Tuesday, December 24, 2024

ಮಿಸೆಸ್ ಇಂಡಿಯಾ ಸ್ಪರ್ಧೆ ಗೆದ್ದ ನಿವೇದಿತಾ ಗೌಡ

ಬಿಗ್‍ಬಾಸ್ ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದಿರುವ ನಿವೇದಿತಾ ಗೌಡ,ಯಾವಾಗಲೂ ಸುದ್ದಿಯಲ್ಲಿ ಇರುತ್ತಾರೆ. ಕಳೆದ 2 ತಿಂಗಳಿಂದ ಮಿಸೆಸ್ ಇಂಡಿಯಾ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದ ಇವರು ಈಗ ಗೆಲುವಿನ ನಗೆ ಬೀರಿದ್ದಾರೆ.

ನಿವೇದಿತಾ ಗೌಡ ಈಗ ಮಿಸೆಸ್ ಇಂಡಿಯಾ ಆಗಿದ್ದಾರೆ. ಮಿಸೆಸ್ ಇಂಡಿಯಾ ಆಗಲು ಅವರು ಮಾಡುತ್ತಿದ್ದ ತಯಾರಿಗಳ ಬಗ್ಗೆ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದ ನಿವೇದಿತಾ ಗೆಲುವಿನ ಕಿರೀಟವನ್ನು ತಮ್ಮ ಮುಡಿಗೆ ಏರಿಸಿಕೊಂಡಿದ್ದಾರೆ.

ಇನ್ನು, ಮಿಸೆಸ್ ಇಂಡಿಯಾ ಆಗಿರುವ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ ನಿವೇದಿತಾ ತಂಡ, ಕೊನೆಗೂ ಜನರ ಹೃದಯವನ್ನು ಗೆದ್ದು ಅವರಿಗೆ ಇಷ್ಟವಾಗುವಂತೆ ಮಾಡುವುದು ನಿಜವಾದ ಸಾಧನೆ, ಅಲ್ಲವೇ? ಮಿಸೆಸ್ ಇಂಡಿಯಾ ಇಂಕ್‍ನ ಪೀಪಲ್ಸ್ ಚಾಯ್ಸ್ 2022 ರ ವಿಜೇತರಾದ ಶ್ರೀಮತಿ ನಿವೇದಿತಾ ಗೌಡ ಅವರು ನಮ್ರತೆಯಿಂದ ಲಕ್ಷಾಂತರ ಹೃದಯಗಳನ್ನು ಗೆದ್ದಿದ್ದಾರೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

RELATED ARTICLES

Related Articles

TRENDING ARTICLES