Monday, December 23, 2024

ಕೆಜಿಎಫ್​​ 2ಗೆ ಶತದಿನೋತ್ಸವದ ಸಂಭ್ರಮ

ತಾಯಿಗೆ ಕೊಟ್ಟ ವಚನವನ್ನು ಉಳಿಸಿಕೊಳ್ಳಲು ನರಾಚಿಯ ಕ್ರೂರಿಗಳ ಸೆದೆಬಡಿದು, ಗರುಡನ ರುಂಡ ಚೆಂಡಾಡಿ ಇಡೀ ವಿಶ್ವವೇ ಬೆರಗಾಗುವಂತೆ ಶ್ರೀಮಂತಿಕೆ ಪಡೆದವನು ರಾಕಿಭಾಯ್​​​. ಯೆಸ್​​​.. ಕೆಜಿಎಫ್​​​​ ಚಾಪ್ಟರ್​​ 2 ಚಿತ್ರ ಇಂದಿಗೆ 100 ದಿನಗಳನ್ನು ಪೂರೈಸಿ ಹೆಮ್ಮೆಯಿಂದ ಬೀಗ್ತಾ ಇದೆ.

1250 ಕೋಟಿಗೂ ಅಧಿಕ ಬಾಕ್ಸ್​​ ಆಫೀಸ್​ ಕಲೆಕ್ಷನ್​ ಕೊಳ್ಳೆ ಹೊಡೆದ ಕನ್ನಡದ ಹೆಮ್ಮೆಯ ಪ್ರತೀಕ ಕೆಜಿಎಫ್​​ 2. ಶತದಿನೋತ್ಸವ ಸವಿನೆನಪಿನ ಸಮಯದಲ್ಲಿ ಹೊಂಬಾಳೆ ಚಿತ್ರತಂಡ ವಿಭಿನ್ನ ಟ್ರೈಲರ್​ ರಿಲೀಸ್​ ಮಾಡಿ ಹರ್ಷ ವ್ಯಕ್ತಪಡಿಸಿದೆ. ಜೊತೆಗೆ ವೀಡಿಯೋ ಕೊನೆಯಲ್ಲಿ ಇಟ್ಸ್​​ ಜಸ್ಟ್​​ ಬಿಗಿನಿಂಗ್​ ಎಂಬ ಸಾಲುಗಳಿದ್ದು ಕೆಜಿಎಫ್​​ 3 ಸಿನಿಮಾ ಬರೋ ಸೂಚನೆ ಕೊಟ್ಟಿದೆ. ಪ್ರಶಾಂತ್​ ನೀಲ್​​ ಈ ವೀಡಿಯೋ ಹಂಚಿಕೊಂಡಿದ್ದ, ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ.

RELATED ARTICLES

Related Articles

TRENDING ARTICLES