Sunday, December 22, 2024

‘ಅಪ್ಪು’ ಪುತ್ಥಳಿಗೆ ನಮಿಸಿದ ಯುವರಾಜ್

ಹೊಸಪೇಟೆ : ಕರುನಾಡಿನಾದ್ಯಂತ ಪುನೀತ್​ ರಾಜ್​ಕುಮಾರ್​ ಅವರಿಗೆ ಅಭಿಮಾನಿಗಳಿದ್ದಾರೆ. ಹೊಸಪೇಟೆ ಮಂದಿಗೂ ಅಪ್ಪು ಎಂದರೆ ಅಚ್ಚುಮೆಚ್ಚು. ಜೂನ್​ ಮೊದಲ ವಾರದಲ್ಲಿ ಪುನೀತ್​ ರಾಜ್​ಕುಮಾರ್​ ಅವರ ಕಂಚಿನ ಪತ್ಥಳಿಯನ್ನು ಹೊಸಪೇಟೆಯಲ್ಲಿ ಅನಾವರಣ ಮಾಡಲಾಗಿತ್ತು.

ಈಗ ಯುವ ರಾಜ್​ಕುಮಾರ್​ ಅವರು ಅಲ್ಲಿಗೆ ತೆರಳಿ ಅಪ್ಪು ಪುತ್ಥಳಿಗೆ ನಮಿಸಿದ್ದಾರೆ. ಮಧ್ಯರಾತ್ರಿ ಭೇಟಿ ನೀಡಿದ ಅವರನ್ನು ಹೊಸಪೇಟೆ ಜನತೆ ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಅಭಿಮಾನಿಗಳ ಜೊತೆ ಯುವ ರಾಜ್​ಕುಮಾರ್​ ಅವರು ಒಂದಷ್ಟು ಹೊತ್ತು ಕಾಲ ಕಳೆದಿದ್ದಾರೆ. ಅಲ್ಲಿ ನೆರೆದಿದ್ದ ಅಭಿಮಾನಿಗಳು ಯುವರಾಜ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಖುಷಿ ಪಟ್ಟಿದ್ದಾರೆ.

RELATED ARTICLES

Related Articles

TRENDING ARTICLES