Sunday, December 22, 2024

ಶಾಕ್​ ಹೊಡೆದರೂ ಬದುಕುಳಿದ ಯುವಕ

ಹಾವೇರಿ : ವಿದ್ಯುತ್ ಲೈನ್ ಸರಿಪಡಿಸಲು ಶಾಕ್​ ಹೊಡೆದರೂ ಬದುಕುಳಿದ ಯುವಕ ಹೊಡೆದರೂ ಅದೃಷ್ಟವಶಾತ್ ಪವಾಡ ಸದೃಶ ರೀತಿಯಲ್ಲಿ ಬದುಕುಳಿದ ಘಟನೆ ಹಾವೇರಿಯಲ್ಲಿ ನಡೆದಿದೆ.

ಶಿಗ್ಗಾಂವ್ ತಾಲೂಕಿನ ಹನುಮರಹಳ್ಳಿ ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ಇದ್ರೆ ಈತನೆ ಕಂಬವೇರಿ ಸರಿ ಮಾಡ್ತಿದ್ದ. ಹೀಗೆ ಲೈನ್​ ಮೇಲೆ ಕುಳಿತು ರಮೇಶ್ ಲೈನ್ ಸರಿಪಡಿಸುತ್ತಿದ್ದಾಗ ಕರೆಂಟ್​ ಬಂದಿದ್ದು, ಶಾಕ್ ಹೊಡೆದಿದೆ. ಲೈನ್ ಮೇಲೆ ನೇತಾಡುತ್ತಿದ್ದ ಯುವಕನನ್ನ ಗ್ರಾಮಸ್ಥರು ಗಮನಿಸಿ ರಕ್ಷಣೆ ಮಾಡಿದ್ದಾರೆ. ಸದ್ಯ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ರಮೇಶ್​ ಹುಬ್ಬಳ್ಳಿ ಕಿಮ್ಸ್​​​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

RELATED ARTICLES

Related Articles

TRENDING ARTICLES