ ಕೊಡೋ ಸಿನಿಮಾಗಳು ಬಂದಿರಲಿಲ್ಲ. ಇದೀಗ ಅವರ ಬ್ಯಾನರ್​​​ನಲ್ಲಿ ಲಂಕಾಸುರ ತೆರೆಗೆ ಬರೋಕೆ ಸಜ್ಜಾಗಿದೆ.

ವಿನೋದ್​ ಪ್ರಭಾಕರ್​ ಅವರ ಪತ್ನಿ ನಿಶಾ ವಿನೋದ್​ ಪ್ರಭಾಕರ್​ ಮೊದಲ ಬಾರಿಗೆ ಲಂಕಾಸುರ ಚಿತ್ರದ ಮೂಲಕ ನಿರ್ಮಾಪಕಿಯಾಗಿ ಸ್ಯಾಂಡಲ್​ವುಡ್​​ಗೆ ಎಂಟ್ರಿ ಕೊಟ್ಟಿದ್ದಾರೆ. ಟೈಗರ್​​ ಟಾಕೀಸ್​ ಸಂಸ್ಥೆಯ ಚೊಚ್ಚಲ ಸಿನಿಮಾ ಲಂಕಾಸುರ ಚಿತ್ರದ ಟೀಸರ್​ ರಿಲೀಸ್​ ಮಾಡಿದ್ದ ಕ್ರೇಜಿಸ್ಟಾರ್​​ ರವಿಚಂದ್ರನ್​​ ಸಿನಿಮಾಗೆ ಶುಭ ಹಾರೈಸಿ ಗುಡ್​​​ಲಕ್​​ ತಿಳಿಸಿದ್ದರು. ಟೀಸರ್​ ಎಫೆಕ್ಟ್​​ಗೆ ಸ್ಟನ್​ ಆಗಿದ್ದ ಚಿತ್ರಪ್ರೇಮಿಗಳಿಗೆ ಮತ್ತೊಂದು ಸರ್ಪ್ರೈಸಿಂಗ್​​ ನ್ಯೂಸ್​ ಸಿಕ್ಕಿದೆ. ಲಂಕಾಸುರ ಟೈಟಲ್​ ಟ್ರ್ಯಾಕ್​ ರಿಲೀಸ್​ ಆಗಿದ್ದು, ಬಿಜಿಎಮ್​​ ಸೌಂಡ್​ಗೆ ಫಿದಾ ಆಗಿದ್ದಾರೆ.

  • ಮಾಡರ್ನ್​ ಲಂಕಾಧಿಪತಿ ಗೆಟಪ್​​ನಲ್ಲಿ ವಿನೋದ್​​​
  • ಅಣ್ಣ ಗನ್​​ ಹಿಡಿದು ನಿಂತ ಅಂದ್ರೆ ಭಸ್ಮಾಸುರ..!

ಯೆಸ್​​​​​.. ವಿನೋದ್​ ಪ್ರಭಾಕರ್​ ನ್ಯೂ ಲುಕ್​​​​, ಗೆಟಪ್​​, ಟೀಸರ್​​ನಲ್ಲಿ ಅವ್ರ ಆ್ಯಕ್ಷನ್​ ಸೀನ್ಸ್​​ ನೋಡಿದವ್ರಿಗೆ ಹೀಗೊಂದು ಅನುಮಾನ ಶುರುವಾಗಿದೆ. ಈ ಸಿನಿಮಾ ಆರ್ಡಿನರಿ ಕಥೆಯಲ್ಲ. ಆರ್ಮುಗಂ ರವಿಶಂಕರ್​​​, ಡೈನಾಮಿಕ್​ ಸ್ಟಾರ್​​ ದೇವರಾಜ್​​ ಕಾಂಬಿನೇಷನ್​​ ನಡುವೆ ಲಂಕಾಸುರನ ಅಸಲಿ ಕಥೆ ಬೇರೆ ಇದೆ ಅನಿಸುತ್ತೆ. ಈ ನಡುವೆ ಟೈಟಲ್​ ಟ್ರ್ಯಾಕ್​​​ ಸಿನಿಮಾಗೆ ಬಿಗ್​​ ಬ್ರೇಕ್​ ಕೊಟ್ಟಿದ್ದು ಚಿತ್ರರಸಿಕರಿಗೆ  ರೋಮಾಂಚನವಾಗಿದೆ. ಜೇಮ್ಸ್​ ಡೈರೆಕ್ಟರ್​ ಚೇತನ್​ಕುಮಾರ್​ ಅವರ ಸಾಹಿತ್ಯದಲ್ಲಿ ಹಾಡು ರಣರೋಚಕವಾಗಿದೆ.

ಅಣ್ಣ ಗನ್​ ಹಿಡಿದು ನಿಂತ ಅಂದ್ರೆ ಭಸ್ಮಾಸುರ, ಲಾಂಗ್​ ಹಿಡಿದು ನಡ್ಕೊಂಡು ಬಂದ್ರೆ ಲಂಕಾಸುರ ಅನ್ನೋ ಆರಂಭದ ಸಾಲುಗಳು ಥ್ರಿಲ್ಲಿಂಗ್​ ಫೀಲ್​ ಕೊಡುತ್ತವೆ. ಹಾಡಿನ ಪೂರ್ತಿ ಈ ರೀತಿಯ ಮೈ ನವಿರೇಳಿಸುವ ಸಾಲುಗಳಿದ್ದು ಮ್ಯೂಸಿಕ್​​ ಎಕ್ಸ್​​​​ಟ್ರಾ ಕಿಕ್​​ ಕೊಡುತ್ತದೆ. ಅಂತೂ ನಿರೀಕ್ಷೆ ಮಾಡಿದಂತೆ ಲಂಕಾಸುರನ ಹಾವಳಿ ಡಬಲ್​ ಆಗಿದೆ. ಎದುರಾಳಿಗಳ ಎದೆಸೀಳೋಕೆ ಹತ್ತು ತಲೆಯ ಲಂಕಾಧಿಪತಿ ಕಾಲು ಕೆರೆದು ನಿಂತಿದ್ದಾನೆ.  ವಿಜೇತ ಕೃಷ್ಣ ಅವ್ರ ದನಿಯಲ್ಲಿ ಟೈಟಲ್​​ ಟ್ರ್ಯಾಕ್​ ಮತ್ತೆ ಮತ್ತೆ ಕೇಳ್ಬೇಕು ಅನಿಸುತ್ತೆ.

ಲಂಕಾಸುರ ಚಿತ್ರದ ಪೋಸ್ಟರ್​, ಟೀಸರ್​, ಟೈಟಲ್​ ಟ್ರ್ಯಾಕ್​​ ಎಲ್ಲವೂ ಸಖತ್​​ ಇಂಪ್ರೆಸ್ಸಿವ್ ಆಗಿದ್ದು, ಬೆಳ್ಳಿ ತೆರೆಯ ಮೇಲೆ ವಿನೋದ್​ ಪ್ರಭಾಕರ್​ ಆರ್ಭಟ ನೋಡೋಕೆ ಕೊಂಚ ಕಾಯಲೇಬೇಕು. ಇದ್ರ ಜತೆಗೆ ಈ ಸಿನಿಮಾದಲ್ಲಿ ಲೂಸ್​ ಮಾದ ಯೋಗಿ ಕೂಡ ಮರಿಟೈಗರ್​ಗೆ ಸಾಥ್​ ಕೊಟ್ಟಿದ್ದಾರೆ. ಡೈನಾಮಿಕ್​ ಸ್ಟಾರ್​ ದೇವರಾಜ್​​​, ರವಿಶಂಕರ್​ ಸೇರಿ ಅನೇಕ ಕಲಾವಿದರ ಸಂಗಮವಿದೆ. ವಿಜೇತ ಕೃಷ್ಣ ಮ್ಯೂಸಿಕ್​ ಕಂಪೋಸಿಂಗ್​​, ಪ್ರಮೋದ್​​ ಕುಮಾರ್​​ ನಿರ್ದೇಶನ, ಸುಗ್ನಾನ್​​ ಕ್ಯಾಮೆರಾ ಕಣ್ಣಲ್ಲಿ ಸಿನಿಮಾ ಅದ್ಧೂರಿಯಾಗಿ ಮೂಡಿ ಬರಲಿದೆ. ಸದ್ಯ ಎಲ್ಲೆಲ್ಲೂ ಲಂಕಾಸುರ ಟೈಟಲ್​ ಟ್ರ್ಯಾಕ್​​ ಟಾಕ್​ ಆಫ್​ ದಿ ಟೌನ್​ ಆಗಿದೆ.

ರಾಕೇಶ್​ ಅರುಂಡಿ, ಫಿಲ್ಮ್​​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES