Monday, December 23, 2024

ಡಿವೋರ್ಸ್​ & 250 ಕೋಟಿ ವದಂತಿಗೆ ಸಮಂತಾ ಇತಿಶ್ರೀ

ಡಿವೋರ್ಸ್​ ನಂತ್ರ ಬಹುಭಾಷಾ ನಟಿ ಸಮಂತಾ ಎಲ್ಲೂ ತಮ್ಮ ಬ್ರೇಕಪ್ ಬಗ್ಗೆ ಮುಕ್ತವಾಗಿ ಮಾತನಾಡಿರಲಿಲ್ಲ. ಆದ್ರೀಗ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ನಾಗಚೈತನ್ಯ ನನ್ನ ಮಾಜಿ ಪತಿ ಅಂತ ಕರೆಕ್ಷನ್ ಮಾಡಿದ್ದಾರೆ. ಅಷ್ಟೇ ಅಲ್ಲ, 250 ಕೋಟಿ ಪಡೆದ ವದಂತಿಗೂ ಫುಲ್​ಸ್ಟಾಪ್ ಇಟ್ಟಿದ್ದಾರೆ. ಅದು ಎಲ್ಲಿ..? ಯಾರ ಜೊತೆ..?

ಡಿವೋರ್ಸ್​ & 250 ಕೋಟಿ ವದಂತಿಗೆ ಸಮಂತಾ ಇತಿಶ್ರೀ

ಕರಣ್ ಶೋನಲ್ಲಿ ನಾಗ್​ಚೈತನ್ಯ ಮಾಜಿ ಪತಿ ಎಂದ ಸ್ಯಾಮ್

ಅಂಬಿ ಸ್ಟೈಲ್​ನಲ್ಲಿ ಗುಡುಗಿದ ಮೋಸ್ಟ್ ಟ್ಯಾಲೆಂಟೆಡ್ ಬ್ಯೂಟಿ

ಅಂತೆ- ಕಂತೆಗಳಿಗೆ ಸ್ಪಷ್ಟನೆ.. ಇನ್ಮೇಲೆ ಯಾರೂ ಕೆಮ್ಮಂಗಿಲ್ಲ.

ಬಾಲಿವುಡ್​ನ ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್ ಕರಣ್ ಜೋಹರ್​ ನಡೆಸೋ ಫೇಮಸ್ ಟಾಕ್ ಶೋ ಕಾಪಿ ವಿತ್ ಕರಣ್​ನಲ್ಲಿ ಬಹುಭಾಷಾ ನಟಿ ಸಮಂತಾ ಭಾಗಿಯಾಗಿದ್ದಾರೆ. ಎಲ್ಲರ ಊಹೆಯಂತೆ ಆಕೆ ತನ್ನ ಡಿವೋರ್ಸ್​, ಮದ್ವೆ ಬ್ರೇಕಪ್ ಬಗ್ಗೆ ಮಾತಾಡಿದ್ದಾರೆ. ಸದ್ಯ ಈ ಹಾಟ್ ಟಾಪಿಕ್, ಟಾಕ್ ಆಫ್ ದ ಟೌನ್ ಆಗಿ ಸಂಚಲನ ಮೂಡಿಸಿದೆ. ಸ್ಯಾಮ್ ನೇರನುಡಿ ಹಾಗೂ ಓಪನ್ ಟಾಕ್​ಗೆ ಎಲ್ರೂ ನಿಟ್ಟುಸಿರು ಬಿಟ್ಟಿದ್ದಾರೆ. ಅದ್ರಲ್ಲೂ ಅಕ್ಕಿನೇನಿ ಫ್ಯಾಮಿಲಿ ಫ್ಯಾನ್ಸ್ ದಂಗಾಗಿದ್ದಾರೆ.

ನಾಗಾರ್ಜುನ್ ತನಯ ನಾಗಚೈತನ್ಯರಿಂದ ದೂರವಾಗಿದ್ಯಾಕೆ ಅಂತ ಡೈರೆಕ್ಟ್ ಆಗಿ ಪ್ರಶ್ನಿಸದೆ, ಪರೋಕ್ಷವಾಗಿ ಪತಿಯಿಂದ ದೂರವಾದ್ಮೇಲೆ ಲೈಫ್ ಹೇಗಿದೆ ಅಂತ ಕರಣ್ ಜೋಹರ್ ಪ್ರಶ್ನಿಸಿದ್ರು. ಅದಕ್ಕೆ ತುಂಬಾ ಸ್ಟ್ರೈಟ್ ಫಾರ್ವರ್ಡ್​ ಆಗಿ ಆನ್ಸರ್ ಮಾಡಿದ ಸ್ಯಾಮ್, ನಾಗಚೈತನ್ಯ ಈಗ ನನ್ನ ಪತಿ ಅಲ್ಲ, ಮಾಜಿ ಪತಿ ಅಂತ ಕರೆಕ್ಷನ್ ಮಾಡಿದ್ರು. ಅಲ್ಲಿಗೆ ಅವರಿಬ್ಬರ ನಡುವೆ ಎಲ್ಲವೂ ಸರಿ ಇರಲಿಲ್ಲ ಅನ್ನೋದು ಪಕ್ಕಾ ಆಯ್ತು. ಆದ್ರೆ ಅಲ್ಟಿಮೇಟ್ ಆಗಿ ಡಿವೋರ್ಸ್​ಗೆ ಅಸಲಿ ರೀಸನ್ ಏನು ಅನ್ನೋದನ್ನ ಮಾತ್ರ ಆಕೆ ಬಿಟ್ಟುಕೊಡಲೇ ಇಲ್ಲ.

ವಿಶ್ಚೇದನದ ಬಳಿಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿ ಸಿಕ್ಕಾಪಟ್ಟೆ ಟ್ರೋಲ್ ಆದ್ರಿ ಅಂತ ಕರಣ್ ಕೇಳಿದ ಪ್ರಶ್ನೆಗೆ, ನಾನು ಟ್ರೋಲ್ಸ್ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳಲ್ಲ, ಅವ್ರೂ ಸಹ ನನ್ನ ಜೀವನದ ಒಂದು ಭಾಗ. ಅವ್ರ ಪ್ರಶ್ನೆಗಳಿಗೂ ಕೂಡ ನಾನು ಜವಾಬ್ದಾರಿನೇ ಅಂತ ಮ್ಯಾಟರ್​ನ ಅಲ್ಲಿಗೇ ಮೊಟಕುಗೊಳಿಸಿದ್ರು.

ಸಮಂತಾ ಹಾಗೆಯೇ ಮಾತನಾಡ್ತಾ, ಡಿವೋರ್ಸ್ ಅನೌನ್ಸ್ ಮಾಡಿದ್ಮೇಲೆ ತುಂಬಾ ನೋವಾಗಿದ್ದು ನಿಜ. ಆ ಘಟನೆಯಿಂದ ತುಂಬಾ ಕಷ್ಟ ಕೂಡ ಆಯ್ತು. ಅದ್ರಿಂದ ನಾನೀಗ ಮಾನಸಿಕವಾಗಿ ಸದೃಢಳಾಗಿದ್ದೇನೆ. ಈ ಹಿಂದಿಗಿಂತಲೂ ಸ್ಟ್ರಾಂಗ್ ಆಗಿದ್ದೇನೆ ಅಂತ ತನ್ನ ಮನದ ಮಾತನ್ನ ಹೊರಹಾಕಿದ್ರು. ಆಕೆಯ ದಿಟ್ಟ ನಿರ್ಧಾರ ತಪ್ಪಾಗಿಲ್ಲ, ಇಟ್ಟ ಗುರಿಯತ್ತ ಪಯಣ ನಿಂತಿಲ್ಲ ಅನ್ನೋದು ಸ್ಪಷ್ಟವಾಯ್ತು.

ಇನ್ನು ಡಿವೋರ್ಸ್​ಗಾಗಿ ಅಕ್ಕಿನೇನಿ ಕುಟುಂಬದಿಂದ 250 ಕೋಟಿ ಪರಿಹಾರ ಕೇಳಿದ್ರು ಸಮಂತಾ ಅನ್ನೋ ವಿಚಾರಕ್ಕೂ ಸಮಂತಾ ಸ್ಪಷ್ಟನೆ ನೀಡಿದ್ರು. ನಾನು ಇತ್ತೀಚಿನ ದಿನಗಳಲ್ಲಿ ಕೇಳಿದ ಅತಿ ದೊಡ್ಡ ಗಾಸಿಪ್ ಇದು ಅಂತ ನೆಟ್ಟಿಗರ ತಲೆಮೇಲೆ ಹೊಡೆದಂತೆ ಮಾತನಾಡಿದ್ರು. ಅಲ್ಲಿಗೆ ಸ್ಯಾಮ್ 250 ಕೋಟಿ ಪಡೆದ ವಿಚಾರ ಡಮ್ಮಿ ಅನ್ನೋದು ಕೂಡ ಎಲ್ರಿಗೂ ಬಹಿರಂಗವಾಯ್ತು.

ಏ ಮಾಯ ಚೇಸಾವೆ ಚಿತ್ರದಿಂದ ಮಾಯೆ ಮಾಡಿದಂತಹ ಈ ಮಾಯಾವಿ ಜೋಡಿ, ಪ್ರೀತಿ ಪ್ರೇಮದ ಮಾಯೆಯಲ್ಲಿ ಮಿಂದೆದ್ದು, ಆನ್ ಸ್ಕ್ರೀನ್​ ಜೊತೆ ನಿಜ ಜೀವನದಲ್ಲೂ ಮದ್ವೆ ಆಗಿ, ಹೊಸಬಾಳಿಗೆ ಕಾಲಿಟ್ಟಿದ್ರು. ಇವ್ರ ಅನ್ಯೋನ್ಯ ಬಾಂಧವ್ಯ ಕಂಡು ಅದೆಷ್ಟೋ ಮಂದಿ ಉರಿದುರಿದು ಬಿದ್ದಿದ್ರು. ಅದ್ಯಾರ ದೃಷ್ಠಿ ತಾಕಿತೋ ಏನೋ ಸದ್ಯ ನಾನೊಂದು ತೀರ ನೀನೊಂದು ತೀರ ಅಂತಿದ್ದಾರೆ ಸ್ಯಾಮ್-ಚೈತು.

ಒಟ್ಟಾರೆ ಸಮಂತಾ ಲೈಫ್​ನಲ್ಲಿ ಮತ್ಯಾರೂ ಇಲ್ವಾ..? ಪ್ರೀತಿಗೆ ಜಾಗ ಇಲ್ವಾ ಅನ್ನೋ ಕಟ್ಟಕಡೆಯದಾಗಿ ಕಾಡೋ ಬಿಲಿಯನ್ ಡಾಲರ್ ಪ್ರಶ್ನೆಗೂ ಆಕೆ ಉತ್ತರ ಕೊಟ್ಟಿದ್ದಾರೆ. ಅಂಬಿ ಸ್ಟೈಲ್​ನಲ್ಲಿ ನೋವೇ, ಚಾನ್ಸೇ ಇಲ್ಲ. ನನ್ನ ಹೃದಯದ ಬಾಗಿಲು ಸದ್ಯಕ್ಕೆ ಮುಚ್ಚಿದೆ. ಯಾರಿಗೂ ಜಾಗವಿಲ್ಲ ಎಂದಿದ್ದಾರೆ. ಅದೇನೇ ಇರಲಿ, ಈಕೆ ಕರಿಯರ್ ಬಗ್ಗೆ ಪೋಕಸ್ ಮಾಡಿ, ಒಳ್ಳೊಳ್ಳೆ ಸಿನಿಮಾಗಳನ್ನ ಮಾಡಲಿ, ದಿಟ್ಟ ಮಹಿಳೆಯಾಗಿ ಟ್ರೆಂಡ್ ಸೆಟ್ ಮಾಡಲಿ ಅನ್ನೋದೇ ನಮ್ಮ ಆಶಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES