ಹಾಸನ: ಒಂದ್ಕಡೆ ಕಲುಷಿತ ಆಹಾರ ಸೇವಿಸಿ 25 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ರೆ. ಇನ್ನೊಂದೆಡೆ ಕಲುಷಿತ ನೀರು ಕುಡಿದು ಬಾಲಕಿ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ. ಪದೇ ಪದೇ ಕಲುಷಿತ ನೀರಿನಿಂದ, ಆಹಾರದಿಂದ ಪ್ರಾಣಪಕ್ಷಿಗಳು ಹಾರಿ ಹೋಗ್ತಿರೋದ್ಯಾಕೆ..?
ನಿನ್ನೆ ರಾತ್ರಿ ಊಟ ಮಾಡಿದ ಬಳಿಕ 25 ವಿದ್ಯಾರ್ಥಿಗಳು ವಾಂತಿ, ಸುಸ್ತು, ತಲೆ ಸುತ್ತಿನಿಂದ ಅಸ್ವಸ್ಥರಾಗಿರುವ ಘಟನೆ ಹಾಸನ ಜಿಲ್ಲೆ ಆಲೂರಿನ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ನಡೆದಿದೆ. ಕಲುಷಿತ ಆಹಾರ ಸೇವಿಸಿ 25 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು, ಆಲೂರು ತಾಲ್ಲೂಕಾಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.
ಏನೇ ಆದರೂ ಹೋದ ಜೀವವಂತೂ ಮರಳಿ ಬರಲ್ಲ. ಕೂಡಲೇ ಆಯಾ ಜಿಲ್ಲಾಡಳಿತಗಳು ಎಚ್ಚೆತ್ತು ಇಂಥಾ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕಾಗಿದೆ.
ಬಳ್ಳಾರಿ : ಕಲುಷಿತ ನೀರು ಕುಡಿದು ಬಾಲಕಿ ಸಾವು
ರಾಜ್ಯದಲ್ಲಿ ಕಲುಷಿತ ನೀರಿನ ಅವಾಂತರಗಳು ಮುಂದುವರಿದಿವೆ.ಆರು ತಿಂಗಳ ಹಿಂದೆ ವಿಜಯನಗರ ಜಿಲ್ಲೆಯ ಮಕರಬ್ಬಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು 8 ಜನ ಸಾವನ್ನಪ್ಪಿದ್ರು. ಇದೀಗ ಬಳ್ಳಾರಿ, ಹಾಸನ ಸರದಿ ಆರಂಭವಾಗಿದೆ. ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಗೋನಾಳ ಗ್ರಾಮದಲ್ಲಿ ಕಲುಷಿತ ನೀರು ಕುಡಿದು 11 ವರ್ಷದ ಬಾಲಕಿ ಸುಕನ್ಯಾ ಸಾವನ್ನಪ್ಪಿದ್ದಾಳೆ. ಗ್ರಾಮದ 20ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ.ಗ್ರಾಮದ ಶಾಲೆಯಲ್ಲಿಯೇ ತಾತ್ಕಾಲಿಕ ಆಸ್ಪತ್ರೆ ತೆರೆದು ಚಿಕಿತ್ಸೆ ನೀಡಲಾಗ್ತಿದೆ.
ಇನ್ನು ಇತ್ತೀಚೆಗೆ ಸುರಿದ ಮಳೆಯಿಂದಾಗಿ ನಾರಿಹಳ್ಳದಲ್ಲಿ ನೀರು ಹರಿದಿದೆ. ಇದೇ ನೀರನ್ನು ಗ್ರಾಮಪಂಚಾಯತಿಯವರು ಸರಬರಾಜು ಮಾಡಿದ್ದೇ ಈ ಘಟನೆಗೆ ಕಾರಣ ಎನ್ನೋದು ಗ್ರಾಮಸ್ಥರ ಆರೋಪವಾಗಿದೆ. ಇನ್ನೂ ಗ್ರಾಮಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಲಿಂಗಮೂರ್ತಿ ಸೇರಿದಂತೆ ಡಿಹೆಚ್ಒ ನೇತೃತ್ವದಲ್ಲಿ ವೈದ್ಯಾಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದೆ.
ಬಳ್ಳಾರಿಯಿಂದ ಬಸವರಾಜ ಹರನಹಳ್ಳಿ ಜೊತೆ ಸಚಿನ್ ಪವರ್ ಟಿವಿ ಹಾಸನ
ವಿಜಯನಗರ ಬೆನ್ನಲ್ಲೇ ಬಳ್ಳಾರಿ, ಹಾಸನ ಸರದಿ