Monday, December 23, 2024

ನಟಿ ಅರ್ಪಿತಾ ಮುಖರ್ಜಿ ಮನೆ ಮೇಲೆ ಇಡಿ ದಾಳಿ; ಕೋಟ್ಯಾಂತರ ರೂ. ಜಪ್ತಿ

ಕೋಲ್ಕತ್ತಾ : ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗ ಮತ್ತು ಪಶ್ಚಿಮ ಬಂಗಾಳದ ಪ್ರಾಥಮಿಕ ಶಿಕ್ಷಣ ಮಂಡಳಿ ನೇಮಕಾತಿ ಅಕ್ರಮಗಳ ತನಿಖೆಗೆ ಸಂಬಂಧಿಸಿದಂತೆ ED ತೃಣಮೂಲ ಕಾಂಗ್ರೆಸ್‌ ನಾಯಕ ಹಾಗೂ ಸಚಿವ ಪಾರ್ಥ ಚಟರ್ಜಿ ಅವರ ಅತ್ಯಾಪ್ತೆ ಅರ್ಪಿತಾ ಮುಖರ್ಜಿ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಅಂದಾಜು 21 ಕೋಟಿ ನಗದು ಹಾಗೂ 50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಅರ್ಪಿತಾ ಅವರ ಫ್ಲ್ಯಾಟ್‌ನಲ್ಲಿ ಪತ್ತೆಯಾಗಿದೆ. ಹಾಗಾದರೆ, ಈ ಹಗರಣಕ್ಕೂ ಅರ್ಪಿತಾ ಮುಖರ್ಜಿಗೆ ಇರುವ ಸಂಬಂಧವೇನು?

ಏನ್‌ ದುಡ್ಡು ಮಾರಾಯರ್ರೇ ನನಗೂ ಒಂದು ಕಂತೆ ಕೊಟ್ರೆ ಹೆಂಗಿರ್ತಿತ್ತು ಅಂತ ದೇಶದ ಜನ ಕಣ್ಣು ಅರಳಿಸಿ ನೋಡ್ತಿದ್ದಾರೆ. ಹೌದು, ಈ ದುಡ್ಡು ನೋಡಿದ್ರೆ ಯಾರಿಗಾದ್ರೂ ಆಸೆ ಆಗದೆ ಇರಲ್ಲ ಬಿಡಿ. ವಿಶೇಷ ಅಂದ್ರೆ, ಸಚಿವರಿಗೆ ಆಪ್ತ, ಅಭಿಮಾನಿಗಳಿಗೆ ಹತ್ತಿರ. ನಟಿ ಮಣಿಯ ಬಳಿ ಇಷ್ಟೊಂದು ದುಡ್ಡು ಹೆಂಗ್‌ ಬಂತು ಅಂತು ಅನ್ನೋ ಬಗ್ಗೆ ತನಿಖೆ ಮುಂದುವರೆದಿದೆ.

ಇಡಿ ಶೋಧ ಕಾರ್ಯದ ವೇಳೆ ಪಾರ್ಥ ಚಟರ್ಜಿ ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ವಸತಿ ಆವರಣದಲ್ಲಿ ಸುಮಾರು 20 ಕೋಟಿ ರೂಪಾಯಿ ಮೌಲ್ಯದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗ ಮತ್ತು ಪಶ್ಚಿಮ ಬಂಗಾಳದ ಪ್ರಾಥಮಿಕ ಶಿಕ್ಷಣ ಮಂಡಳಿ ನೇಮಕಾತಿ ಅಕ್ರಮಗಳ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಪಾರ್ಥ ಚಟರ್ಜಿ ಅವರ ನಿಕಟವರ್ತಿ ಅರ್ಪಿತಾ ಮುಖರ್ಜಿ ಅವರನ್ನು ಬಂಧಿಸಿದ್ದಾರೆ. 20 ಕೋಟಿ ನಗದು ಮತ್ತು ಹಲವಾರು ಮೊಬೈಲ್ ಫೋನ್ಗಳನ್ನು ಮನೆಯಿಂದ ವಶಪಡಿಸಿಕೊಳ್ಳಲಾಗಿದೆ. ಪಾರ್ಥ ಚಟರ್ಜಿ ಪ್ರಸ್ತುತ ಪಶ್ಚಿಮ ಬಂಗಾಳದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿದ್ದಾರೆ.

ದುರ್ಗಾ ಪೂಜೆ ವೇದಿಕೆಯಲ್ಲಿ ಅರ್ಪಿತಾ ಬಗ್ಗೆ ದೀದಿ ಮೆಚ್ಚುಗೆ :

ಈ ಬೆಳವಣಿಗೆಗಳೊಂದಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ತಳಕು ಹಾಕಿರುವ ಬಿಜೆಪಿ, ವಿಡಿಯೋವೊಂದನ್ನು ಹಂಚಿಕೊಂಡಿದೆ. ದುರ್ಗಾ ಪೂಜೆಯ ಕಾರ್ಯಕ್ರಮದಲ್ಲಿ ಮಮತಾ ಬ್ಯಾನರ್ಜಿ ಅವರು ಅರ್ಪಿತಾರನ್ನು ಹೊಗಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಆ ಕಾರ್ಯಕ್ರಮದಲ್ಲಿ ಪಾರ್ಥ ಅವರೂ ಭಾಗಿಯಾಗಿದ್ದರು. ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ವಿರೋಧ ಪಕ್ಷ ಬಿಜೆಪಿಯ ಮುಖಂಡ ಸುವೆಂದು ಅಧಿಕಾರಿ ಮತ್ತು ರಾಜ್ಯದ ಸಹ ಉಸ್ತುವಾರಿಯಾಗಿರುವ ಅಮಿತ್ ಮಾಳವಿಯಾ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಹಂಚಿಕ

ಒಂದ್ಕಡೆ, ಶಿಕ್ಷಣ ಇಲಾಖೆಯಲ್ಲಿ ಅಕ್ರಮದ ತನಿಖೆ.. ಇದ್ರ ಜೊತೆಗೆ, ಭಾರೀ ಪ್ರಮಾಣದ ಹಣ ಸಿಕ್ಕಿರುವ ಕುರಿತು ತನಿಖೆ ಮುಂದುವರೆದಿದೆ. ಈ ಮಧ್ಯೆ, ಮಮತಾ ಬ್ಯಾನರ್ಜಿ ಜೊತೆ ನಟಿ ಅರ್ಪಿತಾ ಮುಖರ್ಜಿ ಲಿಂಕ್‌ ಕೊಡ್ತಿದೆ ಬಿಜೆಪಿ.

ಬ್ಯೂರೋ ರಿಪೋರ್ಟ್‌ ಪವರ್‌ ಟಿವಿ

RELATED ARTICLES

Related Articles

TRENDING ARTICLES