Monday, December 23, 2024

ಗಿಣಿ ಹುಡುಕಿಕೊಟ್ಟವರಿಗೆ ಸಿಕ್ತು 85 ಸಾವಿರ ರೂ

ತುಮಕೂರು : ಕಳೆದ ವಾರ ಕಾಣೆಯಾಗಿದ್ದ ರುಸ್ತುಮಾ ಹೆಸರಿನ ಮುದ್ದಿನ ಗಿಳಿ ಇಂದು ಮರಳಿ ತನ್ನ ಗೂಡು ಸೇರಿದೆ.

ಮುದ್ದಿನ ಗಿಳಿ ಕಾಣೆಯಾಗಿದೆ, ಹುಡುಕಿಕೊಟ್ರೆ ಮೊದಲಿಗೆ 50 ಸಾವಿರ ಬಹುಮಾನ ಘೋಷಿಸಿದ್ದಾರೆ. ಕಳೆದ ವಾರ ಕಾಣೆಯಾಗಿದ್ದ ರುಸ್ತುಮಾ ಹೆಸರಿನ ಗಿಳಿ. ಗಿಳಿ ಹುಡುಕಿ ಕೊಟ್ಟವರಿಗೆ 85 ಸಾವಿರ ಮಾಲಿಕ ಬಹುಮಾನ ನೀಡಿದ್ದಾರೆ.

ಕಳೆದ ಶನಿವಾರ ಕಾಣೆಯಾಗಿದ್ದ ಆಫ್ರಿಕನ್ ಗ್ರೇ ತಳಿಯ ಗಿಳಿ. ತುಮಕೂರಿನ ಜಯನಗರದ ನಿವಾಸಿ ಅರ್ಜುನ್ ರವರ ಗಿಳಿ ಕಾಣೆಯಾಗಿತ್ತು. ಮುದ್ದಿನ ಗಿಳಿ ಕಾಣೆಯಾಗಿದೆ, ಹುಡುಕಿಕೊಟ್ರೆ ಮೊದಲಿಗೆ 50 ಸಾವಿರ ಬಹುಮಾನ ಘೋಷಿಸಿದ್ದ ಕುಟುಂಬ. ಇಂದು ಬಹುಮಾನದ ಮೊತ್ತವನ್ನು 85 ಸಾವಿರಕ್ಕೆ ಏರಿಸಿತ್ತು. ಮನೆಯಲ್ಲಿ ಮುಂದಾಗಿ ಸಾಕಿದ್ದ ಗಿಳಿ ನಾಪತ್ತೆ ಹಿನ್ನಲೆ ಬೀದಿ ಬೀದಿಯಲ್ಲಿ ಹುಡುಕಿದ್ದ ಕುಟುಂಬ. 6 ದಿನಗಳು ಕಳೆದರು ಸಿಗದ ಗಿಳಿಗಾಗಿ 85 ಸಾವಿರ ಬಹುಮಾನ ಘೋಷಣೆ ಮಾಡಿದ್ದಾರೆ. ಆದರೆ ಇಂದು ತನ್ನ ಸಂಗಾತಿಯನ್ನು ಸೇರಿದ ರುಸ್ತುಮಾ. ಸಂತಸದಿಂದಲೆ ಕುಟುಂಬ ಸದಸ್ಯರೊಂದಿಗೆ ರುಸ್ತುಮಾ ತನ್ನ ಮನೆ ಸೇರಿದೆ.

RELATED ARTICLES

Related Articles

TRENDING ARTICLES