Monday, December 23, 2024

ರಾಷ್ಟ್ರಪತಿ ರಾಮನಾಥ ಕೋವಿಂದ್‌ಗೆ ಇಂದು ಬೀಳ್ಕೊಡುಗೆ ಸಮಾರಂಭ

ನವದೆಹಲಿ : ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರ ಅಧಿಕಾರವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಇಂದು ದೆಹಲಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೆರಳಲಿದ್ದಾರೆ.

ಇನ್ನು, ರಾಷ್ಟ್ರಪತಿ ಬೀಳ್ಕೊಡುಗೆ ಹಿನ್ನೆಲೆ ಔತಣಕೂಟ ಏರ್ಪಡಿಸಿರುವ ಪ್ರಧಾನಿ ಮೋದಿ. ಮೋದಿ ಆಯೋಜಿಸಿರುವ ಔತಣಕೂಟದಲ್ಲಿ ಭಾಗಿಯಾಗಲಿರುವ ಬೊಮ್ಮಾಯಿ‌. ಇಂದು ಮಧ್ಯಾಹ್ನ 2.55ಕ್ಕೆ ದೆಹಲಿಗೆ ತೆರಳಲಿದ್ದಾರೆ.

ಇಂದು ರಾತ್ರಿ 8 ಗಂಟೆಗೆ ಖಾಸಗಿ ಹೋಟೆಲ್‌ನಲ್ಲಿ ಔತಣಕೂಟ ನಡೆಯಲಿದ್ದು, ರಾತ್ರಿ ಕರ್ನಾಟಕ ಭವನದಲ್ಲಿ ಸಿಎಂ ಬೊಮ್ಮಾಯಿ‌ ವಾಸ್ತವ್ಯ ಹೂಡಲಿದ್ದಾರೆ. ಹಾಗೆನೇ ನಾಳೆ ಬೆಳಗ್ಗೆ 10.50 ಬೆಂಗಳೂರಿಗೆ ಸಿಎಂ ಬೊಮ್ಮಾಯಿ ವಾಪಸ್ ಆಗಲಿದ್ದಾರೆ.

RELATED ARTICLES

Related Articles

TRENDING ARTICLES