Monday, December 23, 2024

‘ಬೆಂಕಿ’ ಸೆಲೆಬ್ರಿಟಿ ಶೋ ; ಅನೀಶ್​ಗೆ ಇಂಡಸ್ಟ್ರಿ ಬಹುಪರಾಕ್

ಈ ವರ್ಷದ ಎಮೋಷನಲ್ ಮಾಸ್ ಹಿಟ್ ಸಿನಿಮಾ ಆಗಿ ಹೊರಹೊಮ್ಮಿದೆ ಬೆಂಕಿ. ಅಕಿರ ಅನೀಶ್ ಬೆಂಕಿ ಅವತಾರಕ್ಕೆ ಪ್ರೇಕ್ಷಕ ದಿಲ್​ಖುಷ್ ಆಗಿದ್ದಾನೆ. ಬರೀ ಸಿನಿಪ್ರಿಯರಷ್ಟೇ ಅಲ್ಲ, ಇಂಡಸ್ಟ್ರಿ ತಾರೆಯರು ಕೂಡ ಕೊಂಡಾಡಿದ್ದಾರೆ. 60ರಿಂದ 90ಕ್ಕೆ ಸ್ಕ್ರೀನ್ಸ್ ಹೆಚ್ಚಿಸಿಕೊಳ್ತಿರೋ ಕಲರ್​ಫುಲ್ ಸ್ಟೋರಿ ನಿಮಗಾಗಿ ಕಾಯ್ತಿದೆ.

‘ಬೆಂಕಿ’ ಸೆಲೆಬ್ರಿಟಿ ಶೋ.. ಅನೀಶ್​ಗೆ ಇಂಡಸ್ಟ್ರಿ ಬಹುಪರಾಕ್

ಶಂಶೇರಾ ಫ್ಲಾಪ್.. 30 ಸ್ಕ್ರೀನ್ಸ್ ಹೆಚ್ಚಿಸಿಕೊಳ್ಳಲಿರೋ ಅನೀಶ್

ಇದು ಈ ವರ್ಷದ ಎಮೋಷನಲ್ ಮಾಸ್ ಹಿಟ್ ಸಿನಿಮಾ

ಅಣ್ಣ- ತಂಗಿ ಕಥೆಗೆ ಹಾರರ್, ಹೈ ವೋಲ್ಟೇಜ್ ಆ್ಯಕ್ಷನ್ ಟಚ್

ಅಕಿರ ಅನೀಶ್​ಗೆ ಸ್ಯಾಂಡಲ್​ವುಡ್ ಅಂಗಳದಲ್ಲಿ ವಿಶೇಷವಾದ ಫ್ಯಾನ್ ಫಾಲೋಯಿಂಗ್ ಇದೆ. ಕ್ಲಾಸ್ & ಮಾಸ್ ಸಿನಿಮಾಗಳಿಂದ ಸಕ್ರಿಯರಾಗಿರೋ ಅನೀಶ್, ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್. ಸದ್ಯ ಕಳೆದ ವಾರ ತೆರೆಕಂಡ ಬೆಂಕಿ ಸಿನಿಮಾ ಬಾಕ್ಸ್ ಅಫೀಸ್​ನಲ್ಲಿ ಬೆಂಕಿಯಂತೆ ಮುನ್ನುಗ್ಗುತ್ತಿದೆ. ಯಶಸ್ವಿ ಎರಡನೇ ವಾರ ಫ್ಯಾಮಿಲಿ ಆಡಿಯೆನ್ಸ್​ನ ಗೆದ್ದಿದೆ.

ಅನೀಶ್- ಸಂಪದ ಜೋಡಿಯ ಈ ಚಿತ್ರದಲ್ಲಿ ಅನೀಶ್- ಶ್ರುತಿ ಕಾಂಬೋನ ಅಣ್ಣ-ತಂಗಿ ಲೈನ್ ಚೆನ್ನಾಗಿಯೇ ವರ್ಕೌಟ್ ಆಗಿದೆ. ಶಾನ್ ನಿರ್ದೇಶನದ ಈ ಸಿನಿಮಾ ಮಾಸ್ ಹಾಗೂ ಕ್ಲಾಸ್ ಎರಡೂ ಬಗೆಯ ಪ್ರೇಕ್ಷಕರಿಗೆ ಇಷ್ಟವಾಗಿದೆ. ಹಾಗಾಗಿಯೇ ಸದ್ಯ ಇರೋ 60 ಸ್ಕ್ರೀನ್​ಗಳ ಸಂಖ್ಯೆ 90ಕ್ಕೆ ಏರಿಕೆ ಆಗ್ತಿದೆ. ಹಿಂದಿಯ ಶಂಶೇರಾ ಚಿತ್ರ ಫ್ಲಾಪ್ ಆಗಿರೋದು ಬೆಂಕಿಗೆ ಪ್ಲಸ್ ಆಗಿದೆ.

ಚಿತ್ರರಂಗದ ಕಲಾವಿದರು ಹಾಗೂ ತಂತ್ರಜ್ಞರಿಗಾಗಿ ಸ್ಪೆಷಲ್ ಶೋ ಆರ್ಗನೈಸ್ ಮಾಡಿದ್ದ ಚಿತ್ರತಂಡ, ಇಂಡಸ್ಟ್ರಿ ಮಂದಿಯಿಂದಲೂ ಭೇಷ್ ಅನಿಸಿಕೊಂಡಿದೆ.

ಇಷ್ಟು ಮಂದಿ ಸಿನಿಮಾದವ್ರು ಬೆಂಕಿಗೆ ಬಹುಪರಾಕ್ ಅಂದಿದ್ದಾರೆ ಅಂದ್ರೆ, ಇನ್ನೂ ಸಿನಿಮಾ ನೋಡದೇ ಇರೋರು ಹತ್ತಿರದ ಥಿಯೇಟರ್​ಗಳಿಗೆ ಭೇಟಿ ಮಾಡಿ ಅರಾಮಾಗಿ ಚಿತ್ರ ವೀಕ್ಷಿಸಬಹುದು. ಕನ್ನಡ ಸಿನಿಮಾಗಳನ್ನ ಥಿಯೇಟರ್​ಗಳಲ್ಲೇ ನೋಡಿ, ಪ್ರೋತ್ಸಾಹ ನೀಡಿದ್ರೆ ಅದಕ್ಕಿಂತ ಉತ್ತಮ ಕೆಲಸ ಮತ್ತೊಂದಿಲ್ಲ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ 

RELATED ARTICLES

Related Articles

TRENDING ARTICLES