Wednesday, January 29, 2025

ಹಣ ಕೊಡಲಿಲ್ಲವೆಂದು ತಾಯಿಯನ್ನು ಕೊಂದ ಮಗ

ಚಿಕ್ಕಮಗಳೂರು :ಪ್ರಪಂಚದಲ್ಲಿ ತಾಯಿಯ ಋಣ ದೊಡ್ಡದು ಎನ್ನುವ ನಾನ್ನುಡಿಯಿದೆ. ಕೆಟ್ಟ ಮಗ ಪ್ರಪಂಚದಲ್ಲಿ ಇರಬಹುದು, ಆದ್ರೆ, ಅಂಥಾ ತಾಯಿ ಇರಲು ಸಾಧ್ಯವೇ ಇಲ್ಲ, ತನ್ನ ಮಕ್ಕಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುವ ತ್ಯಾಗಮಯಿ ತಾಯಿ. ಆದ್ರೆ, ಕಾಫಿ ನಾಡಿನಲ್ಲೊಬ್ಬ ಪಾಪಿ ಮಗ ಹಣಕ್ಕಾಗಿ ಅಮ್ಮನನ್ನೇ ಹತ್ಯೆ ಮಾಡಿ, ಆಕಸ್ಮಿಕ ಸಾವು ಎಂದು ಬಿಂಬಿಸಿ ಅಂತ್ಯಸಂಸ್ಕಾರವನ್ನು ಮಾಡಿ ಪೊಲೀಸರ ಅತಿಥಿ ಆಗಿದ್ದಾನೆ.

ಹಣಕ್ಕಾಗಿ ಹೆತ್ತ ತಾಯಿಯನ್ನೇ ಕೊಲೆ ಮಾಡಿ ಡ್ರಾಮಾ ಮಾಡಿದ್ದ ಪಾಪಿಮಗ ಪೊಲೀಸರ ಅತಿಥಿ ಆಗಿದ್ದಾನೆ. ಚಿಕ್ಕಮಗಳೂರು ತಾಲ್ಲೂಕಿನ ಹಚ್ಚಡ ಮನೆ ಗ್ರಾಮದಲ್ಲಿ ಘಟನೆ ನಡೆದಿದೆ. ಹೌದು, ತಾಯಿಯನ್ನು ಕೊಂದು ಬೆಂಕಿ ತಗುಲಿ ಮೃತಪಟ್ಟಿದ್ದಾರೆ ಎಂದು ಡ್ರಾಮಾ ಸೃಷ್ಟಿ ಮಾಡಿ ಅಂತ್ಯಸಂಸ್ಕಾರವನ್ನೂ ಮಾಡಿದ್ದಾನೆ ಪಾಪಿ ಮಗ. ಆದ್ರೆ, ಸಂಬಂಧಿಕರು ನೀಡಿದ ದೂರಿನ ಮೇರೆಗೆ ಪೊಲೀಸರು ಸತ್ಯ ಬಯಲಿಗೆಳೆದಿದ್ದಾರೆ. 26 ವರ್ಷದ ಆರೋಪಿ ಬಸವರಾಜು ಬಂಧಿತ ಆರೋಪಿಯಾಗಿದ್ದು, 55 ವರ್ಷದ ಲತಾ ಮೃತ ದುರ್ದೈವಿ.ಅಲ್ಲದೆ, ಪ್ರಕರಣ ಮುಚ್ಚಿ ಹಾಕಲು ಸಹಕರಿಸಿದ ಆರೋಪದ ಮೇಲೆ ಗ್ರಾಮದ 14 ಜನರ ವಿರುದ್ಧ ದೂರು ದಾಖಲಾಗಿದೆ.

ಕುಡಿಯಲು ಹಣ ಕೊಡದಿದ್ದಕ್ಕೆ ಸಿಡಿದೆದ್ದ ಬಸವರಾಜು ಜುಲೈ 18ರಂದು ತಾಯಿಯ ತಲೆಗೆ ಸೌದೆ ಒಲೆಯನ್ನು ಊದುವ ಕೊಳವೆಯಿಂದ ಹೊಡೆದಿದ್ದಾನೆ.ಸಂಜೆ ಮತ್ತೆ ಮನೆಗೆ ಬಂದು ರಾಡ್‌ನಿಂದ ಹಲ್ಲೆ ಮಾಡಿದ್ದರಿಂದ ಆಕೆ ಮೃತಪಟ್ಟಿದ್ದಾಳೆ. ಬಳಿಕ ಕೊಲೆ ಪ್ರಕರಣ ಮುಚ್ಚಿ ಹಾಕಲು ಆಕಸ್ಮಿಕ ಬೆಂಕಿ ತಗುಲಿ ಮೃತಪಟ್ಟಿದ್ದಾರೆ ಎಂದು ನಂಬಿಸಲು ಡೀಸೆಲ್ ಸುರಿದು ಮನೆಯಲ್ಲೇ ಬೆಂಕಿ ಹಚ್ಚಿದ್ದಾನೆ. ಅರೆಬರೆ ಸುಟ್ಟ ಶವವನ್ನು ಸ್ಮಶಾನಕ್ಕೆ ಸಾಗಿಸಿ ಅಲ್ಲಿ ಪೂರ್ಣ ಸುಟ್ಟು ಹಾಕಲಾಗಿದೆ.

ಒಟ್ಟಿನಲ್ಲಿ ಕುಡಿಯಲು ಕಾಸು ಕೊಡಲಿಲ್ಲ ಅಂತಾ ಆರೋಪಿ ಹೆತ್ತಮ್ಮನನ್ನೇ ಕೊಂದಿದ್ದು ಮಾತ್ರ ವಿಪರ್ಯಾಸ.

ಸಚಿನ್ ಶೆಟ್ಟಿ ಪವರ್ ಟಿವಿ ಚಿಕ್ಕಮಗಳೂರು

RELATED ARTICLES

Related Articles

TRENDING ARTICLES