ಮೈಸೂರು : ಸಿಎಂ ಯಾರಾಗಬೇಕು ಎಂಬುದು ಮೈಸೂರಿನಲ್ಲೂ, ಬೆಂಗಳೂರಿನಲ್ಲೂ ಗುಲ್ಬರ್ಗದಲ್ಲೂ ತೀರ್ಮಾನವಾಗುವುದಿಲ್ಲಾ ಎಂದು ಮೈಸೂರಿನಲ್ಲಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಚುನಾವಣೆ ಫಲಿತಾಂಶಕ್ಕೆ ಮುನ್ನೆವೇ ನಾನು ಸಿಎಂ ನಾನು ಸಿಎಂ ಎಂದು ಹೇಳುವುದು ಸರಿಯಲ್ಲಾ. ಸಿಎಂ ಯಾರಗಾಬೇಕು ಎಂಬುದು ಮೈಸೂರಿನಲ್ಲೂ, ಬೆಂಗಳೂರಿನಲ್ಲೂ ಗುಲ್ಬರ್ಗದಲ್ಲೂ ತೀರ್ಮಾನವಾಗುವುದಿಲ್ಲಾ. ಪಕ್ಷದ ಹೈ ಕಮಾಂಡ್ ಅದನ್ನ ತೀರ್ಮಾನ ಮಾಡುತ್ತದೆ. ಅವತ್ತಿನ ರಾಜಕೀಯ ಪರಿಸ್ಥಿತಿ ಆಧಾರದ ಮೇಲೆ ಹೈ ಕಮಾಂಡ್ ಯಾರಿಗೆ ನಾಯಕತ್ವಕ್ಕೆ ಕೊಡಬೇಕು ಎಂಬುದನ್ನ ತೀರ್ಮಾನ ಮಾಡುತ್ತದೆ.
ಇನ್ನು, ಕಾಂಗ್ರೆಸ್ ಯಾವಾಗಲೂ ಸಾಮೂಹಿಕ ನಾಯಕತ್ವದಲ್ಲೇ ಹೋಗುವುದು. ಈ ಭಾರಿ ಆ ಭಾರಿ ಅಂತಲ್ಲಾ. ನಮ್ಮದು ಯಾವಗಲೂ ಸಮೂಹಿಕ ನಾಯಕತ್ವ ಮೊದಲು ಪಕ್ಷವನ್ನ ಅಧಿಕಾರಕ್ಕೆ ತರಬೇಕು ಅದೇ ನಮ್ಮ ಉದ್ದೇಶ. ನೀವು ಅವಕಾಶ ಕೊಟ್ಟರೆ(ಮಾಧ್ಯಮದವರು) ಬರುತ್ತಾರೆ. ಎಲ್ಲಾ ಸೇರಿ ಚಾನ್ಸ್ ಕೊಟ್ಟರೆ ನೋಡಣಾ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.