ಬೆಂಗಳೂರು: ನಿಮ್ಮ ಪವರ್ ಟಿವಿಯ ರಣರೋಚಕ ರಹಸ್ಯ ಕಾರ್ಯಾಚರಣೆ ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು.. ಬಡವರಿಗೆ ಸೇರಬೇಕಾದ ಅನ್ನಭಾಗ್ಯದ ಅಕ್ಕಿ, ರಾಗಿಯನ್ನ ಖದೀಮರು ಖಾಸಗಿ ಮಿಲ್ಗಳಿಗೆ ಸಾಗಿಸುತ್ತಿದ್ದರು.. ಇದನ್ನ ಸ್ಟಿಂಗ್ ಆಪರೇಷನ್ಗಳ ಕಿಂಗ್ ಅಂತಲೇ ಫೇಮಸ್ ನಿಮ್ಮ ಪವರ್ ಟಿವಿ, ರಾಜ್ಯದ ಜನತೆಯ ಮುಂದಿಡ್ತು.. ಪವರ್ ಟಿವಿಯ ವರದಿಗೆ ರಾಜ್ಯ ಸರ್ಕಾರವೂ ಕೂಡ ಸ್ಪಂದಿಸಿದೆ. ಇದು ಪವರ್ ಟಿವಿ ಬಿಗ್ ಬಿಗ್ ಇಂಪ್ಯಾಕ್ಟ್.
ಬಡವರ ಹಸಿವು ನೀಗಲಿ ಅಂತ ಅನ್ನಭಾಗ್ಯ ಯೋಜನೆ ಜಾರಿಗೆ ತರಲಾಗಿದೆ.. ಆದ್ರೆ, ಈ ಯೋಜನೆ ಹೆಸರಲ್ಲಿ ಅಧಿಕಾರಿಗಳು ಮತ್ತು ದಂಧೆಕೋರರು ತಮ್ಮ ಹಣದಾಹವನ್ನು ನೀಗಿಸಿಕೊಳ್ಳುತ್ತಿದ್ದಾರೆ.. ಈ ಬಗ್ಗೆ ನಿಮ್ಮ ಪವರ್ ಟಿವಿ ಕಾಳದಂಧೆಕೋರರ ಅಕ್ರಮವನ್ನು ಇಂಚಿಂಚೂ ಬಯಲು ಮಾಡ್ತು.. ಬಡವರಿಗೆ ಸೇರಬೇಕಾದ ಅನ್ನ, ರಾಗಿ ಖಾಸಗಿ ಮಿಲ್ಗಳಿಗೆ ಸೇರುತ್ತಿತ್ತು.. ಅನ್ನಭಾಗ್ಯ ಯೋಜನೆಯ ದಾಸ್ತಾನಿಗೆ ಯಾವ್ ರೀತಿ ಕನ್ನ ಹಾಕುತ್ತಿದ್ದರು ಎಂದು ನಿಮ್ಮ ಪವರ್ ಟಿವಿ ರಣರೋಚಕ ಸ್ಟಿಂಗ್ ಆಪರೇಷನ್ ಮಾಡಿತ್ತು.. ಪ್ರಾಣವನ್ನ ಹೊತ್ತೆಯಿಟ್ಟು, ಖಾಸಗಿ ಮಿಲ್ ಗಳಿಗೆ ಅನ್ನಭಾಗ್ಯ ಯೋಜನೆ ಅಕ್ಕಿ, ರಾಗಿಯನ್ನ ಅಕ್ರಮವಾಗಿ ಸಾಗಿಸುತ್ತಿದ್ದ ದೃಶ್ಯಗಳು ಸೆರೆ ಹಿಡಿದಿತ್ತು..
ಕಾಳಸಂತೆಯಲ್ಲಿ ಅನ್ನಭಾಗ್ಯ ಅನ್ನಕ್ಕೆ ಕನ್ನ ಹಾಕುತ್ತಿರುವ ಖದೀಮರ ವಿರುದ್ಧ ಕಠಿಣ ಕ್ರಮ ತೆಗದುಕೊಳ್ಳಲು ಸರ್ಕಾರ ಮುಂದಾಗಿದೆ.. ಈಗಾಗಲೇ ನಾಲ್ಕು ಖಾಸಗಿ ಮಿಲ್ಗಳಿಗೆ ಬೀಗ ಜಡಿದಿದ್ದು, ದೂರು ಕೂಡ ದಾಖಲಾಗಿದೆ.. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಉಮೇಶ್ ಕತ್ತಿ, ಪವರ್ ಟಿವಿ ಸ್ಟಿಂಗ್ ಆಪರೇಷನ್ ಬಗ್ಗೆ ನನ್ನ ಗಮನಕ್ಕೆ ಬಂದಿದೆ.. ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಸರ್ಕಾರ ಕ್ರಮ ತೆಗದುಕೊಳ್ಳಲಿದೆ.. ಅಕ್ರಮದಲ್ಲಿ ಭಾಗಿಯಾದವರನ್ನ ಅರೆಸ್ಟ್ ಮಾಡುತ್ತೇವೆ.. ಅಕ್ರಮವನ್ನ ಶಾಶ್ವತವಾಗಿ ತಡೆಗಟ್ಟುವ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡ್ತೀನಿ ಎಂದಿದ್ದಾರೆ.. ಇನ್ನು ನೀವು ನಿರ್ಭಯವಾಗಿ ಸುದ್ದಿ ಮಾಡಿ, ನಿಮ್ಮ ಜೊತೆ ಸರ್ಕಾರ ಇರಲಿದೆ ಎಂದು ಉಮೇಶ್ ಕತ್ತಿ ಹೇಳಿದ್ದಾರೆ..
ಇನ್ನು, ಈ ಬಗ್ಗೆ ಮಾತ್ನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಆಯುಕ್ತೆ ಎಂ.ಕನಗವಲ್ಲಿ, ಸ್ಟಿಂಗ್ ಆಪರೇಷನ್ನ ಪೂರ್ಣ ವಿಡಿಯೋ ತರಿಸಿಕೊಂಡು ತಪ್ಪಿತಸ್ಥರ ಮೇಲೆ ಕ್ರಮ ತಗೆದುಕೊಳ್ಳುತ್ತೇನೆ ಅಂದ್ರು..
ಇನ್ನು ಪವರ್ ಟಿವಿ ಸ್ಟಿಂಗ್ ಆಪರೇಷನ್ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.. ಬಡವರ ಪಾಲಿನ ಅಕ್ಕಿ, ರಾಗಿ ಈ ರೀತಿ ದುರುಪಯೋಗ ಆಗ್ತಿರೋದನ್ನ ಸರ್ಕಾರ ಗಂಭೀರವಾಗಿ ತೆಗದುಕೊಳ್ಳುತ್ತೆ.. ಇದಕ್ಕೆ ಸಂಬಂಧಿಸಿದಂತೆ ನಾನು ಅಧಿಕಾರಿಗಳ ಬಳಿ ಮಾಹಿತಿ ಪಡೆದು, ಕಾಳಸಂತೆಕೋರನ್ನ ತಡೆಗಟ್ಟೋಕ್ಕೆ ಚೆಕ್ ಪೋಸ್ಟ್ ನಲ್ಲಿ ಬೀಗಿ ಮಾಡಲಾಗುವುದಾಗಿ ಹೇಳಿದ್ದರು.
ಪವರ್ ಟಿವಿ ಸ್ಟಿಂಗ್ ಆಪರೇಷನ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ರೆ.. ಈ ಸರ್ಕಾರ ಕಾಳಸಂತೆಕೋರರಿಗೆ ಬೆಂಬಲ ಕೊಡುತ್ತಿದ್ದಾರೆಂದು ಆರೋಪಿಸಿದ್ದಾರೆ.. ಇನ್ನು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್. ಇದ್ರಲ್ಲಿ ಅಧಿಕಾರಿಗಳು, ಸಚಿವರು ಎಲ್ಲರೂ ಭಾಗಿಯಾಗಿದ್ದಾರೆಂದು ಆರೋಪಿಸಿದ್ದಾರೆ.. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಪವರ್ ಟಿವಿಗೆ ಅಭಿನಂದನೆ ತಿಳಿಸಿದ್ದಾರೆ.
ಕಾಳಸಂತೆಕೋರರ ವಿರುದ್ಧ ನಡೆಸಿದ ಪವರ್ ಟಿವಿಯ ರಹಸ್ಯ ಕಾರ್ಯಾಚರಣೆಗೆ ಸರ್ಕಾರ ನಡುಗಿದೆ.. ಮತ್ತೊಂದೆಡೆ ಪವರ್ ಟಿವಿ ಸ್ವಿಂಗ್ಗೆ ವ್ಯಾಪಕ ಪ್ರಶಂಸೆ ವ್ತಕ್ತವಾಗಿದ್ದು, ಎಲ್ಲಾ ನಾಯಕರು ಅಭಿನಂದಿಸಿದ್ದಾರೆ.. ಒಟ್ಟಿನಲ್ಲಿ ಕ್ರಮದ ಭರವಸೆಯನ್ನ ಸಿಎಂ ಬೊಮ್ಮಾಯಿ ನೀಡಿದ್ದು, ದಂಧೆಕೋರರಿಗೆ ಕಠಿಣ ಶಿಕ್ಷೆಯಾಗಬೇಕಿದೆ..
– ಗೋವಿಂದ್ ಜೊತೆ ರೂಪೇಶ್ ಬೈಂದೂರು, ಪೊಲಿಟಿಕಲ್ ಬ್ಯೂರೋ, ಪವರ್ ಟಿವಿ