Wednesday, January 22, 2025

ನಾನು ಕುಟುಂಬ ರಾಜಕಾರಣ ಒಪ್ಪೋದಿಲ್ಲ: ವಿಜಯೇಂದ್ರ

ಬೆಂಗಳೂರು: ಅಕಸ್ಮಾತ್ ಅಧಿಕೃತವಾಗಿ ಪಿಎಸ್ಐ ಅಕ್ರಮದಲ್ಲಿ ನನ್ನ ಹೆಸರು ಕೇಳಿ ಬಂದರೆ ನಾನು ಚುನಾವಣೆಗೆ ನಿಲ್ಲುವುದಿಲ್ಲ ಎಂದು ವಿಜಯೇಂದ್ರ ಅವರು ಹೇಳಿಕೆ ನೀಡಿದರು.

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಿಎಸ್ಐ ಹಗರಣ ಕಾಂಗ್ರೆಸ್ ಪಕ್ಷದ ಕೂಸು. ಇಂದಲ್ಲ ನಾಳೆ ಪಿಎಸ್ಐ ಹಗರಣ ಕಾಂಗ್ರೆಸ್ ಪಕ್ಷದ ಮನೆ ಬಾಗಿಲಿಗೇ ಹೋಗಿ ನಿಲ್ಲುತ್ತದೆ. ಪಿಎಸ್ಐ ಹಗರಣದಲ್ಲಿ ಯಾವ ಪುಣ್ಯಾತ್ಮ ನನ್ನ ಹೆಸರು ಹೇಳಿದವನು ? ಸಿದ್ದರಾಮಯ್ಯನವರಿಗೆ ನಾನು ಉತ್ತರ ಕೊಡುವುದಿಲ್ಲ. ಕಪೋಲ ಕಲ್ಪಿತ ಪ್ರಶ್ನೆಗಳಿಗೆಲ್ಲ ನಾನು ಉತ್ತರಿಸುವುದಿಲ್ಲ. ಕೆಲಸಕ್ಕೆ ಬಾರದ್ದರಲ್ಲಿ ನಾನು ಇನವಾಲ್ವ್ ಆಗಿಲ್ಲ. ಅಕಸ್ಮಾತ್ ಅಧಿಕೃತವಾಗಿ ಪಿಎಸ್ಐ ಅಕ್ರಮದಲ್ಲಿ ನನ್ನ ಹೆಸರು ಕೇಳಿ ಬಂದರೆ ನಾನು ಚುನಾವಣೆಗೇ ನಿಲ್ಲುವುದಿಲ್ಲ ಎಂದು ಹೇಳಿದರು.

ಇನ್ನು ನಾನು ಕುಟುಂಬ ರಾಜಕಾರಣ ವಿಚಾರ ಒಪ್ಪೋದಿಲ್ಲ. ತಂದೆಯವರು ಕಾರ್ಯಕರ್ತರ ಮಾತಿಗೆ ಉತ್ತರ ಕೊಟ್ಟಿದ್ದಾರೆ. ಪೂಜ್ಯ ತಂದೆಯವರ ಮಾತು ಆದರ್ಶ ನಾನೂ ಪಾಲಿಸಬೇಕಾಗುತ್ತದೆ ಎಂದರು.

ಅಲ್ಲದೇ ಯಡಿಯೂರಪ್ಪ ಅವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದಾರೆ ಹೊರತು ಸಕ್ರಿಯ ರಾಜಕಾರಣದಿಂದ ಅಲ್ಲ. ಪಕ್ಷ ಏನೇ ನಿರ್ಧಾರ ಕೈಗೊಂಡರೂ ಕೂಡ ಪಾಲಿಸ್ತೇನೆ. ತಂದೆಯವರ ಘೋಷಣೆ ಬಳಿಕ ಹಲವಾರು ಚರ್ಚೆ ಆಗುತ್ತಿದೆ. ಪಕ್ಷದ ಹಿತದೃಷ್ಟಿಯಿಂದ ತೀರ್ಮಾನ ಮಾಡ್ತಾರೆ. ಪಕ್ಷಕ್ಕೆ ಒಳ್ಳೆಯದಾಗಬೇಕು ಅನ್ನೋ ಕಾರಣದಿಂದ ತಿಳಿಸಿದ್ದಾರೆ ಎಂದು ಪ್ರತಿಕ್ರಿಯಿಸಿದರು.

ನಾನು ರಾಜ್ಯದಾದ್ಯಂತ ಪ್ರವಾಸ ಮಾಡಿ ಹಳೇ ಮೈಸೂರು ಭಾಗದಲ್ಲಿ ಗಟ್ಟಿಗೊಳಿಸಬೇಕು ಅನ್ನೋ ಅಪೇಕ್ಷೆ ಇದೆ. ತಮ್ಮ ಮಕ್ಕಳು ತಮ್ಮ ಪರಿಶ್ರಮದಿಂದ ಮುಂದೆ ಬರಬೇಕು ಅಂತ ಅವರು ಅಪೇಕ್ಷೆ ಪಟ್ಟವರು. ವಿಜಯೇಂದ್ರಗೆ ಶಕ್ತಿ ಇದೆ ಅಂತ ಪಕ್ಷಕ್ಕೆ ಅನಿಸಿದರೆ ಪಕ್ಷ ಜವಾಬ್ದಾರಿ ನೀಡುತ್ತದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES