Sunday, December 22, 2024

ನನಗೂ ಸಿಎಂ ಆಗುವ ಸಾಮರ್ಥ್ಯ ಇದೆ : ಎಂ.ಬಿ.ಪಾಟೀಲ್​​

ಬೆಳಗಾವಿ:‌ ನನಗೂ ಸಿ.ಎಂ ಆಗುವಷ್ಟ ಸಾಮರ್ಥ್ಯ ಐತಿ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಎಂ.ಬಿ.ಪಾಟೀಲ ಅವರು ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದರು.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಅವರು ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ನಡೆಸಿದ್ದಾರೆ. ಅವರಿಬ್ಬರ ಜಗಳದಲ್ಲಿ ಎಂ.ಬಿ. ಪಾಟೀಲ ಅವರಿಗೆ ಅವಕಾಶ ಸಿಗಬಹುದೇ’ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇಬ್ಬರ ಕದನದಲ್ಲಿ ನಾನ್​​ ಯಾಕ್​​ ಬರಲಿ. ನಾವು ಇಬ್ಬರ ಕದನದಾಗ ಬರವಂಥವನಲ್ಲ. ಬರಬೇಕಂದಾಗ ನೇರವಾಗಿ ಬರತೇನೆ. ವಿ ಆರ್‌ ನಾಟ್ ಸೆಕೆಂಡ್‌ ಕ್ಲಾಸ್‌ ಸಿಟಿಜನ್ಸ್‌ (ನಾವು ಎರಡನೇ ದರ್ಜೆಯ ನಾಗರಿಕರಲ್ಲ) ಎಂದು ಹೇಳಿದರು.

ಪಂಜಾಬ್‌ ಮಾದರಿಯಲ್ಲೇ ರಾಜ್ಯದಲ್ಲೂ ಚುನಾವಣೆಗೆ ಮುನ್ನವೇ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಬಹುದು. ಆದರೆ, ಕಾಂಗ್ರೆಸ್‌ನಲ್ಲಿ ಮೊದಲಿನಿಂದಲೂ ಒಂದು ಪದ್ಧತಿ ಇದೆ. ಚುನಾವಣೆ ಬಳಿಕ ಶಾಸಕರೆಲ್ಲ ಒಪ್ಪಿಗೆ ನೀಡಿ ಮುಖ್ಯಮಂತ್ರಿಯನ್ನು ಆರಿಸುತ್ತಾರೆ’ ಎಂದೂ ಹೇಳಿದರು.

‘ಮುಖ್ಯಮಂತ್ರಿ ಯಾರಾಗಬೇಕು, ಯಾರಾಗುತ್ತಾರೆ ಎಂಬ ಪ್ರಶ್ನೆಗಳು ಮಾಧ್ಯಮದವರಿಗೇ ಹೆಚ್ಚಾಗಿ ಕಾಡುತ್ತಿವೆ. ಲಿಂಗಾಯತ ಸಮುದಾಯದವರೂ ಆಗಬಹುದು. ಒಕ್ಕಲಿಗ, ಮುಸ್ಲಿಂ, ಪರಿಶಿಷ್ಟ ಸೇರಿದಂತೆ ಯಾವ ಸಮುದಾಯದರೂ ಆಗಬಹುದು. ಇಂಥದ್ದೇ ಸಮಾಜದವರು ಆಗುತ್ತಾರೆ ಎಂದೇನೂ ಇಲ್ಲ. ಇಲ್ಲಿ ಯಾರು ಕೂಡ ಮೂಕ ಪ್ರೇಕ್ಷಕರಲ್ಲ’ ಎಂದೂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

RELATED ARTICLES

Related Articles

TRENDING ARTICLES