ಬೆಂಗಳೂರು : ಸರ್ಕಾರಿ ಶಾಲೆಗಳಲ್ಲಿಯೇ ಮಕ್ಕಳಿಗೆ ಸ್ಪೋಕನ್ ಇಂಗ್ಲೀಷ್ ಕಲಿಸಲು ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಮುಂದಾಗಿದೆ.
ಖಾಸಗಿ ಶಾಲಾ ಮಕ್ಕಳಿಗೆ ಸರ್ಕಾರಿ ಶಾಲಾ ಮಕ್ಕಳು ಸ್ಪರ್ಧೆ ಒಡ್ಡಲು ತಯಾರಿ ಮಾಡಿದ್ದು, ಸರ್ಕಾರಿ ಶಾಲೆಗಳ ಇತಿಹಾಸದಲ್ಲಿ ಹೊಸ ಪ್ರಯತ್ನ ಮಾಡ್ತಿರೋ ಶಿಕ್ಷಣ ಇಲಾಖೆ. ಈಗಾಗಲೇ ಸ್ಪೋಕನ್ ಇಂಗ್ಲೀಷ್ ತರಬೇತಿ ನೀಡಲು ಶಿಕ್ಷಣ ಇಲಾಖೆ ಸಿದ್ದತೆ ಮಾಡಿಕೊಂಡಿದೆ.
ಇನ್ನು, ಈ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಸ್ಪೋಕನ್ ಇಂಗ್ಲೀಷ್ ಕಲಿಸಲು ಸಿದ್ದತೆ ನಡೆಸಿದ್ದು, ಸ್ಪೋಕನ್ ಇಂಗ್ಲೀಷ್ ಕಲಿಸಲು ಈಗಾಗಲೇ ತಾತ್ವಿಕ ಒಪ್ಪಿಗೆ ನೀಡಿರೋ ಶಿಕ್ಷಣ ಸಚಿವ ಬಿಸಿ ನಾಗೇಶ್. ಸಿಎಂ ಜೊತೆ ಚರ್ಚೆ ನಡೆಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಲಿದ್ದಾರೆ.
ಸ್ಪೋಕನ್ ಇಂಗ್ಲೀಷ್ ಡಿಟೇಲ್?
1 ರಿಂದ 6 ಅಥವಾ 1 ರಿಂದ 8 ನೇ ತರಗತಿ ಮಕ್ಕಳಿಗೆ ಸ್ಪೋಕನ್ ಇಂಗ್ಲೀಷ್ ಕಲಿಸಲು ನಿರ್ಧಾರ.
ವಾರದಲ್ಲಿ ಒಂದು ದಿನ( ಪ್ರತಿ ಶನಿವಾರ) ಅಥವಾ ವಾರದಲ್ಲಿ ಎರಡು ದಿನ ಸ್ಪೋಕನ್ ಇಂಗ್ಲೀಷ್ ತರಗತಿಗಳು ನಡೆಸುವುದು.
ನಮ್ಮ ಸರ್ಕಾರಿ ಶಾಲಾ ಶಿಕ್ಷಕರಿಗೆ ಮೈಸೂರಿನಲ್ಲಿ ಇರೋ ರಿಜಿನಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಸಂಸ್ಥೆ( ಸರ್ಕಾರಿ ಸಂಸ್ಥೆ) ಮೂಲಕ ವಿಶೇಷ ತರಬೇತಿ ಕೊಡಿಸಿ ಮಕ್ಕಳಿಗೆ ಕಲಿಸೋದು.
ಶಿಕ್ಷಕರ ಕೊರತೆ ಎದುರಾದರೆ ಸ್ಪೋಕನ್ ಇಂಗ್ಲೀಷ್ ಶಿಕ್ಷಕರನ್ನ ಔಟ್ ಸೋರ್ಸ್ ಅಥವಾ ಅತಿಥಿ ಶಿಕ್ಷಕರನ್ನ ನೇಮಕ ಮಾಡಿಕೊಂಡು ಮಕ್ಕಳಿಗೆ ಕಲಿಸೋದು.