Sunday, December 22, 2024

ಬಿಎಸ್​ವೈ ಗುಡುಗಿದ್ರೆ ವಿಧಾನಸೌಧ ನಡುಗುವುದು: ಸಚಿವ ಮುರುಗೇಶ್ ನಿರಾಣಿ

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಬಿ ಎಸ್​ ಯಡಿಯೂರಪ್ಪನವರು ಗುಡುಗಿದ್ರೆ ವಿಧಾನಸೌಧ ನಡುಗುತ್ತಿತ್ತು ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿಕೆ ನೀಡಿದ್ದಾರೆ.

ಇಂದು ಯಡಿಯೂರಪ್ಪ ನಿವೃತ್ತಿ ಘೋಷಣೆ ವಿಚಾರಕ್ಕೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐದು ದಶಕಗಳಿಂದ ಬಿಎಸ್ ವೈ ಪಕ್ಷ ಕಟ್ಟಿದ್ದರು. ಅವರು ಗುಡುಗಿದ್ರೆ ವಿಧಾನಸೌಧ ನಡುಗುವುದು ಎಂಬ ಈ‌ ಮಾತು ಹಿಂದೆ ಕೇಳಿ ಬರುತ್ತಿತ್ತು. ಅವರು ನಾಲ್ಕು‌ ಭಾರಿ ಸಿಎಂ ಆಗಿದ್ದರು. ಪಕ್ಷವನ್ನ ಈ ಮಟ್ಟಕ್ಕೆ ತಂದಿದ್ದರು. ಸರ್ಕಾರ ನಡೆಯೋದು ಅವರ ಕಾರಣದಿಂದ ಎಂದು ಅವರ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು.

ಇನ್ನು ಶಿಕಾರಿಪುರ ಕ್ಷೇತ್ರವನ್ನು ವಿಜಯೇಂದ್ರಗೆ ಬಿಟ್ಟುಕೊಟ್ಟಿದ್ದಾರೆ. ಅಡ್ವಾಣಿ, ಮುರುಳಿ ಮನೋಹರ್ ಜೋಶಿ ಸ್ಪರ್ಧೆ ಬಿಟ್ಟಿದ್ದರು. ಪಕ್ಷಕ್ಕೆ ಮಾರ್ಗದರ್ಶಕರಾಗಿದ್ದಾರೆ, ಅದೇ ರೀತಿ ಯಡಿಯೂರಪ್ಪನವರು ಅವರ ಮಗನ ಒಳಿತಿಗಾಗಿ ಬಿಟ್ಟುಕೊಟ್ಟಿದ್ದಾರೆ. ಆದರೆ, ಪಕ್ಷಕ್ಕೆ ಅವರ ಮಾರ್ಗದರ್ಶನ ಇರಲಿದೆ. ಅವರು ಇವತ್ತು ಸ್ಪರ್ಧೆಗೆ ನಿಲ್ಲಲ್ಲ ಅಂದಿದ್ದಾರೆ. ಬೇರೆಯವರಿಗೆ ಸೀಟು ಬಿಟ್ಟುಕೊಟ್ಟಿದ್ದಾರೆ. ಮತ್ತೊಮ್ಮೆ ಸರ್ಕಾರ ಬರಲು ಅವಕಾಶ ಮಾಡ್ತಾರೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದರು.

RELATED ARTICLES

Related Articles

TRENDING ARTICLES