Monday, December 23, 2024

ರೆಟ್ರೋ ಸ್ಟೈಲು.. ಮೆಟ್ರೋ ಟ್ಯೂನು.. ಸುಕ್ಕಾ ಪಾರ್ಟಿ ಹವಾ

ಪೊಗರು ನಂತ್ರ ಪಡ್ಡೆಹುಲಿಯ ರಾಣಾಗೆ ಮ್ಯೂಸಿಕ್ ಮಾಡೋದ್ರಲ್ಲಿ ಬ್ಯುಸಿಯಾಗಿದ್ದ ರ‍್ಯಾಪರ್ ಚಂದನ್​ ಶೆಟ್ಟಿ, ಸೈಕಲ್ ಗ್ಯಾಪ್​ನಲ್ಲೊಂದು ಆಲ್ಬಮ್ ಸಾಂಗ್ ಮಾಡಿದ್ದಾರೆ. ಪಕ್ಕಾ ಬೆಲ್​ಬಾಟಂ ರೆಟ್ರೋ ಸ್ಟೈಲ್​ನಲ್ಲಿರೋ ಈ ಹಾಡಿಗೆ ಮೆಟ್ರೋ ಟ್ಯೂನ್ ಇದ್ದು, ಸುಕ್ಕಾ ಪಾರ್ಟಿ ಸಾಂಗ್​ ಆಗಿ ಹೊರಹೊಮ್ಮಿದೆ.

ರೆಟ್ರೋ ಸ್ಟೈಲು.. ಮೆಟ್ರೋ ಟ್ಯೂನು.. ಸುಕ್ಕಾ ಪಾರ್ಟಿ ಹವಾ

ಪೊಗರು ಹಿಟ್ ಆಲ್ಬಮ್ ನಂತ್ರ ರಾಣಾ ಜೊತೆ ರಾಕಿಂಗ್..!

ಕೆಜಿಎಫ್ ಸಿನಿಮಾ ಬಂದ್ಮೇಲೆ ಬೆಲ್​ಬಾಟಂ ಸ್ಟೈಲ್​ಗೆ ಒಂದು ಕಳೆ ಬಂತು ಅಂದ್ರೆ ತಪ್ಪಾಗಲ್ಲ. ಅದೊಂಥರಾ ಟ್ರೆಂಡಿಯಾಗಿದೆ. ಇದೀಗ ಆ ಟ್ರೆಂಡ್​ನ ಫಾಲೋ ಮಾಡಿದ್ದಾರೆ ಕನ್ನಡದ ರ‍್ಯಾಪರ್ ಚಂದನ್ ಶೆಟ್ಟಿ. ಯೆಸ್.. ತಮ್ಮ ನಯಾ ಆಲ್ಬಮ್ ಸಾಂಗ್​ಗೆ ರೆಟ್ರೋ ವಿತ್ ಮೆಟ್ರೋ ಎರಡರ ಟಚ್ ನೀಡಿ, ಮ್ಯೂಸಿಕ್​ಪ್ರಿಯರಿಗೆ ಮಸ್ತ್ ಮನರಂಜನೆ ನೀಡಿದ್ದಾರೆ.

ಪಾರ್ಟಿ ಸಾಂಗ್ಸ್​ಗೆ ಕೇರ್ ಆಫ್ ಅಡ್ರೆಸ್ ಆಗಿರೋ ಚಂದನ್ ಶೆಟ್ಟಿ, ಮೂರು ತಿಂಗಳಿಗೊಂದು ಕಲರ್​ಫುಲ್ ಡ್ಯಾನ್ಸಿಂಗ್ ನಂಬರ್ಸ್​ನ ಬಜಾರ್​ಗೆ ತರ್ತಾ ಇರ್ತಾರೆ. ಸದ್ಯ ಸುಕ್ಕಾ ಪಾರ್ಟಿ ಸಾಂಗ್ ಲಾಂಚ್ ಆಗಿದ್ದು, ಕೇಳೋಕೂ ಹಿತವಾಗಿದೆ, ನೋಡೋಕೆ ಅಂತೂ ಅದಕ್ಕಿಂತ ಮಜಭೂತಾಗಿದೆ. ಈ ಹಾಡಿಗೆ ಮುರಳಿ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದು, ಸಾಹಿತ್ಯ ಬರೆದು, ಸಂಗೀತ ಸಂಯೋಜಿಸಿ, ಹಾಡೋದ್ರ ಜೊತೆ ನಟಿಸಿ, ಇದಕ್ಕೆ ಬಂಡವಾಳ ಹಾಕಿ ಪ್ರೊಡ್ಯೂಸ್ ಕೂಡ ಮಾಡಿದ್ದಾರೆ ಚಂದನ್.

ಯೂಟ್ಯೂಬ್ ಜೊತೆ ಸೋಶಿಯಲ್ ಮೀಡಿಯಾದಲ್ಲೂ ಸಖತ್ ಸಂಚಲನ ಮೂಡಿಸ್ತಿರೋ ಸುಕ್ಕಾ ಸಾಂಗ್, ಮತ್ತೊಂದು ಡ್ಯಾನ್ಸಿಂಗ್ ನಂಬರ್ ಆಗಿ ಹೊರಹೊಮ್ಮಿದೆ. ಅಂದಹಾಗೆ ಱಪರ್ ಚಂದನ್ ಶೆಟ್ಟಿ ಪೊಗರು ಸಿನಿಮಾಗೆ ಆಲ್ಬಮ್ ಕಂಪೋಸ್ ಮಾಡಿದ ಬಳಿಕ ಸದ್ಯ ರಾಣಾ ಚಿತ್ರಕ್ಕೆ ಸಂಗೀತ ಸಂಯೋಜಿಸ್ತಿದ್ದಾರೆ. ಪಡ್ಡೆಹುಲಿ ಶ್ರೇಯಸ್ ಮಂಜು ನಟನೆಯ ರಾಣಾ ಮ್ಯೂಸಿಕ್ ನೆಕ್ಸ್ಟ್ ಲೆವೆಲ್​ಗೆ ಇರಲಿದ್ದು, ಇದ್ರ ಗ್ಯಾಪ್​ನಲ್ಲಿ ಸುಕ್ಕಾ ಪಾರ್ಟಿ ಕೊಟ್ಟಿರೋದು ಇಂಟರೆಸ್ಟಿಂಗ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ  

RELATED ARTICLES

Related Articles

TRENDING ARTICLES