ಬೆಂಗಳೂರು : ಊರ ಹಬ್ಬಕ್ಕೆ ಸಿದ್ಧವಾಗಿದ್ದ ಪೀಣ್ಯ ಫಸ್ಟ್ ಸ್ಟೇಜ್ ಇನ್ನೇನು ಕೆಲವೇ ಕ್ಷಣ ಹಬ್ಬದ ಸಂಭ್ರಮದ ಕಳೆ ತುಂಬುತ್ತಿತ್ತು ಅದರೆ ಊರ ಆಂತರಿಕ ಜಗಳ ಸಾಕಷ್ಟು ಗ್ರಾಮಸ್ಥರ ಭಾವನೆಗೆ ಪೆಟ್ಟು ಬಿದ್ದಿದೆ.
ಇದು ಹಬ್ಬ ಮಾಡಲು ನಿರ್ಣಯಿಸಿದ ಕಮಿಟಿ ತಪ್ಪೋ? ಅಥವಾ ಹಬ್ಬ ಮಾಡಲು ಬಂದ ಜನರ ತಪ್ಪೋ. ಸಾರ್ವಜನಿಕರ ಪ್ರಶ್ನೆ. ಆದರೆ ಜುಲೈ 27 ವರೆಗೆ ಆಂಜನೇಯನ ಹಬ್ಬ ನಡೆಯಬೇಕಿತ್ತು. ಗ್ರಾಮದ ಒಳಗೆಯೇ ಎರಡು ಪಂಗಡ ನಿರ್ಮಾಣ ಆದ ಕಾರಣ ಹಬ್ಬವೂ ಇಲ್ಲ ಸಂಭ್ರಮವೂ ಇಲ್ಲದಂತಾಗಿದೆ. ವಿವಿಧ ಅಲಂಕಾರಗಳಿಂದ, ಶ್ರಂಗಾರಗಳಿಂದ , ಆರತಿಯಿಂದ ಕಂಗೊಳಿಸಬೇಕಿದ್ದ ಆಂಜನೇಯ ಊರು ಜನ್ರ ಜಗಳದಿಂದ ಬೀಗ ಜಡಿದ ಗುಡಿಯೊಳಗೆ ಮೂಕ ಸಾಕ್ಷಿಯಾಗಿದ್ದಾನೆ.
ಹಬ್ಬಕ್ಕೆ ಬ್ರೇಕ್ ಬೀಳಲು ಕಾರಣ ಏನು?
– ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಊರಲ್ಲಿ ಏಕಾಏಕಿ ಹಬ್ಬದ ದಿನಾಂಕ ಘೋಷಣೆ
– ಊರಲ್ಲಿರುವ ವಿವಿಧ ಸಂಘಟನೆ ಜೊತೆಗೆ ಚರ್ಚೆ ಮಾಡದೇ ದಿನಾಂಕ ಘೋಷಣೆ ಮಾಡಿರೋ ಆರೋಪ
– ಈ ಹಿನ್ನಲೆ ಹಬ್ಬ ಮಾಡಬಾರದು ಅಂತಾ ಇನ್ನೊಂದು ಗುಂಪು ಕೋರ್ಟ್ ಮೆಟ್ಟಿಲೇರಿದೆ
– ಕೋರ್ಟ್ ಅಲ್ಲಿ ಕೇಸ್ ಖುಲಾಸೆ ಆದ್ರೂ ಕೂಡ ಮತ್ತೆ ಇನ್ನೊಂದು ಕೇಸ್ ದಾಖಲು
– ಈ ಬೆನ್ನಲ್ಲೇ ತಹಶೀಲ್ದಾರ್ ಕಡೆಯಿಂದ ಸಂಧಾನ ಸಭೆಗೆ ಯತ್ನ
– ಏನು ಪ್ರಯೋಜನ ಆಗದ ಹಿನ್ನಲೆ ಹಬ್ಬ ನಡೆಸಲು ಸಾಧ್ಯವಾಗಿಲ್ಲ
– ಸ್ಥಳದಲ್ಲಿ ಪೊಲೀಸರ ಬಿಗಿ ಭದ್ರತೆ, ಜನರನ್ನ ಚದುರಿಸುವ ಯತ್ನ ಮಾಡಿದ ಪೊಲೀಸ್
– ನಮ್ಮ ಮನಸ್ಸಿಗೆ ಪೆಟ್ಟು ಕೊಟ್ಟಿದೆ, ಊರ ಹಬ್ಬ ನಡೆಯಲೇ ಬೇಕು ಅಂತ ಮಹಿಳಾ ಮಣಿಯರ ಆಗ್ರಹ
– ಇನ್ನೊಂದು ಕಡೆ ಸಂಬಂಧಿಕರನ್ನು ನೆಂಟರನ್ನ ಹಬ್ಬಕ್ಕೆ ಕರೆದಿದ್ವಿ ಆದ್ರೆ ಹಬ್ಬವೇ ನಡೀತಿಲ್ವಲ್ಲ ಅಂತ ಬೇಸರ ಗ್ರಾಮಸ್ಥರ ಅಳಲು
– ಪೂಜೆಗೆ ಅಣಿಯಾಗಿದ್ದ ದೇವರಿಗೆ ಬೀಗ ಹಾಕಿದ್ರೆ ಒಳ್ಳೆಯದಾಗ್ತದ ಊರಿಗೆ ಕೆಡುಕು ಅಂತ ಹಿಡಿ ಶಾಪ ಹಾಕ್ತೀರೋ ಹಿರಿಯ ಜೀವ