Friday, November 22, 2024

ಬೆಂಗಳೂರಿನಲ್ಲಿ ನಿಂತಿಲ್ಲ ಬೀದಿನಾಯಿಗಳ ಹಾವಳಿ

ಬೆಂಗಳೂರು : ನಾಯಿ ಕಚ್ಚಿಸಿಕೊಂಡ್ರೆ ಹಾಕಿಸಿಕೊಳ್ಳಲು ಆಂಟಿ ರೇಬೀಸ್ ಇಂಜೆಕ್ಷನ್‌ ಇಲ್ಲದೆ ಸಿಲಿಕಾನ್​ ಸಿಟಿ ಜನರು ಪರದಾಟ ಮಾಡುತ್ತಿದ್ದಾರೆ.

ನಾಯಿ ಕಚ್ಚಿದ್ರೆ ಬಿಬಿಎಂಪಿ ಆಸ್ಪತ್ರೆಯಲ್ಲಿ ಹಾಕಲು ಇಂಜೆಕ್ಷನ್ ಸಿಗ್ತಿಲ್ಲ. ಇಂಜೆಕ್ಷನ್ ಹಾಕಿಸಲು ಸರ್ಕಾರಿ ಆಸ್ಪತ್ರೆಗೆ ಹೋದ್ರೆ ಆಂಟಿ ರೇಬೀಸ್ ಇಂಜೆಕ್ಷನ್‌ ಇಲ್ಲದೆ ಬೆಂಗಳೂರಿಗರು ಪರದಾಟ ಮಾಡುತ್ತಿದ್ದಾರೆ. ನಾಯಿ ಕಚ್ಚಿಸಿಕೊಂಡ್ರೆ ಹಾಕಿಸಿಕೊಳ್ಳಲು ಇಂಜೆಕ್ಷನ್ ಇಲ್ಲ. ಪಶ್ಚಿಮ ವಲಯದ ಬಹುತೇಕ ಪ್ರೈಮರಿ ಹೆಲ್ತ್ ಸೆಂಟರ್‌ನಲ್ಲಿ ಇಂಜೆಕ್ಷನ್ ಅಲಭ್ಯವಾಗಿದೆ.

ಬೆಂಗಳೂರಿನ ವ್ಯಾಪ್ತಿಯ ಬಿಬಿಎಂಪಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೂ ಇದೇ ಸಮಸ್ಯೆ ಕಾಡುತ್ತಿದ್ದು, ನಾಯಿ ಕಚ್ಚಿಸಿಕೊಂಡು ಇಂಜೆಕ್ಷನ್ ಹಾಕಿಸಲು ಬರುವವರಿಗೆ ನೋ ಇಂಜೆಕ್ದನ್ ಕಳೆದ ಮೂರು ತಿಂಗಳಿನಿಂದ ಇಂಜೆಕ್ಷನ್ ಸ್ಟಾಕ್ ಇಲ್ಲ. ಬಿಬಿಎಂಪಿ ಇಂಡೆಂಟ್ ಹಾಕಿದ್ರೂ ಎಆರ್ ಸಿ ಇಂಜೆಕ್ಷನ್ ಪೂರೈಕೆ ಆಗ್ತಿಲ್ಲ. ನಾಯಿ ಮಾತ್ರವಲ್ಲ ಬೆಕ್ಕು, ಇಲಿ ಪ್ರಾಣಿಗಳು ಮನುಷ್ಯನಿಗೆ ಕಡಿದರೆ ಆಂಟಿ ರೇಬೀಸ್ ಇಂಜೆಕ್ಷನ್ ಬೇಕು. ನಾಲ್ಕು ಬಾರಿ ಇಂಜೆಕ್ಷನ್ ನಿಯಮಿತವಾಗಿ ಹಾಕಿಸಬೇಕು. ಆದ್ರೆ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇಂಜೆಕ್ಷನ್ ಅಲಭ್ಯವಾಗಿದ್ದು, ಬೌರಿಂಗ್, ವಿಕ್ಟೋರಿಯಾ, ಕೆಸಿ ಜನರಲ್ ಅಂಥ ದೊಡ್ಡ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಾಗಿದೆ.

RELATED ARTICLES

Related Articles

TRENDING ARTICLES