Wednesday, January 8, 2025

ಯಡಿಯೂರಪ್ಪನವ್ರು ಅತ್ಯಂತ ಶ್ರೇಷ್ಠ ನಾಯಕ: ಬಿಸಿ ನಾಗೇಶ್

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಬಿ ಎಸ್​ ಯಡಿಯೂರಪ್ಪನವರು ಅತ್ಯಂತ ಶ್ರೇಷ್ಠ ನಾಯಕ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರು ಹೇಳಿದರು.

ಯಡಿಯೂರಪ್ಪ ನಿವೃತ್ತಿ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಎಸ್​ವೈ ಅತ್ಯಂತ ಶ್ರೇಷ್ಠ ನಾಯಕ. ಈಗಾಗಲೇ ರಾಜ್ಯಾದ್ಯಂತ ಪ್ರವಾಸ ಮಾಡ್ತೀನಿ ಅಂತಾ ಹೇಳಿದ್ದಾರೆ.

ಅಲ್ಲದೇ ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯನವರಿಗೆ ಕನಸ್ಸು ಕಾಣಬೇಡಿ ಎಂದು ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ,  ಅಂತಿಮವಾಗಿ ಏನೇ ನಿರ್ಣಯ ಮಾಡೋದು ಪಕ್ಷ. ಬಿಜೆಪಿಗೆ ಯಾವುದೇ ಶಾಪ ಇಲ್ಲ. ಯಾವುದೇ ನಿರ್ಣಯ ತಗೊಂಡರು ಟೀಮ್ ಬಿಜೆಪಿ ನಿರ್ಧಾರ ಮಾಡುತ್ತದೆ ಎಂದು ಪ್ರತಿಕ್ರಿಯಿಸಿದರು.

ಇನ್ನು ಇದೇ ವೇಳೆ ರಮೇಶ್ ಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಅತ್ಯಂತ ಅನುಭವ ಇರೋ ರಾಜಕಾರಣಿ. ಆತ್ಮಸಾಕ್ಷಿ ಅವರಲ್ಲಿ ಹೆಚ್ಚು. ಆತ್ಮಸಾಕ್ಷಿಯ ಮೂಲಕ ಒಂದಷ್ಟು ನಿಜ ಹೊರಗೆ ಹಾಕಿದ್ದಾರೆ. ಬಹುಶಃ ಅವರು ಈ ಸತ್ಯದ ಮೂಲಕ ಚುನಾವಣೆಗೆ ಹೋಗ್ತಿದ್ದಾರೆ ಎಂದು ತಿಳಿಸಿದರು.

RELATED ARTICLES

Related Articles

TRENDING ARTICLES