Monday, December 23, 2024

ಅಕ್ಕಿ ಕಳ್ಳರ ಮೇಲೆ ಸರ್ಕಾರ ಸುಮೋಟೋ ಕೇಸ್ ಹಾಕಿ‌ ಶಿಕ್ಷೆ ನೀಡಬೇಕು : ಆರ್.ರಾಜೇಂದ್ರ

ತುಮಕೂರು : ಅಕ್ಕಿ ಕಳ್ಳರ ಮೇಲೆ ಸರ್ಕಾರ ಸುಮೋಟೋ ಕೇಸ್ ಹಾಕಿ‌ ಶಿಕ್ಷೆ ನೀಡಬೇಕು ಎಂದು ತುಮಕೂರು ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಹೇಳಿದ್ದಾರೆ.

ಸರ್ಕಾರ ಅಕ್ಕಿಯನ್ನ ಕಾಳ ಸಂತೆಯಲ್ಲಿ ಮಾರಾಟ ಮಾಡ್ತಾ ಇರೋವಂತದ್ದು. ರಾಜ್ಯದಲ್ಲಿ ಹಸಿವು ಮುಕ್ತ ಮಾಡಲು ಸಿದ್ದರಾಮಯ್ಯ ನವರು ಅನ್ನಭಾಗ್ಯ ಪ್ರಾರಂಭಿಸಿದ್ದು. ನಿನ್ನೇ ಬಹಳಷ್ಟು ಕಡೆ ಈ ವಿಚಾರ ನಡೆಯುತ್ತಿರೋದನ್ನ ಪವರ್ ಟಿವಿಯಲ್ಲಿ ನೋಡಿದೆ. 1 ಲಕ್ಷಕ್ಕಿಂತ ಹೆಚ್ಚು ಚೀಲ ಸಿಕ್ಕಿರೋದನ್ನ ಗಮನ ಮಾಡಿರೋವಂತದ್ದು. ಇದು ಸಣ್ಣ ಮಟ್ಟದಲ್ಲಿ ಆಗಿದೆ, ಇದು ದೊಡ್ಡ ಮಟ್ಟದಲ್ಲಿದೆ ಎಂಬುದು ನಮ್ಮ ಭಾವನೆ ಎಂದರು.

ಇನ್ನು, ಬಿಜೆಪಿ ಸರ್ಕಾರ ಎಲ್ಲಾವುದರಲ್ಲೂ ಕಮೀಷನ್ ಅಕ್ಕಿಯಲ್ಲೂ ಸರ್ಕಾರದಲ್ಲಿ ಯಾರದ್ರು ಕಮೀಷನ್ ತಗೋಂಡಿದ್ರೆ ಇದಕ್ಕಿಂತ ನೀಚವಾದ ಕೆಲಸ ಇಲ್ಲ. ಮುಖ್ಯಮಂತ್ರಿಗಳು, ಸಂಭಂಧಪಟ್ಟ ಮಂತ್ರಿ, ಯಾರೇ ಭಾಗಿಯಾಗಿದ್ರು ಇದ್ರಲ್ಲಿ ತಪ್ಪಿತಸ್ಥರು ಮಾಡಿ ಶಿಕ್ಷೆ ನೀಡಬೇಕು. ಸರ್ಕಾರಿ ಅಕ್ಕಿ ಪಾಲೀಷ್ ಮಾಡಿ ಅವರು ಮಾರಾಟ ಮಾಡ್ತಾ ಇರೋ ಅಂತದ್ದು. ಯಾರು ಮಾಡ್ತಾ ಇದ್ದಾರೆ, ಇದರ ಹಿಂದೆ ಯಾರು ಇದ್ದಾರೆ ಅವರನ್ನ ಗುರಿಪಡಿಸಬೇಕು. ಸರ್ಕಾರ ಸುಮೋಟೋ ಕೇಸ್ ಫೈಲ್ ಮಾಡಿಕೊಂಡು ಅವರಿಗೆ ಶಿಕ್ಷೆಯನ್ನ ಕೊಡಬೇಕು ಎಂದು ಹೇಳಿದರು.

RELATED ARTICLES

Related Articles

TRENDING ARTICLES