Monday, December 23, 2024

ಆಶಿಕಾ ಜತೆ ಡ್ಯುಯೆಟ್​ ಮೂಡ್​​ನಲ್ಲಿ ಇಶಾನ್​ ಸಖತ್​ ಬ್ಯುಸಿ

ಸ್ಯಾಂಡಲ್​ವುಡ್​​​ನಲ್ಲಿ ತಮ್ಮದೇ ಯ್ಯೂನಿಕ್​ ಸ್ಟೈಲ್​ ಸಿನಿಮಾಗಳ ಮೂಲಕ ವಿಭಿನ್ನ ಛಾಪು ಮೂಡಿಸಿದವ್ರು ನಿರ್ದೇಶಕ ಚೇತನ್​ಕುಮಾರ್​​​. ಇತ್ತೀಚೆಗೆ ಜೇಮ್ಸ್​​ ಸಿನಿಮಾ ಕೂಡ ಫುಲ್​​ ಹೌಸ್​ ಕಂಡು ಕೋಟಿ ಕೋಟಿ ಲೂಟಿ ಮಾಡ್ತು. ಇದಾದ ನಂತ್ರ ತುಸು ಬ್ರೇಕ್​ ತೆಗೆದುಕೊಂಡಿದ್ದ ಚೇತನ್​​ ಮೋಸ್ಟ್​ ಹ್ಯಾಂಡ್ಸಮ್​​ ನಟ ಇಶಾನ್​​ಗೆ ಗಾಳ ಹಾಕಿದ್ದಾರೆ. ಅಂತೂ ಬಿಗ್​ ಸರ್ಪ್ರೈಸಿಂಗ್​ ನ್ಯೂಸ್​​ ಇದಾಗಿದ್ದು, ಈ ಚಿತ್ರದ ಕುರಿತಾದ ಇಂಟ್ರೆಸ್ಟಿಂಗ್​ ಮಾಹಿತಿ ಇಲ್ಲಿದೆ.

ಜೇಮ್ಸ್ ಸಾರಥಿ ಗರಡಿಗೆ ಸ್ಯಾಂಡಲ್​ವುಡ್ ಮಿಲ್ಕಿಬಾಯ್

ರೇಮೊ ಹುಡುಗನಿಗೆ ಸಿದ್ಧವಾಗಿದೆ ಬಹದ್ದೂರ್​​​ ಭರ್ಜರಿ ಕಥೆ

ಆಶಿಕಾ ಜತೆ ಡ್ಯುಯೆಟ್​ ಮೂಡ್​​ನಲ್ಲಿ ಇಶಾನ್​ ಸಖತ್​ ಬ್ಯುಸಿ

ರಾಕ್​ಸ್ಟಾರ್​​ ಇಶಾನ್​​​ ಹೊಸ ಚಿತ್ರದ ಸ್ಪೆಷಾಲಿಟಿಗಳೇನು..?

ಕನ್ನಡದ ಪ್ರತಿಭಾನ್ವಿತ ನಿರ್ದೇಶಕರಲ್ಲಿ ಚೇತನ್​ಕುಮಾರ್​​ ಕೂಡ ಒಬ್ಬರು. ಭರ್ಜರಿ, ಬಹದ್ದೂರ್​​​, ಭರಾಟೆ ಸಿನಿಮಾಗಳ ಮೂಲಕ ಸ್ಯಾಂಡಲ್​ವುಡ್​​ಗೆ ಅದ್ಧೂರಿ ಮಾಸ್​ ಕಮರ್ಷಿಯಲ್​ ಸಿನಿಮಾಗಳನ್ನು ಕೊಟ್ಟವರು. ಇವ್ರ ಸಿನಿಮಾ ಮೇಕಿಂಗ್​ ಸ್ಟೈಲ್​​​ಗೆ ಫ್ಯಾನ್ಸ್​ ಕೂಡ ಫಿದಾ ಆಗಿದ್ದಾರೆ. ಸೋಲರಿಯದ ಸರದಾರ ಚೇತನ್​​ಕುಮಾರ್​​​​ ಅವ್ರ ಕೊನೆಯ ಸಿನಿಮಾ ಜೇಮ್ಸ್​​​. ಸೂಪರ್​ ಸ್ಟಾರ್​ ಅಪ್ಪು ಅವ್ರಿಗೆ ಆ್ಯಕ್ಷನ್​ ಕಟ್​ ಹೇಳಿದ್ದ ಚೇತನ್​​ಕುಮಾರ್​​ ಹಾಲಿವುಡ್​​ ಕೂಡ ನಾಚುವಂತೆ ಜೇಮ್ಸ್​​ ಸಿನಿಮಾ ತಯಾರಿಸಿದ್ದರು. ಇಡೀ ವಿಶ್ವದಾಧ್ಯಂತ ಜೇಮ್ಸ್​​ ಚಿತ್ರಕ್ಕೆ ನಿರೀಕ್ಷೆ ಮೀರಿದ ರೆಸ್ಪಾನ್ಸ್​ ಕೂಡ ಸಿಕ್ಕಿತ್ತು.

ಜೇಮ್ಸ್​ ಸಿನಿಮಾ ನಂತ್ರ ಚೇತನ್​ಕುಮಾರ್​ ಅಕ್ಷರಶಃ ಕುಗ್ಗಿ ಹೋಗಿದ್ರು. ಅಪ್ಪು ಅಗಲಿಕೆಯ ನೋವಿನಲ್ಲಿದ್ದ ಚೇತನ್​​​ ಪ್ರತಿ ನಿತ್ಯವೂ ಅಪ್ಪು ಅವರ ಫೋಟೋಗಳನ್ನು ತಮ್ಮ ಮೊಬೈಲ್​ ಸ್ಟೇಟಸ್​​​ನಲ್ಲಿಡುತ್ತಾ ಅವರ ನೆನಪಿನಲ್ಲೇ ಮುಳುಗಿ ಹೋಗಿದ್ರು. ಅವರ ನೆಕ್ಸ್ಟ್​ ಪ್ರಾಜೆಕ್ಟ್​ ಯಾವುದು, ಯಾರಿಗೆ ಆ್ಯಕ್ಷನ್​ ಕಟ್​​ ಹೇಳ್ತಾರೆ ಅನ್ನೋ ಕುತೂಹಲ ಗಾಂಧೀನಗರದಲ್ಲಿತ್ತು. ಇದೀಗ ಈ ಕುತೂಹಲಕ್ಕೆ ತೆರೆ ಬಿದ್ದಿದೆ. ಚೇತನ್​ ಕಾಲ್​​ಶೀಟ್​ ಸ್ಯಾಂಡಲ್​ವುಡ್​​ ರೆಮೋ ಹುಡುಗನ ಪಾಲಾಗಿದೆ.

ಫಿಟ್​​ನೆಸ್​​ ಹಾಗೂ ಫಿಸಿಕ್​​ ಮೂಲಕ ಇಶಾನ್​​ ಬಾಲಿವುಡ್​ ಸ್ಟಾರ್​​​​ನಂತೆ ಕಾಣುತ್ತಾರೆ. ಕನ್ನಡದ ಜನಪ್ರಿಯ ಹಿಟ್​ ಸಿನಿಮಾಗಳನ್ನು ಕೊಟ್ಟ ಖ್ಯಾತ ನಿರ್ಮಾಪಕ ಸಿ.ಆರ್​ ಮನೋಹರ್​ ಅವರ ಸಹೋದರ ಇಶಾನ್​​​. ಸದ್ಯ ತಮ್ಮನಿಗಾಗಿಯೇ ರೆಮೋ ಸಿನಿಮಾವನ್ನು ಬಹುಕೋಟಿ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣ ಮಾಡಲಾಗ್ತಿದೆ. ಪಕ್ಕಾ ಮ್ಯೂಸಿಕಲ್​ ಲವ್​ಸ್ಟೋರಿ ಸಿನಿಮಾ ಇದಾಗಿದ್ದು, ಹತ್ತಾರು ದೇಶಗಳಲ್ಲಿ ಶೂಟ್​ ಮಾಡಿ, ಇಂಟ್ರಡಕ್ಷನ್​ ಸಾಂಗ್​​ಗಾಗಿಯೇ 360 ಡಿಗ್ರಿ ಗ್ರಾಫಿಕ್ಸ್​ ಯ್ಯೂಸ್​ ಮಾಡಲಾಗ್ತಿದೆ.

ಸುರಸುಂದರಾಂಗ ಇಶಾನ್​​ ಮೊದಲ ಬಾರಿಗೆ ಪುರಿ ಜಗನ್ನಾಥ್​​ ನಿರ್ದೇಶನದಲ್ಲಿ ರೋಗ್​​ ಚಿತ್ರದ ಮೂಲಕ  ಕನ್ನಡ ಹಾಗೂ ತೆಲುಗು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರು. ಇದಾದ ನಂತ್ರ ರೆಮೋ ಚಿತ್ರದಲ್ಲಿ ಬ್ಯುಸಿ ಇರೋ ಇಶಾನ್​​​ ಮೇಲೆ ಚೇತನ್​ಕುಮಾರ್​ ಕಣ್ಣು ಬಿದ್ದಿದೆ. ಯಶಸ್ಸಿನ ಉತ್ತುಂಗದಲ್ಲಿರೋ ಚೇತನ್​​​​ಕುಮಾರ್​​​​ ಇಶಾನ್​​ಗೆ ಆ್ಯಕ್ಷನ್​​ ಕಟ್​ ಹೇಳ್ತಾ ಇರೋದ್ರಿಂದ ಚಿತ್ರದ ಮೇಲೆ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಸಿನಿಮಾದ ಕಥೆ ಏನು..? ಯಾರು ಬಂಡವಾಳ ಹೂಡಲಿದ್ದಾರೆ..? ಸಿನಿಮಾದ ಸ್ಟಾರ್​ ಕಾಸ್ಟಿಂಗ್​ ಏನು ಅನ್ನೋ ಕುತೂಹಲ ಶುರುವಾಗಿದೆ.

ಸಖತ್​ ಚ್ಯೂಸಿಯಾಗಿರೋ ಚೇತನ್​ಕುಮಾರ್​ ಈ ಸಿನಿಮಾಗೆ ಭರ್ಜರಿಯಾಗೆ ತಯಾರಿ ನಡೆಸಿದ್ದಾರೆ ಎನ್ನಲಾಗ್ತಿದೆ. ಅಂದಾಜಿನ ಪ್ರಕಾರ ಸಿ.ಆರ್​ ಮನೋಹರ್​ ಅವ್ರ ಪ್ರೊಡಕ್ಷನ್​​​ನಲ್ಲೇ ಈ ಸಿನಿಮಾ ಕೂಡ ತಯಾರಾದ್ರೆ ಇನ್ನಷ್ಟು ಮೆರಗು  ಚಿತ್ರಕ್ಕೆ ಸಿಗಲಿದೆ. ಸ್ವಲ್ಪ ಗ್ಯಾಪ್​​​ ತೆಗೆದುಕೊಂಡು ಲೆಟೆಸ್ಟ್​ ಎಂಟ್ರಿ ಕೊಟ್ಟಿರೋ ನಿರ್ದೇಶಕ ಚೇತನ್​​ಕುಮಾರ್​​ ಯಾವ ಕಥೆ ಹೇಳೊಕೆ ಹೊರಟಿದ್ದಾರೆ ಅನ್ನೋ ಕುತೂಹಲಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES