Friday, January 24, 2025

ರಮೇಶ್ ಕುಮಾರ್ ‘ಮಾಯಿಲ್ ಮರಾಠಿ’ : ಡಾ.ಕೆ.ಸುಧಾಕರ್

ಬೆಂಗಳೂರು : ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಈ ಹಿಂದೆ ಪತ್ರಿಕೆಯಲ್ಲಿ ‘ಮಾಯಿಲ್ ಮರಾಠಿ’ ಎನ್ನುತ್ತಿದ್ದರು. ಹಾಗಂದ್ರೆ ನಮ್ಮ ಕೋಲಾರ ಭಾಗದಲ್ಲಿ ಮಂತ್ರವಾದಿ ಅಂತ ಅರ್ಥ ಎಂದು ಸಚಿವ ಡಾ.ಕೆ.ಸುಧಾಕರ್ ರಮೇಶ್‌ ಕುಮಾರ್‌ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಕಾಂಗ್ರೆಸ್​​​​​ನ ಒಬ್ಬೊಬ್ಬರು ನಾಲ್ಕು ತಲೆಮಾರಿಗಾಗುವಷ್ಟು ಆಸ್ತಿ ಮಾಡಿದ್ದಾರೆ. ಸೋನಿಯಾ, ರಾಹುಲ್ ಗಾಂಧಿ ಹೆಸರಲ್ಲಿ ಆಸ್ತಿ ಮಾಡಿದ್ದಾರೆ. ನಾನು ಹೇಳೋದು ಏನಿದೆ ಎಂದರು. ಭ್ರಷ್ಟಾಚಾರದ ದೊಡ್ಡ ಹಗರಣದ ಬಗ್ಗೆ ಅವರೇ ಹೇಳಿದ್ದಾರೆ.

ನಾಲ್ಕು ತಲೆಮಾರಿಗೆ ಆಗುವ ಬಗ್ಗೆ ಆಸ್ತಿ ಮಾಡಿರುವುದಾಗಿ ಹೇಳಿದ್ದಾರೆ. ಅವರು ಹಳೆಯ ನಾಯಕರಲ್ವಾ.? ಅವರು ಬಹಳ ಸತ್ಯ ಹೇಳುತ್ತಿದ್ದಾರೆ ಎಂದರು. ಕೋಲಾರ ಭಾಗದ ಎಲ್ಲಾ ಜನತೆಗೂ ಅವರ ಬಗ್ಗೆ ಗೊತ್ತಿದೆ. ಸ್ಪೀಕರ್ ಆಗಿ ಅವರ ವರ್ತನೆ ಬಗ್ಗೆ ನಾನು ಸದನದಲ್ಲೂ ಹೇಳಿದ್ದೇನೆ. ಇಡೀ ದೇಶದಲ್ಲಿ ಯಾವ ಸ್ಪೀಕರ್ ಮಾಡದ ಘನಂದಾರಿ ಕೆಲಸ ಅವರು ಮಾಡಿದ್ದರು. ಹಿಂದೆ ಲಂಕೇಶ್ ಪತ್ರಿಕೆಯ ದ್ವಾರಕನಾಥ್ ಅವರು, ರಮೇಶ್ ಕುಮಾರ್​​​​​ಗೆ ‘ಮಾಯಿಲ್ ಮರಾಠಿ’ ಅಂತ ಬಿರುದು ನೀಡಿದ್ದರು ಎಂದು ಸ್ಮರಿಸಿದರು.

RELATED ARTICLES

Related Articles

TRENDING ARTICLES