Friday, September 20, 2024

ಜಮೀರ್ ನನಗೆ ಆತ್ಮೀಯ ಸ್ನೇಹಿತ : ಶಾಸಕ ಚೆಲುವರಾಯಸ್ವಾಮಿ

ಬೆಂಗಳೂರು : ಸಿದ್ಧರಾಮಯ್ಯ ಸಿಎಂ ಆಗಬೇಕು ಅನ್ನೋದು ಬೇರೆ,ನನಗೂ ಪಕ್ಷದಲ್ಲಿ ಸ್ಥಾನಮಾನ ಸಿಗಬೇಕು ಅನ್ನೋದು ಬೇರೆ ಎಂದು ಮಾಜಿ ಶಾಸಕ ಚೆಲುವರಾಯಸ್ವಾಮಿ ಹೇಳಿದ್ದಾರೆ.

ಮುಂದಿನ ಸಿಎಂ ಸಿದ್ಧರಾಮಯ್ಯ ಎಂಬ ಶಾಸಕ ಜಮೀರ್ ಅಹಮದ್ ಖಾನ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸಿದ್ಧರಾಮಯ್ಯ ಸಿಎಂ ಆಗಬೇಕು ಅನ್ನೋದು ಬೇರೆ,ನನಗೂ ಪಕ್ಷದಲ್ಲಿ ಸ್ಥಾನಮಾನ ಸಿಗಬೇಕು ಅನ್ನೋದು ಬೇರೆ. ಒಕ್ಕಲಿಗ ಸಮಾಜಕ್ಕಿಂತ ಹೆಚ್ಚಿದೆ, ನಾನು ಡಿಮ್ಯಾಂಡ್ ಮಾಡ್ತೀನಿ ಅಂದಿದ್ದು ತಪ್ಪು. ಜಮೀರ್ ನನಗೆ ಆತ್ಮೀಯ ಸ್ನೇಹಿತನೇ, ನಾವೆಲ್ಲ ಒಂದು ಗುಂಪಿನಲ್ಲಿ ರಾಜಕರಣ ಮಾಡಿದವರು. ಅವನಿಗೆ ಪರ್ಸನಲ್ ಆಗಿ ಎರಡ್ಮೂರು ಸಲ ಹೇಳಿದೀನಿ, ಮತ್ತೊಮ್ಮೆ ಹೇಳಲು ಬಯಸ್ತೀನಿ. ಪಕ್ಷವನ್ನ ಅಧಿಕಾರಕ್ಕೆ ತರಲು ಬಹಳಷ್ಟು ಕಾರ್ಯಕರ್ತರು ಪ್ರಯತ್ನ ಮಾಡ್ತಿದ್ದಾರೆ ಎಂದರು.

ಇನ್ನು, ಸಿದ್ದರಾಮಯ್ಯ, ಡಿ.ಕೆ, ಖರ್ಗೆಯವರನ್ನಾಗಲಿ ನಾವ್ಯಾರೂ ಲೀಡರ್ಸ್ ಅಂತ ಹೇಳುವ ಅಗತ್ಯವಿಲ್ಲ. ನಾವು ಹೇಳೋದ್ಕಿಂತ ಮುಂಚೆಯೇ ಮಾಸ್ ಲೀಡರ್ಸ್ ಆಗಿ ಬೆಳೆದಿದ್ದಾರೆ, ಉನ್ನತ ಸ್ಥಾನದಲ್ಲಿದ್ದಾರೆ. ಒಕ್ಕಲಿಗ ಸಮಾಜದ ಬಗ್ಗೆ ಯಾರೂ ಈ ರೀತಿ ಮಾತನಾಡಿಲ್ಲ. ಒಕ್ಕಲಿಗ ಸಮಾಜವನ್ನ ಹೆಸರಿಸಿ ಮಾತನಾಡಿದ್ದು ತಪ್ಪು, ಮುಂದುವರೆಸುವುದು ಬೇಡ ಅಂತೀನಿ. ಸಿದ್ಧರಾಮಯ್ಯ ಸಿಎಂ ಆಗಲಿ ಅನ್ನೋದಕ್ಕೆ ಬದ್ಧರಿದ್ದಾರೆ, ಒಕ್ಕಲಿಗರಿಗಿಂತ ದೊಡ್ಡವರು ಅನ್ನೋದಕ್ಕೆ ಬದ್ಧರಿದ್ದಾರಾ? ಜಮೀರ್ ಬಹಳ ಬುದ್ಧಿವಂತ, ನಾವೆಲ್ಲ ಹಳ್ಳಿಯವರು, ಅವನು ನಗರದಲ್ಲಿ ಬೆಳೆದವನು. ಯಾವುದಾದರೂ ಅಜೆಂಡಾ ಇದೆಯಾ ಅಂತಾ ಅವನೇ ಹೇಳಬೇಕು ಎಂದು ಹೇಳಿದರು.

ಅದಲ್ಲದೇ, ಒಳ್ಳೆಯ ಸ್ನೇಹಿತ, ಇದನ್ನೆಲ್ಲಾ ಮುಂದುವರೆಸ್ಕೊಂಡು ಹೋಗಬಾರ್ದು ಅಂತೀನಿ. ಆರಂಭದಿಂದ ಅವನು ಹಿಂಗಿರ್ಲಿಲ್ಲ, ಈಗ ಕೆಲವೊಮ್ಮೆ ಮನಸೋ ಇಚ್ಚೆ ಮಾತಡ್ತಿದಾನೆ. ಒಮ್ಮೆ ಕುಳಿತು ಮಾತನಾಡುವ ಕೆಲಸ ಮಾಡ್ತೀವಿ. ಹೈಕಮಾಂಡ್ ನಿರ್ಧಾರದ ಬಗ್ಗೆ ಗೊತ್ತಿಲ್ಲ, ನಾನು ಸ್ನೇಹಿತನಾಗಿ ಇದನ್ನೆಲ್ಲ ಬೇಡ ಅಂತೀನಿ

RELATED ARTICLES

Related Articles

TRENDING ARTICLES