ಬೆಂಗಳೂರು : ಚಾಮರಾಜಪೇಟೆ ಮೈದಾನ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಲ್ಲೇ ಇದ್ದು, ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿ ಪ್ರಧಾನಿ ಮೋದಿ ಕಚೇರಿ ಕದ ತಟ್ಟಲಿದೆ.
ಇದೀಗ ಮತ್ತೊಂದು ಹೋರಾಟಕ್ಕೆ ರೆಡಿ ಆದ ಚಾಮರಾಜಪೇಟೆ ನಾಗರೀಕರು ಒಕ್ಕೂಟ. ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿ ಪ್ರಧಾನಿ ಮೋದಿ ಕಚೇರಿ ಕದ ತಟ್ಟಲಿದೆ. ರಾಜ್ಯ ಸರ್ಕಾರ ಯಾವುದೇ ನಿರ್ಣಯಕ್ಕೆ ಬಾರದ ಹಿನ್ನಲೆ ಬೇಸರಗೊಂಡು ಪ್ರಧಾನಿ ಭೇಟಿಗೆ ನಾಗರಿಕರ ಒಕ್ಕೂಟ ತರಳಿದೆ.
ಇನ್ನು, ಈಗಾಗಲೆ ರಾಜ್ಯಪಾಲರಿಗೆ, ಸರ್ಕಾರದ ಸಿಎಎಸ್ ಗೂ ಸಮಸ್ಯೆ ಬಗೆಹರಿಸುವಂತೆ ಮನವಿ ನೀಡಿರೋ ಚಾಮರಾಜಪೇಟೆ ನಿವಾಸಿಗಳು. ಒಕ್ಕೂಟದ ಮನವಿ ಹಿನ್ನಲೆ ಬಿಬಿಎಂಪಿ ಜಂಟಿ ಆಯುಕ್ತರಿಗೆ ಸರ್ಕಾರದ ಸಿಎಸ್ ಮೇಲ್ ಹಾಕಿದ್ದಾರೆ.
ಚಾಮರಾಜಪೇಟೆ ಸಮಸ್ಯೆ ಇತ್ಯರ್ಥ ಮಾಡುವಂತೆ ಜಂಟಿ ಆಯುಕ್ತ ಶ್ರೀನಿವಾಸ್ಗೆ ಸಿಎಸ್ ಮೇಲ್ ಹಾಕಿದ್ದು, ರಕ್ತ ಕೊಟ್ಟೆವು ಮೈದಾನ ಬಿಡೆವು ಎಂಬ ಹೋರಾಟ ನಡೆಸಲು ರಕ್ತದಾನ ಅಭಿಯಾನಕ್ಕೆ ಒಕ್ಕೂಟ ನಿರ್ಧಾರ ಮಾಡಿದ್ದು, ರಕ್ತದಾನ ಅಭಿಯಾನದಲ್ಲಿ ಚಾಮರಾಜಪೇಟೆಯ ಸಾವಿರಾರು ನಾಗರೀಕರು ಭಾಗಿಯಾಗುವ ಸಾಧ್ಯತೆ ಇದೆ.