Monday, December 23, 2024

ಸೋನಿಯಾ ಗಾಂಧಿ ಅವರ ತ್ಯಾಗ ಬಲಿದಾನ ನಾವು ಮರೆಯಬಾರದು : ಡಿ.ಕೆ ಶಿವಕುಮಾರ್​

ಹುಬ್ಬಳ್ಳಿ : ನನ್ನ ಮೇಲೆ ಕೇಸ್ ದಾಖಲು ಮಾಡಿದ್ದಾಗ ನೀವೆಲ್ಲ ಪ್ರೀತಿ ತೋರಿಸಿ ಪ್ರತಿಭಟನೆ ಮಾಡಿದ್ದೀರಿ ಸೋನಿಯಾ ಗಾಂಧಿ ಅವರ ತ್ಯಾಗ ಬಲಿದಾನ ನಾವು ಮರೆಯಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿ ಸ್ಥಾನ ನನಗೆ ಬೇಡ ಎಂದು ಮನಮೋಹನ್ ಸಿಂಗ್ ಅವರನ್ನ ನೇಮಕ ಮಾಡಿದ್ದರು. ಅದ್ರೆ ED ಇಟ್ಟುಕೊಂಡು ಅವರನ್ನ ತನಿಖೆ ಮಾಡುವ ಮೋದಿ ಅವರಿಗೆ ನಾಚಿಕೆ ಇದೀಯಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು, ನ್ಯಾಷನಲ್ ಹೆರಾಲ್ಡ್ ಒಂದು ಸಂಸ್ಥೆ ಅದಕ್ಕೂ ಗಾಂಧಿ ಕುಟುಂಬಕ್ಕೂ ಸಂಬಂಧವಿಲ್ಲ. ಅವರನ್ನ ಹೆದರಿಸಿದರು ಕಾಂಗ್ರೆಸ್ ಹೆದರಲ್ಲ. ರಾಷ್ಟ್ರ ಧ್ವಜ ಹೊಂದಿರುವ ಪಕ್ಷ ನಮ್ಮದು, ಬ್ರಿಟಿಷರ ಗುಂಡಿಗೆ ಹೆದರಿಲ್ಲ ಇನ್ನೂ ED ಸಿಬಿಐ ಗೆ ಹೆದರುವುದಿಲ್ಲ. ಇಷ್ಟು ಜನ ತಾಯಂದಿರು, ರೈತರು, ಯುವಕರು ಭಾಗವಹಿಸಿದ್ದಕ್ಕೆ ಧನ್ಯವಾದಗಳು. ಅಕ್ಕಿ, ಹಿಟ್ಟು, ಗೋಧಿ, ಸಕ್ಕರೆ ಹೀಗೆ ಎಲ್ಲದರ ಮೇಲೇ tax ಹಾಕಿದ್ದಾರೆ. ಪ್ರತಿಭಟನೆ ಮಾಡಬೇಡಿ ಎಂದು ಪೊಲೀಸರು ನೋಟಿಸ್ ನೀಡಿದ್ದಾರೆ. ಪ್ರತಿಭಟನೆಯ ಕೇವಲ ಬಿಜೆಪಿ ಮಾತ್ರ ನಾ..? ಪೊಲೀಸರೇ ನಿಮ್ಮ ಇಲಾಖೆಯಲ್ಲಿ ಎಸ್ಟುಂದು ಲಂಚ ಇದೆ ಎಲ್ಲಾ ಇಲಾಖೆಯಲ್ಲಿ ಬ್ರಷ್ಟಾಚಾರ, ಪೊಲೀಸರೇ ನಿಮಗೆ ಸ್ವಾಭಿಮಾನ ಇದೀಯಾ ಎಂದು ಕಿಡಿಕಾಡಿದ್ದಾರೆ.

RELATED ARTICLES

Related Articles

TRENDING ARTICLES