Monday, December 23, 2024

ಯಾರು ಗೆಲ್ಲುತ್ತಾರೋ ಅವರನ್ನು ಹೈಕಮಾಂಡ್ ತೀರ್ಮಾನ ಮಾಡ್ತಾರೆ : ಸಿದ್ದರಾಮಯ್ಯ

ತುಮಕೂರು : ಹಿಂದೂಳಿದ ಜಾತಿಯವರಿಗೆ ಮೀಸಲಾತಿ ಇರ್ಬೇಕು ಅಂತ ಹಿಂದಿನಿಂದಲ್ಲೂ ಹೇಳಿಕೊಂಡು ಬಂದಿದ್ದೇನೆ ಎಂದು ತುಮಕೂರಿನ ಶಿರಾದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಶಿರಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ನಾನೇ ಅಭ್ಯರ್ಥಿ ಅಂದು ಕೊಂಡರೆ ಕ್ಯಾಂಡಿಯೇಟ್ ಆಗೊಕ್ಕೆ ಆಗುತ್ತಾ. ಯಾರು ಗೆಲ್ಲುತ್ತಾರೋ ಅವರನ್ನು ಹೈಕಮಾಂಡ್ ತೀರ್ಮಾನ ಮಾಡ್ತಾರೆ. ಶಿರಾ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ, ಯಾರು ಬೆಟರ್ ಕ್ಯಾಂಡಿಯೆಂಟ್ ಅಂತ ಹೇಳ್ತಾರೆ. ಸರ್ವೆ ಮಾಡಿಸಿ ಎಲ್ಲಾವನ್ನು ನೋಡಿಕೊಂಡು ಟಿಕೆಟ್ ಕೊಡ್ತಿವಿ. ಭಕ್ತ ವತ್ಸಲಂ ವರದಿ ನಿನ್ನೆ ಕೊಟ್ಟಿದ್ದಾರೆ. ನಾನು ಇನ್ನು ನೋಡಿಲ್ಲ. ಬ್ಲಾಕ್ ವರ್ಡ್ ಕ್ಲಾಸ್ ಗೆ 33 % ರಿಸರ್ವೆಷನ್ ಕೊಡ್ಬೇಕು ಅಂತ ಶಿಫಾರಸ್ಸು ಮಾಡಿದ್ದಾರೆ ಎಂದರು.

ಇನ್ನು, ಹಿಂದೂಳಿದ ಜಾತಿಯವರಿಗೆ ಮೀಸಲಾತಿ ಇರ್ಬೇಕು ಅಂತ ಹಿಂದಿನಿಂದಲ್ಲೂ ಹೇಳಿಕೊಂಡು ಬಂದಿದ್ದೇನೆ. ಹಿಂದೂಳಿದವರಿಗೆ ಅಲ್ಪಸಂಖ್ಯಾತರಿಗೆ ಮೀಸಲಾತಿ ಇರ್ಬೇಕು. ಒಬಿಸಿಗೆ ಕೊಡಬಾರದು, ಜನರಲ್ ಗೆ ಕೊಡ್ಬೇಕು ಅಂತಲ್ಲ ಗೆಲ್ಲುವರಿಗೆ ಟಿಕೆಟ್ ಕೊಡ್ತೀವಿ ಎಂದು ಹೇಳಿದರು.

ಗುತ್ತಿಗೆದಾರ ಸಂತೋಷ್ ಪಾಟೀಲ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮೊಬೈಲ್ ನಲ್ಲಿ ಡೆತ್ ನೋಟ್ ಇದೆ. ಡೇತ್ ನೋಟ್ ಇರುವಾಗ ಬಿ ರಿಪೋರ್ಟ್ ಹೇಗೆ ಕೊಡೊಕ್ಕೆ ಆಗುತ್ತೆ. ಕೆಲಸ ಮಾಡಿ ದುಡ್ಡು ಬರಲಿಲ್ಲ, ಈಶ್ವರಪ್ಪ ದುಡ್ಡು ಕೇಳಿದ್ರು, ನಾನು ದುಡ್ಡು ಕೊಡೊದಿಕ್ಕೆ ಆಗಲ್ಲ. ಆದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ಡೆತ್ ನೋಟ್ ಬರೆದಿದ್ದಾರೆ. ಸಾವಿಗೆ ಇವರೆ ಕಾರಣ ಅಂತ ಹೇಳಿದ್ದಾರೆ. ಸರ್ಕಾರ ಪ್ರಕರಣ ಮುಚ್ಚಿ ಹಾಕಲು ನೋಡ್ತಿದೆ ಎಂದರು.

ಇನ್ನು, ಸಿದ್ದರಾಮಾಯ್ಯೊತ್ಸವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಇವತ್ತಿನವರೆಗೂ ಹುಟ್ಟು ಹಬ್ಬ ಮಾಡಿಕೊಂಡಿಲ್ಲ. ಈ ವರ್ಷ 75ನೇ ವರ್ಷ ತುಂಬುತ್ತಿದೆ. ಅಭಿಮಾನಿಗಳು ಸ್ನೇಹಿತರು ಸೇರಿಕೊಂಡು, ಇದೊಂದು ಮೈಲಿಗಲ್ಲು ಎಂದು ತೀರ್ಮಾನ ಮಾಡಿ ಮಾಡ್ತಿದ್ದಾರೆ. ಅಧಿಕಾರಕ್ಕಾಗಿ ಮಾಡ್ತಿಲ್ಲ, ಏನೇನೊ ವ್ಯಾಖ್ಯಾನ ಮಾಡುತ್ತಿದ್ದಾರೆ ಅದರ ಬಗ್ಗೆ ತಲೆಕೆಡಿಸಿಕೊಳ್ಳಬಾರದು ಎಂದು ಹೇಳಿದರು.

RELATED ARTICLES

Related Articles

TRENDING ARTICLES