Wednesday, December 25, 2024

ಬಿಬಿಎಂಪಿ ಚುನಾವಣಾ ಭವಿಷ್ಯ ಶನಿವಾರಕ್ಕೆ ಮುಂದೂಡಿಕೆ

ಬೆಂಗಳೂರು : 8 ವಾರಗಳ ಒಳಗೆ ಚುನಾವಣಾ ಪ್ರಕ್ರಿಯೆ ಮುಗಿಸಬೇಕು ಅಂತ ಸುಪ್ರೀಂಕೋಟ್೯ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ಚಾಟಿ ಬೀಸಿತ್ತು. ಸದ್ಯ ಬೀಸೋ ದೊಣ್ಣೆಯನ್ನು ತಪ್ಪಿಸಿಕೊಳ್ಳೊ ಬರದಲ್ಲಿ. ಅಳೆದೂ ತೂಗಿ ಕೊನೆಗೂ 198 ವಾಡ್೯ಗಳಿಂದ 243 ವಾಡ್೯ ಗೆ ಗಡಿ ಗುರುತಿಸಿ ಅಂತಿಮ ವರದಿ ಪ್ರಕಟಿಸಿದ್ದಂತೂ ಆಯ್ತು.ಸದ್ಯ ಕರಡು ವರದಿಗೆ ಹೋಲಿಸಿದರೆ ಅಂತಿಮ ವರದಿಯಲ್ಲಿ 28 ವಾರ್ಡ್‌ಗಳ ಗಡಿಯನ್ನು ಬದಲಿಸಲಾಗಿದೆ. ಜತೆಗೆ ಕೆಲ ವಾರ್ಡ್‌ಗಳ ವಾರ್ಡ್ ಸಂಖ್ಯೆಯನ್ನೇ ಅದಲು ಬದಲು ಮಾಡಲಾಗಿದೆ.

ಬಿಬಿಎಂಪಿಯ 198 ವಾರ್ಡ್‌ಗಳನ್ನು 243 ವಾರ್ಡ್‌ಗಳನ್ನಾಗಿ ವಿಂಗಡಿಸಿದ ಅಂತಿಮ ವರದಿಯನ್ನು ರಾಜ್ಯ ಸರ್ಕಾರ ಪ್ರಟಿಸಿದ್ದು, ಜೂನ್ 23ರಂದು ಪ್ರಕಟಿಸಲಾದ ಕರಡು ವರದಿಗೆ ಸಲ್ಲಿಕೆಯಾದ ಆಕ್ಷೇಪಣೆಗಳನ್ನಾಧರಿಸಿ ಕೆಲ ವಾರ್ಡ್‌ಗಳಲ್ಲಿ ಬದಲಾವಣೆ ತರಲಾಗಿದೆ. ಅದರಂತೆ 243 ವಾರ್ಡ್‌ಗಳಲ್ಲಿ 28 ವಾರ್ಡ್‌ಗಳ ಗಡಿಯಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಲಾಗಿದೆ.ಅದರ ಜೊತೆಗೆ ಒಬಿಸಿ ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಭಕ್ತವತ್ಸಲ ವರದಿ ಕೂಡಾ ಸಲ್ಲಿಕೆಯಾಗಿದೆ. ಡೀ ಲಿಮಿಟೇಷನ್ ನ ಆಕ್ಷೇಪಣೆ ಸಲ್ಲಿಕೆಗೆ ನೀಡಿದ್ದ ಕೇವಲ 15 ದಿನಗಳಲ್ಲಿ ಬರೋಬ್ಬರಿ 3800 ಆಕ್ಷೇಪಣೆ ಗಳು ಸಲ್ಲಿಕೆಯಾಗಿದೆಯಂತೆ.

ಇನ್ನೂ ಸುಪ್ರೀಂಕೋಟ್೯ ನೀಡಿದ್ದ ಗಡುವು ಶುಕ್ರವಾರಕ್ಕೆೆ ಮುಕ್ತಾಯವಾಗಿದೆ. ಆದ್ರೆ, ಮೀಸಲಾತಿ ಪ್ರಕಟಣೆ ಮಾತ್ರ ಇನ್ನೂ ಹಾಗೆ ಬಾಕಿ ಉಳಿಸಿಕೊಂಡಿದ್ದಾರೆ.ಇದರ ಬಗ್ಗೆ ಬಿಬಿಎಂಪಿಯನ್ನು ಕೇಳಿದ್ರೆ ಆ ಜವಾಬ್ದಾರಿ ನಮ್ಮದಲ್ಲ. ಅದೇನಿದ್ರೂ ಸರ್ಕಾರವೇ ತೀರ್ಮಾನ ತಗೋಬೇಕು ಅಂತಿದ್ದಾರೆ. ಇದರಿಂದ ಡೀ ಲಿಮಿಟೇಷನ್ ಗೊಂದಲದಂತೆ ಮೀಸಲಾತಿ ಪ್ರಕಟಣೆಯಲ್ಲಿ ಮಾಡೋದು ಬೇಡ. ಆದಷ್ಟು ಬೇಗ ನ್ಯಾಯ ಯುತವಾಗಿ ಮೀಸಲಾತಿ ಪ್ರಕಟಿಸಿ ಅಂತ ಬಿಬಿಎಂಪಿ ಮಾಜಿ ಆಡಳಿತ ನಾಯಕ ಅಬ್ದುಲ್ ವಾಜೀದ್ ಹಾಗೂ ಎಂ.ಶಿವರಾಜು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ರು. ಇದೇ ವಿಚಾರದ ಅಂತಿಮ ವಿಚಾರಣೆ ಬಾಕಿ ಇದ್ದು, ಸಮಯಾವಕಾಶ ಕೊರತೆಯಿಂದ ವಿಚಾರಣೆಯನ್ನು ಸುಪ್ರೀಂಕೋಟ್೯ ಶನಿವಾರಕ್ಕೆ ಮುಂದೂಡಿದೆ. ಆದ್ರೆ ಸರ್ಕಾರ ಮಾತ್ರ ನಾವು ಎಲ್ಲಾ ದಾಖಲೆಗಳನ್ನು ಸಲ್ಲಿಸೋಕೆ ಸಿದ್ದ ಅಂತ ಸಿ.ಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸದ್ಯ ಸುಪ್ರೀಂಕೋರ್ಟ್ ಆದೇಶದಂತೆ ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ಶೇಕಡಾ 50 % ಮಹಿಳಾ ಮೀಸಲಾತಿ ಇರಬೇಕು. ಅದರ ಜೊತೆ ಈಗ ಪ್ರತ್ಯೇಕವಾಗಿ ಒಬಿಸಿ ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯ ಮೂರ್ತಿ ಭಕ್ತವತ್ಸಲ ವರದಿ ಕೂಡಾ ಈಗ ಸಲ್ಲಿಕೆಯಾಗಿದೆ. ಸದ್ಯ ಶನಿವಾರ ಸುಪ್ರೀಂಕೋರ್ಟ್‌ನಲ್ಲಿ ನಡೆಯುವ ವಿಚಾರಣೆ ಮೇಲೆ ಬಿಬಿಎಂಪಿ ಚುನಾವಣೆಯ ಭವಿಷ್ಯ ನಿಂತಿದೆ.

ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES