Monday, December 23, 2024

ತ್ರಿಬಲ್ ಆರ್ ದೃಶ್ಯವೈಭವಕ್ಕೆ ರಸ್ಸೋ ಬ್ರದರ್ಸ್​ ಹೇಳಿದ್ದೇನು..?

ಸೌತ್ ಸಿನಿಮಾಗಳು ಹಾಗೂ ಮೇಕರ್ಸ್​ ಬರೀ ಬಾಲಿವುಡ್ ಮೇಲೆ ಸವಾರಿ ಮಾಡ್ತಿಲ್ಲ, ಹಾಲಿವುಡ್ ಮಂದಿಯನ್ನೂ ಮಂತ್ರಮುಗ್ಧಗೊಳಿಸ್ತಿದ್ದಾರೆ. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ದಿ ಗ್ರೇ ಮ್ಯಾನ್ ಚಿತ್ರದ ಹಿಂದಿನ ಮಾಸ್ಟರ್​ಮೈಂಡ್ಸ್ ರಸ್ಸೋ ಬ್ರದರ್ಸ್​. ಸದ್ಯ ರಾಜಮೌಳಿಯ ತ್ರಿಬಲ್ ಆರ್​ಗೆ ಕ್ಲೀನ್ ಬೋಲ್ಡ್ ಆಗಿರೋ ಹಾಲಿವುಡ್ ಸ್ಟಾರ್ ಮೇಕರ್ಸ್​, ಕೋಟ್ಯಂತರ ರೂಪಾಯಿ ಬಂಡವಾಳ ಹೂಡಲು ರೆಡಿ ಆಗಿದ್ದಾರೆ.

OMG..! ಹಾಲಿವುಡ್ ಮೇಕರ್ಸ್​ ಫಿದಾ.. ಮೌಳಿಗೆ ಲಾಟರಿ

ಪ್ರಿನ್ಸ್ ಮಹೇಶ್ ಬಾಬು ಪ್ರಾಜೆಕ್ಟ್ ನಂತ್ರ ಹಾಲಿವುಡ್​ಗೆ ಮೌಳಿ

ತ್ರಿಬಲ್ ಆರ್ ದೃಶ್ಯವೈಭವಕ್ಕೆ ರಸ್ಸೋ ಬ್ರದರ್ಸ್​ ಹೇಳಿದ್ದೇನು..?

ಇಂಡಿಯನ್ ಟ್ಯಾಲೆಂಟ್ಸ್ ಮೇಲೆ ಅವೆಂಜರ್ಸ್​ ಸಾರಥಿ ಕಣ್ಣು

​ಭಾರತೀಯ ಚಿತ್ರರಂಗ ಅಂದ್ರೆ ಬಾಲಿವುಡ್ ಅಂತ ಹೇಳಲಾಗ್ತಿತ್ತು. ಅದು ಜಮಾನ. ಇದೀಗ ಕಾಲ ಬದಲಾಗಿದೆ. ಇಂಡಿಯನ್ ಮೂವೀಸ್ ಅಂದ್ರೆ ಸೌತ್ ದುನಿಯಾ ಕಡೆ ಎಲ್ರೂ ತಿರುಗಿ ನೋಡ್ತಾರೆ. ಅಂತಹ ಕ್ವಾಲಿಟಿ ಸಿನಿಮಾಗಳನ್ನ ಹಾಗೂ ದೃಶ್ಯವೈಭವಗಳನ್ನ ಕಟ್ಟಿಕೊಡ್ತಿದ್ದಾರೆ ನಮ್ಮ ಸೌತ್ ಮೇಕರ್ಸ್​. ಅದ್ರಲ್ಲೂ ರಾಜಮೌಳಿ, ಶಂಕರ್, ಪ್ರಶಾಂತ್ ನೀಲ್ ಅಂತಹ ಮಾಸ್ಟರ್​ಮೈಂಡ್ಸ್​ ಎಲ್ಲರನ್ನ ವಶೀಕರಣ ಮಾಡಿಬಿಟ್ಟಿದ್ದಾರೆ.

ಬಾಹುಬಲಿ, ತ್ರಿಬಲ್ ಆರ್ ಸಿನಿಮಾಗಳಿಂದ ರಾಜಮೌಳಿ ಹಾಗೂ ಕೆಜಿಎಫ್​ ಸಿನಿಮಾಗಳಿಂದ ಪ್ರಶಾಂತ್ ನೀಲ್ ಅನ್ನೋ ಮಾಂತ್ರಿಕರಿಬ್ಬರೂ ಮೇಕಿಂಗ್​ನಲ್ಲಿ ಹೊಸ ಕ್ರಾಂತಿ ಮಾಡಿಬಿಟ್ರು. ನಯಾ ಟ್ರೆಂಡ್ ಸೃಷ್ಠಿ ಮಾಡಿ, ನ್ಯಾಷನಲ್ ಇಂಟರ್​ನ್ಯಾಷನಲ್ ಲೆವೆಲ್​ನಲ್ಲಿ ನ್ಯೂ ಸ್ಟಾಂಡರ್ಡ್ಸ್ ಸೆಟ್ ಮಾಡಿದ್ರು. ಸಾವಿರಾರು ಕೋಟಿ ಬ್ಯುಸಿನೆಸ್ ಮಾಡಿ ಹಾಲಿವುಡ್ ಮಂದಿಯ ಹುಬ್ಬೇರಿಸೋ ಜೊತೆಗೆ ಅವ್ರ ದಿಲ್ ದೋಚಿದ್ದಾರೆ.

ಹಾಲಿವುಡ್​ನ ಸ್ಟಾರ್ ಡೈರೆಕ್ಟರ್ಸ್​ ಕಮ್ ಪ್ರೊಡ್ಯೂಸರ್ಸ್ ಆಗಿ ಸಂಚಲನ ಮೂಡಿಸ್ತಿರೋ​ ರಸ್ಸೋ ಬ್ರದರ್ಸ್, ರಾಜಮೌಳಿಯ ತ್ರಿಬಲ್ ಆರ್ ಸಿನಿಮಾಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ. ಹೌದು.. ಅವೆಂಜರ್ಸ್​ ಇನ್​ಫಿನಿಟಿ ವಾರ್ ಚಿತ್ರದ ಕ್ಯಾಪ್ಟನ್ಸ್ ಈ ರಸ್ಸೋ ಬ್ರದರ್ಸ್​, ನಮ್ಮ ಸೌತ್ ಸಿನಿಮಾ ನೋಡಿ ಗುಣಗಾನ ಮಾಡ್ತಾರೆ ಅಂದ್ರೆ ಮೌಳಿಯ ಮೇಕಿಂಗ್ ಮರ್ಮ ಎಂಥದ್ದು ಅನ್ನೋದು ಗೊತ್ತಾಗ್ತಿದೆ.

ಮೌಳಿಯ ಹಾಲಿವುಡ್ ಆಫರ್ :

ನಾವು ತ್ರಿಬಲ್ ಆರ್ ಸಿನಿಮಾನ ಬಹಳ ಇಷ್ಟ ಪಟ್ಟೆವು. ಅದೊಂದು ಅದ್ಭುತ ಸಿನಿಮಾ. ನಾವು ಎಸ್​ಎಸ್ ರಾಜಮೌಳಿಗೆ ಒಂದು ಸಿನಿಮಾ ನಿರ್ಮಾಣ ಮಾಡಲು ಇಚ್ಚಿಸುತ್ತೇವೆ. ನಮಗೆ ತಿಳಿದಂತೆ ಅವರೊಬ್ಬ ಇನ್​ಕ್ರೆಡಿಬಲ್ ಡೈರೆಕ್ಟರ್.

ರಸ್ಸೋ ಬ್ರದರ್ಸ್​ :

ಹೀಗಂತ ಖುದ್ದು ಹಾಲಿವುಡ್​ನ ಖ್ಯಾತ ಮೇಕರ್ಸ್​ ಹೇಳಿಕೊಂಡಿದ್ದಾರೆ. ಅಲ್ಲಿಗೆ ರಾಜಮೌಳಿಯ ತ್ರಿಬಲ್ ಆರ್ ಸಿನಿಮಾದ ದೃಶ್ಯವೃಭವಕ್ಕೆ ಮನಸೋತ ರಸ್ಸೋ ಬ್ರದರ್ಸ್​, ಸಾವಿರಾರು ಕೋಟಿ ಹಣ ಹೂಡಲು ಮುಂದಾಗ್ತಿರೋದು ನಿಜಕ್ಕೂ ಹೆಮ್ಮೆಯ ವಿಷ್ಯ. ಇದು ನಿಜವಾಗೋದೇ ಆದ್ರೆ, ಸದ್ಯ ಜಕ್ಕನ್ನ ಪ್ರಿನ್ಸ್ ಮಹೇಶ್ ಬಾಬು ಜೊತೆಗಿನ ಪ್ರಾಜೆಕ್ಟ್​ಗೆ ಕೈ ಹಾಕಿದ್ದು, ಅದು ಮುಗೀತಾ ಇದ್ದಂತೆ ರಸ್ಸೋ ಬ್ರದರ್ಸ್​ ಜೊತೆ ಕೈ ಜೋಡಿಸಲಿದ್ದಾರೆ.

ಅಂದಹಾಗೆ ರಸ್ಸೋ ಬ್ರದರ್ಸ್​ ನಮ್ಮ ಇಂಡಿಯನ್ ಟ್ಯಾಲೆಂಟ್ಸ್ ಮೇಲೆ ಕಣ್ಣು ಹಾಕಿದ್ದಾರೆ. ದಿ ಗ್ರೇ ಮ್ಯಾನ್ ಅನ್ನೋ ಹಾಲಿವುಡ್ ಒಟಿಟಿ ಸಿನಿಮಾನ ನಿರ್ಮಿಸಿರೋ ರಸ್ಸೋ ಬ್ರದರ್ಸ್​, ಅದರಲ್ಲಿ ತಮಿಳುನಟ ಧನುಷ್​ಗೆ ಗಾಳ ಹಾಕಿದ್ದು ಗೊತ್ತೇ ಇದೆ. ಸದ್ಯ ಅದ್ರ ಪ್ರೀಮಿಯರ್​ನ ರೀಸೆಂಟ್ ಆಗಿ ಮುಂಬೈನಲ್ಲಿ ಮಾಡಿರೋ ರಸ್ಸೋ ಬ್ರದರ್ಸ್​, ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಮನೆಗೂ ಭೇಟಿ ನೀಡಿದ್ದಾರೆ.

ನಟ ಧನುಷ್ ಮಕ್ಕಳ ಸಮೇತ ಗ್ರೇ ಮ್ಯಾನ್ ಪ್ರೀಮಿಯರ್ ಶೋನಲ್ಲಿ ಭಾಗಿಯಾಗಿದ್ರು. ಧನುಷ್ ಆಯ್ತು, ಆಮೀರ್ ಆಯ್ತು ಈಗ ರಾಜಮೌಳಿ. ಒಟ್ಟಾರೆ ಹಾಲಿವುಡ್​ನ ರಸ್ಸೋ ಬ್ರದರ್ಸ್​ ನಮ್ಮ ಇಂಡಿಯನ್ ಸಿನಿಮಾಗಳು ಹಾಗೂ ಮೇಕರ್ಸ್​ ಜೊತೆ ಅತ್ಯದ್ಭುತ ಟ್ಯಾಲೆಂಟ್ಸ್​ನ ಸ್ಟಡಿ ಮಾಡ್ತಿದ್ದಾರೆ. ಸಿನಿಮಾ ಅಂದ್ರೆ ಜಸ್ಟ್ ಎಂಟರ್​ಟೈನ್ಮೆಂಟ್, ವ್ಹಾವ್ ಫೀಲ್ ಕೊಡೋ ಮೇಕಿಂಗ್ ಅನ್ನೋದಷ್ಟೇ ಕೊನೆಗೆ ಉಳಿಯಲಿದೆ. ಭಾಷೆ, ಗಡಿ, ಮಾರ್ಕೆಟ್​ನ ಹಂಗಿಲ್ಲದೆ ಮನರಂಜನಾ ಕ್ಷೇತ್ರ ಬೆಳೆಯುತ್ತಿರೋದು ನಿಜಕ್ಕೂ ಖುಷಿಯ ವಿಚಾರ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES