Monday, December 23, 2024

ಯಂಗ್ ಟೈಗರ್ ಮಾಸ್ ಅವತಾರಕ್ಕೆ ಸ್ಟನ್​ ಆದ ಸಿನಿಪ್ರಿಯರು

ಟೈಗರ್​ ಟಾಕೀಸ್​​ ಬ್ಯಾನರ್​ನಡಿ ಮೊದಲ ಬಾರಿಗೆ ನಿರ್ಮಾಣಕ್ಕೆ ಕೈ ಹಾಕಿರೋ ಸ್ಯಾಂಡಲ್​ವುಡ್ ಯಂಗ್​ಟೈಗರ್,​​​ ಲಂಕಾಸುರನಾಗಿ ಅಬ್ಬರಿಸ್ತಿದ್ದಾರೆ. ಗಡ್ಡ ಬಿಟ್ಟು, ರಗಡ್​​​​ ಲುಕ್​​​ನಲ್ಲಿ ಘರ್ಜಿಸುತ್ತಿದ್ದ ಟೈಸನ್​ನ​​​ ನೋಡಿ, ಯಾರಿವ ಅಂತ ಎಲ್ರೂ ಹುಬ್ಬೇರಿಸಿದ್ರು. ಇದೀಗ ಲಂಕಾಧಿಪತಿಯ ಟೈಟಲ್​ ಟ್ರ್ಯಾಕ್​​ ರಿಲೀಸ್​ ಆಗಿದ್ದು, ಲಂಕಾಸುರನ ಗತ್ತು ಗಾಂಭೀರ್ಯ ಎಂಥದ್ದು ಅನ್ನೋದನ್ನ ನೀವೇ ನೋಡಿ.

ಹುಲಿಯ ಬಿಂಬ.. ರಾಕ್ಷಸ ಜಂಬ.. ಜಗಮಗಿಸಿದ ಲಂಕಾಸುರ

ಯಂಗ್ ಟೈಗರ್ ಮಾಸ್ ಅವತಾರಕ್ಕೆ ಸ್ಟನ್​ ಆದ ಸಿನಿಪ್ರಿಯರು

ಸ್ಯಾಂಡಲ್​ವುಡ್​ ಮರಿಟೈಗರ್​ ಯಾರು ಅಂತ ನಿಮಗೆಲ್ಲಾ ಗೊತ್ತೇ ಇದೆ. ಟೈಗರ್ ಪ್ರಭಾಕರ್​ ಅವರ ಪುತ್ರ ವಿನೋದ್​​ ಪ್ರಭಾಕರ್​ ಮರಿಟೈಗರ್​ ಅವತಾರದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ರು. ಅವರ ಅಜಾನುಬಾಹು ದೇಹ, ರಗಡ್​ ವಾಯ್ಸ್​​​, ಎದೆಯುಬ್ಬಿಸಿ ಗಜಗಾಂಭೀರ್ಯದೊಂದಿಗೆ ನಡೆದು ಬರೋ ಸ್ಟೈಲ್​​ ಎಲ್ಲವೂ ಸಿನಿಪ್ರೇಮಿಗಳ ಮನಸೆಳೆಯುವಂತೆ ಮಾಡಿದೆ.

ವಿನೋದ್​ ಪ್ರಭಾಕರ್​ ಅವರ ಪತ್ನಿ ನಿಶಾ ​ಮೊದಲ ಬಾರಿಗೆ ಲಂಕಾಸುರ ಚಿತ್ರದ ಮೂಲಕ ನಿರ್ಮಾಪಕಿಯಾಗಿ ಸ್ಯಾಂಡಲ್​ವುಡ್​​ಗೆ ಎಂಟ್ರಿ ಕೊಟ್ಟಿದ್ದಾರೆ. ಟೈಗರ್​​ ಟಾಕೀಸ್​ ಸಂಸ್ಥೆಯ ಚೊಚ್ಚಲ ಸಿನಿಮಾ ಲಂಕಾಸುರ ಚಿತ್ರದ ಟೀಸರ್​ ರಿಲೀಸ್​ ಮಾಡಿದ್ದ ಕ್ರೇಜಿಸ್ಟಾರ್​​ ರವಿಚಂದ್ರನ್,​​ ಶುಭ ಹಾರೈಸಿದ್ರು. ಇದೀಗ ಲಂಕಾಸುರ ಟೈಟಲ್​ ಟ್ರ್ಯಾಕ್​ ರಿಲೀಸ್​ ಆಗಿದ್ದು, ಬಿಜಿಎಮ್​​ ಸೌಂಡ್​ ಕಿವಿಗೆ ಮಸ್ತ್ ಮಜಾ ಕೊಡ್ತಿದೆ.

ಆರ್ಮುಗಂ ರವಿಶಂಕರ್​​​, ಡೈನಾಮಿಕ್​ ಸ್ಟಾರ್​​ ದೇವರಾಜ್​​ ಕಾಂಬಿನೇಷನ್​​ ನಡುವೆ ಲಂಕಾಸುರನ ಅಸಲಿ ಕಥೆ ಬೇರೆ ಇದೆ ಅನಿಸುತ್ತೆ. ಈ ನಡುವೆ ಟೈಟಲ್​ ಟ್ರ್ಯಾಕ್​​​ ಸಿನಿಮಾಗೆ ಬಿಗ್​​ ಹೈಪ್​ ಕೊಟ್ಟಿದ್ದು, ಚಿತ್ರರಸಿಕರಿಗೆ ರೋಮಾಂಚನವಾಗಿದೆ. ಜೇಮ್ಸ್​ ಡೈರೆಕ್ಟರ್​ ಚೇತನ್​ಕುಮಾರ್​ ಅವರ ಸಾಹಿತ್ಯದಲ್ಲಿ ಹಾಡು ಮೂಡಿಬಂದಿದೆ.

ಅಣ್ಣ ಗನ್​ ಹಿಡಿದು ನಿಂತ ಅಂದ್ರೆ ಭಸ್ಮಾಸುರ, ಲಾಂಗ್​ ಹಿಡಿದು ನಡ್ಕೊಂಡ್ ಬಂದ್ರೆ ಲಂಕಾಸುರ ಅನ್ನೋ ಆರಂಭದ ಸಾಲುಗಳು ಥ್ರಿಲ್ಲಿಂಗ್​ ಫೀಲ್​ ಕೊಡಲಿವೆ. ಎದುರಾಳಿಗಳ ಎದೆಸೀಳೋಕೆ ಹತ್ತು ತಲೆಯ ಲಂಕಾಧಿಪತಿ ಕಾಲು ಕೆರೆದು ನಿಂತಿದ್ದಾನೆ. ವಿಜೇತ ಕೃಷ್ಣ ಅವ್ರ ದನಿಯಲ್ಲಿ ಟೈಟಲ್​​ ಟ್ರ್ಯಾಕ್​ ಮತ್ತೆ ಮತ್ತೆ ಕೇಳ್ಬೇಕು ಅನಿಸುತ್ತೆ.

ಸಿನಿಮಾದಲ್ಲಿ ಲೂಸ್​ ಮಾದ ಯೋಗಿ ಕೂಡ ಮರಿಟೈಗರ್​ಗೆ ಸಾಥ್​ ಕೊಟ್ಟಿದ್ದಾರೆ. ವಿಜೇತ ಕೃಷ್ಣ ಮ್ಯೂಸಿಕ್​ ಕಂಪೋಸ್​​, ಪ್ರಮೋದ್​​ ಕುಮಾರ್​​ ನಿರ್ದೇಶನ, ಸುಜ್ಞಾನ್​​ ಕ್ಯಾಮೆರಾ ಕಣ್ಣಲ್ಲಿ ಸಿನಿಮಾ ಅದ್ಧೂರಿಯಾಗಿ ಮೂಡಿ ಬರ್ತಿದೆ. ಸದ್ಯ ಎಲ್ಲೆಲ್ಲೂ ಲಂಕಾಸುರ ಟೈಟಲ್​ ಟ್ರ್ಯಾಕ್​​ ಧೂಳೆಬ್ಬಿಸ್ತಿದೆ.

ರಾಕೇಶ್​ ಅರುಂಡಿ, ಫಿಲ್ಮ್​​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES