Monday, May 20, 2024

ಫ್ರೀಡಂ ಪಾರ್ಕ್ ನಲ್ಲೂ ಪ್ರತಿಭಟನೆ, ಮೆರವಣಿಗೆ, ರ್ಯಾಲಿಗಳಿಗೆ ಬೀಳುತ್ತಾ ಬ್ರೇಕ್..?

ಬೆಂಗಳೂರು : ಸಿಲಿಕಾನ್​ ಸಿಟಿಯ ಫ್ರೀಡಂ ಪಾರ್ಕ್ ಬಿಟ್ಟು ಬೇರೆಲ್ಲೂ ಪ್ರತಿಭಟನೆ ನಡೆಸುವಂತಿಲ್ಲ. ಆದರೆ ಇನ್ನುಂದೆ ಫ್ರೀಡಂ ಪಾರ್ಕ್​ನಲ್ಲಿ ಯಾವುದೇ ಪ್ರತಿಭಟನೆ ಮಾಡುವಂತಿಲ್ಲ.

ಸದ್ಯ ಬೆಂಗಳೂರಿನ ಫ್ರೀಡಂ ಪಾರ್ಕ್ ಬಿಟ್ಟು ಬೇರೆಲ್ಲೂ ಪ್ರತಿಭಟನೆ ನಡೆಸುವಂತಿಲ್ಲ. ಇದೀಗ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ, ಮೆರವಣಿಗೆ ವಿದ್ಯಾರ್ಥಿಗಳು ಹಾಗೂ ಕಾಲೇಜು ಆಡಳಿತ ಮಂಡಳಿ ಆಕ್ಷೇಪ ನೀಡಲಾಗಿದೆ. ಹಾಗಾದರೆ ಇನ್ಮುಂದೆ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ, ಮೆರವಣಿಗೆ, ರ್ಯಾಲಿ, ಬಹಿರಂಗ ಸಭೆಗೆ ಕಡಿವಾಣ ಬೀಳುತ್ತಾ..? ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ.

ಇನ್ನು, ವಿದ್ಯಾರ್ಥಿಗಳ ಭವಿಷ್ಯಕ್ಕೂ ಕುತ್ತು ತರುತ್ತಿದೆ ಫ್ರೀಡಂ ಪಾರ್ಕ್​ನಲ್ಲಿ ನಡೆಯುತ್ತಿರು ಹಲವು ಪ್ರತಿಭಟನೆಗಳು ಒಂದಿಲ್ಲೊಂದು ಪ್ರತಿಭಟನೆ, ರ್ಯಾಲಿ, ಮೆರವಣಿಗೆ ಫ್ರೀಡಂ ಪಾರ್ಕ್​ ಹಾಟ್ಸ್ಪಾಟ್ ಆಗಿದೆ. ಹೀಗಾಗಿ ಕಾಲೇಜು ಆಡಳಿತ ಮಂಡಳಿ ಕೋರ್ಟ್ ಮೆಟ್ಟಿಲೇರಲು ತೀರ್ಮಾನ ಕೈಗೊಂಡಿದೆ. ಆದರೆ ಈ ಹಿಂದೆ ಫ್ರೀಡಂ ಪಾರ್ಕ್ ಹೊರತಾಗಿ ಬೇರೆಡೆ ಪ್ರತಿಭಟನೆ ನಿರ್ಬಂಧಿಸಿ ಹೈಕೋರ್ಟ್ ಆದೇಶಿಸಿದೆ.

ಅದಲ್ಲದೇ, ಮಹಾರಾಣಿ ಆರ್ಟ್ಸ್ ಕಾಲೇಜ್, ಮಹರಾಣಿ ವಾಣಿಜ್ಯ ಕಾಲೇಜ್, ಮಹಾರಾಣಿ ಹೋಮ್ ಸೈಯನ್ಸ್ ಕಾಲೇಜ್, & ಮಹಾರಾಣಿ ಮ್ಯಾನೇಜ್ಮೆಂಟ್ ಕಾಲೇಜ್ ಈ ನಾಲ್ಕು ಕಾಲೇಜಿನಲ್ಲಿ ಸುಮಾರು 4 ಸಾವಿರ ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡ್ತಿದ್ದಾರೆ ಜೊತೆಗೆ ಆಗಾಗ ಎಕ್ಸಾಂ ನಡೀತಿರುತ್ತೆ. ಆದರೆ ಫ್ರೀಡಂ ಪಾರ್ಕಲ್ಲಿ ನಡೆಯೋ ಪ್ರತಿಭಟನಾಕಾರರ ಧಿಕ್ಕಾರ, ಘೋಷಣೆಗಳಿಂದ ಪಾಠಕ್ಕೆ ತೊಂದರೆಯಾಗುತ್ತಿದೆ ಹೀಗಾಗಿ ಫ್ರೀಡಂ ಪಾರ್ಕ್ ನಲ್ಲಿ ನಡೆಯುವ ಪ್ರತಿಭಟನೆಯನ್ನು ಶಾಶ್ವತವಾಗಿ ರದ್ದು ಮಾಡುವಂತೆ ಕಾಲೇಜಿಗಳಿಂದ ಒತ್ತಾಯ ಮಾಡಲಾಗಿದೆ.

RELATED ARTICLES

Related Articles

TRENDING ARTICLES