ಹಾಸನ: ಕ್ರೈಂ ರೇಟ್ ಕಡಿಮೆ ಮಾಡೋದಕ್ಕೆ ಅಂತಾ ವರ್ಗಾವಣೆ ಪ್ಲ್ಯಾನ್ ಮಾಡಿದ್ದ ನೂತನ SP, ಇದೀಗ ಮತ್ತೊಂದು ಸ್ಟೆಪ್ ಇಟ್ಟಿದ್ದಾರೆ. ನಗರದಲ್ಲಿ ಎಣ್ಣೆ ನೆತ್ತಿಗೇರಿಸಿಕೊಂಡು ಸುಖಾಸುಮ್ಮನೆ ತಿರುಗಾಡುತ್ತಿದ್ದ. ಬೈಕ್‌ನಲ್ಲಿ ತ್ರಿಬಲ್ ಹಾಕ್ಕೊಂಡು ಸುತ್ತಾಡ್ತಾ ಇದ್ದ. ಮಟ್ಕಾ, ಇಸ್ವೀಟ್ ಆಡ್ಕೊಂಡು ಮನೆ ಹಾಳು ಮಾಡಿಕೊಳ್ತಿದ್ದ. 68ಕ್ಕೂ ಹೆಚ್ಚು ಯುವಕರನ್ನು ಬಂಧಿಸಿ ತಂದ SP. ಎಲ್ಲರಿಗೂ ಪಾಠ ಮಾಡಿದ್ದಷ್ಟೇ ಅಲ್ಲೇ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಹಾಸನ ನಗರದಲ್ಲಿ ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜ್ ಹತ್ಯೆ ಸೇರಿ ಕ್ಷುಲ್ಲಕ ಕಾರಣಗಳಿಗೆ ಮರ್ಡರ್ಗಳು ಹಾಗೂ ಗಲಾಟೆಗಳು ಹೆಚ್ಚಾಗಿದ್ವು. ಈ ಹಿನ್ನೆಲೆಯಲ್ಲಿ ನಗರದ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ರಾತ್ರಿ 8.30ರ ನಂತರ 60ಕ್ಕೂ ಹೆಚ್ಚು ಪೊಲೀಸರನ್ನು ಫೀಲ್ಡಿಗಿಳಿಸಿ, ಸುಖಾಸುಮ್ಮನೆ ರಸ್ತೆಯಲ್ಲಿ ಓಡಾಡ್ತಿದ್ದ, ಎಣ್ಣೆ ಹೊಡೆದು ತೂರಾಡ್ತಿದ್ದ, ಮಟ್ಕಾ-ಇಸ್ಪೀಟ್ ಆಡ್ತಿದ್ದ, ತ್ರಿಬಲ್ ರೇಡಿಂಗ್ ಹಾಗೂ ವ್ಹೀಲಿಂಗ್ ಮಾಡ್ಕೊಂಡು ಫೋಸ್ ಕೊಡ್ತಿದ್ದ, 68ಕ್ಕೂ ಮಂದಿಯನ್ನು ಬಂಧಿಸಿದ್ದಾರೆ. ಎಲ್ಲರನ್ನೂ ಸಮುದಾಯ ಭವನದಲ್ಲಿ ಒಂದೆಡೆ ಕೂರಿಸಿ, ಮೊಬೈಲ್‌ಗಳನ್ನು ಕಸಿದುಕೊಂಡು ಅವರ ಸಂಪೂರ್ಣ ಮಾಹಿತಿಯನ್ನು ಪೊಲೀಸರು ಪಡೆದುಕೊಂಡರು.
ಎಲ್ಲರನ್ನೂ ಒಂದೆಡೆ ಕೂರಿಸಿದ SP, ಇನ್ನೊಮ್ಮೆ ಹೀಗೆ ಏನೂ ಕೆಲಸ ಇಲ್ಲದೇ ಕಂಡು ಬಂದರೆ ನಿಮ್ಮ ಮೇಲೆ ಕ್ರಮ ಜರುಗಿಸಲಾಗುವುದು ಅಂತಾ ಖಡಕ್ ವಾರ್ನಿಂಗ್ ನೀಡಿದ್ರು. 68 ಜನರ ಮೇಲೂ ಪಿಟಿ ಕೇಸ್ ಹಾಕಿ, ವಾಪಸ್ ಮನೆಗೆ ಕಳಿಸಿದರು. ಇದು ಜನರಿಗೆ ಸಂತಸ ತರಿಸಿದೆ.
ಒಟ್ಟಾರೆ ಹಾಸನದಲ್ಲಿ ಕಾನೂನು ಸುವ್ಯವಸ್ಥೆ ತಹಬದಿಗೆ ತನ್ನಿ, ಕ್ರೈಂ ರೇಟ್ಸ್ ಕಡಿಮೆ ಮಾಡಿ ಅಂತಾ ಶಾಸಕರು ಹಾಗೂ ಜನಸಾಮಾನ್ಯರು ಒತ್ತಾಯ ಮಾಡ್ತಿದ್ದರು. ಅದರೆಂತೆ ಎಸ್ಪಿ ಮುಂದುವರೆಯುತ್ತಿರೋದು ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸಚಿನ್ ಶೆಟ್ಟಿ ಪವರ್ ಟಿವಿ ಹಾಸನ