Monday, December 23, 2024

ಭಾರತ ಸೇರಿ 74 ದೇಶದಲ್ಲಿ 16,000 ಕೇಸ್‌ ಪತ್ತೆ

ಭಾರತ ಸೇರಿ 74 ರಾಷ್ಟ್ರಗಳಲ್ಲಿ ಮಂಕಿಪಾಕ್ಸ್‌ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈ ವ್ಯಾಧಿಯನ್ನು ‘ಜಾಗತಿಕ ತುರ್ತು ಪರಿಸ್ಥಿತಿ’ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ.

WHO ತುರ್ತು ಸಮಿತಿಯ ಸದಸ್ಯರ ಒಮ್ಮತದ ಕೊರತೆಯ ನಡುವೆಯೇ ಮಹಾ ನಿರ್ದೇಶಕ ಟೆಡ್ರೋಸ್‌ ಅಧಾನೋಮ್‌ ಘೋಷಣೆ ಮಾಡಿದ್ದಾರೆ. WHO ಮುಖ್ಯಸ್ಥರು ಒಮ್ಮತದ ಕೊರತೆ ನಡುವೆ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ಈವರೆಗೆ ಭಾರತದಲ್ಲಿ 3 ಕೇಸ್ ಸೇರಿದಂತೆ ಒಟ್ಟಾರೆ ಜಗತ್ತಿನಲ್ಲಿ 16,000ಕ್ಕೂ ಹೆಚ್ಚು ಮಂಕಿಪಾಕ್ಸ್‌ ಕೇಸುಗಳು 74 ದೇಶಗಳಲ್ಲಿ ಪತ್ತೆಯಾಗಿವೆ. ಈವರೆಗೆ ಮಂಕಿಪಾಕ್ಸ್‌ನಿಂದಾಗಿ 5 ಜನರು ಮೃತಪಟ್ಟಿದ್ದಾರೆ.

‘ಮಂಕಿಪಾಕ್ಸ್‌ ಸೋಂಕು ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ವೇಗವಾಗಿ, ಬೇರೆ ಬೇರೆ ವಿಧಾನಗಳ ಮೂಲಕ ಹರಡುತ್ತಿದೆ. ದಶಕಗಳಿಂದಲೂ ಕೇಂದ್ರ & ದಕ್ಷಿಣ ಆಫ್ರಿಕಾದಲ್ಲಿ ಮಾತ್ರ ಕಂಡುಬರುತ್ತಿದ್ದ ಮಂಕಿಪಾಕ್ಸ್‌, ಮೇ ತಿಂಗಳ ನಂತರ ಯುರೋಪ್‌, ಉತ್ತರ ಅಮೆರಿಕ ಸೇರಿದಂತೆ ಜಗತ್ತಿನ ವಿವಿಧ ಭಾಗದಲ್ಲಿ ಪತ್ತೆಯಾಗುತ್ತಿದೆ.. ಹೀಗಾಗಿ ಇದು ಜಾಗತಿಕ ತುರ್ತು ಪರಿಸ್ಥಿತಿ ಘೋಷಣೆಯ ‘ಅಂತಾರಾಷ್ಟ್ರೀಯ ಆರೋಗ್ಯ ನಿಯಮಗಳಲ್ಲಿನ ಮಾನದಂಡ’ವನ್ನು ಪೂರೈಸುತ್ತದೆ’ ಎಂದು ಟೆಡ್ರೋಸ್‌ ಹೇಳಿದ್ದಾರೆ.

RELATED ARTICLES

Related Articles

TRENDING ARTICLES