Wednesday, January 22, 2025

ಅನ್ನಭಾಗ್ಯ ಅಕ್ಕಿ ಹೊರ ರಾಜ್ಯಕ್ಕೆ ಸಾಗಾಟ

ಬಳ್ಳಾರಿ : ರಾಜ್ಯಾದ್ಯಂತ ‘ಹೊಟ್ಟೆಗೆ ಏನ್ ತಿಂತೀರಿ’ ಪವರ್ ಟಿವಿ​ ಸ್ಟಿಂಗ್​​ ಆಪರೇಷನ್​ ಸಂಚಲನ ಸೃಷ್ಟಿಸಿದ್ದು, ಪವರ್​ ಟಿವಿ ಕಾರ್ಯಾಚರಣೆ ಬಳಿಕ ಕಾಳಸಂತೆಕೋರರಿಗೆ ನಡುಕ​ ಶುರುವಾಗಿದ್ದು, ಅನ್ನಭಾಗ್ಯದ ಅಕ್ಕಿಯನ್ನು ಹೊರ ರಾಜ್ಯಕ್ಕೆ ಸಾಗಿಸೋ ಜಾಲ ಬಳ್ಳಾರಿಯ ಕಂಪ್ಲಿಯಲ್ಲಿ ಪತ್ತೆಯಾಗಿದೆ. ಕಂಪ್ಲಿ ಶಾಸಕ ಜೆ.ಎನ್ ಗಣೇಶ್​ ರಾತ್ರೋ ರಾತ್ರಿ‌ ದಾಳಿ ಮಾಡಿ ಜಾಲವನ್ನು ಪತ್ತೆ ಮಾಡಿದ್ದಾರೆ.

ಕೋಳಿ‌ ಫಾರಂ ಒಳಗೆ ನಡೆಯುತ್ತದೆ ಅನ್ನಭಾಗ್ಯ ಅಕ್ಕಿಗೆ ಕನ್ನ ಹಾಕೋ ಕೆಲಸ ನಡೆಯುತ್ತಿದ್ದು, ದಿನಕ್ಕೆ ಎರಡು ಲಾರಿ ಲೋಡ್ ಅಕ್ಕಿಯನ್ನು ಕಂಪ್ಲಿಯಿಂದ ತಮಿಳುನಾಡು ಗುಜರಾತ್ ಕಡೆ ಸಾಗಣೆ ಮಾಡಲಾಗುತ್ತಿದೆ. ಒಂದು ಲಾರಿಯಲ್ಲಿ ‌ನಾಲ್ಕು ನೂರು ಚೀಲ ಅಕ್ಕಿ ಸಾಗಾಟ ಮಾಡಲಾಗುತ್ತಿದ್ದು, ದಿನಕ್ಕೆ ಒಂದೂವರೆ ಲಕ್ಷ ಲಾಭ ಪಡೆಯೋ ಪ್ರಭಾವಿ ನಾಯಕ ಯಾರು ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ.

ಇನ್ನು, ದಾಳಿ ಮಾಡುತ್ತಿದ್ದಂತೆ ಸ್ಥಳದಿಂದ ಹಲವು ಖದೀಮರು ಓಡಿ ಹೋಗಿದ್ದಾರೆ. ಕನ್ನಡ ಭಾಷೆ ಬಾರದೇ ಇರೋರ‌‌ ಜೊತೆ ಖದೀಮರು ಕೆಲಸ ಮಾಡಿಸಿಕೊಳ್ಳುತ್ತಿದ್ದರು.ಇದರ ಹಿಂದೆ ಪ್ರಭಾವಿ ನಾಯಕರು ಇರೋ ಶಂಕೆಯಿದ್ದು, ಆದರೆ ಇಲ್ಲಿ ಕೆಲಸ ಮಾಡೋರಿಗೆ ಮಾಲೀಕರು ಯಾರು ಅನ್ನೋದೇ ಗೊತ್ತಿಲ್ಲ. ದಾಳಿ ಮಾಡಿದ ಬಳಿಕ ಬಂದ ಪೊಲೀಸರು ‌ಸಾವಿರಾರು ಚೀಲ ಅಕ್ಕಿ, ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ಎಲ್ಲವನ್ನೂ ವಶಕ್ಕೆ ಪಡೆದಿದ್ದಾರೆ.

RELATED ARTICLES

Related Articles

TRENDING ARTICLES