Monday, December 23, 2024

ಕಾಂಗ್ರೆಸ್​ನಲ್ಲಿರುವ ಹಲವರು ಬೇಲ್​​ ಗಿರಾಕಿಗಳು: MLC ರವಿಕುಮಾರ್

ಬೆಂಗಳೂರು : ಗಾಂಧಿ ಕುಟುಂಬದ ಆಸ್ತಿ ಕುರಿತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕೊನೆಗೂ ಸತ್ಯ ಬಾಯ್ಬಿಟ್ಟಿದ್ದಾರೆ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಹೇಳಿದರು.

ಮೂರು ನಾಲ್ಕು ತಲೆಮಾರಿನ ಆಸ್ತಿ ಬಗ್ಗೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವ್ರು ಬಹಳ ಸತ್ಯವಾದ ಮಾತನ್ನು ಆಡಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಕಾಂಗ್ರೆಸ್ ಸರ್ಕಾರ ಇದ್ದಾಗ ನಾವು ಲೂಟಿ ಮಾಡುವ ಕೆಲಸ ಮಾಡಿದ್ದೇವೆ ಎಂದು ಹೇಳಿದ್ದಾರೆ. ಅಂದರೆ ಜನರು ತೀರ್ಮಾನ ಮಾಡಿರೋದು ಸರಿ ಇದೆ ಎಂದು ಪ್ರತಿಕ್ರಿಯಿಸಿದರು.

ಇನ್ನು ನ್ಯಾಷನಲ್ ಹೆರಾಲ್ಡ್ ಕೂಡ ಇದರಲ್ಲಿ ಒಂದು ಪಾತ್ರವಾಗಿದೆ. ಅನ್ಯಾಯ, ಅಕ್ರಮದ ಮೂಲಕ ಹಣ ಗಳಿಸಿದ್ದೀರಿ. ಹೀಗಾಗಿ ಇದರ ವಿಚಾರಣೆ ಆಗಬಾರದಾ..? ಸಿಬಿಐ, ಸಿಐಡಿ, ಕೋರ್ಟ್ ಕ್ಲೋಸ್ ಮಾಡಿ ಅಂತಾ ನಿಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿ ಚುನಾವಣೆಗೆ ಬನ್ನಿ. ಪ್ರತಿಭಟನೆಗಾಗಿ ನಾಲ್ಕು ದಿನ ಪಾರ್ಲಿಮೆಂಟ್ ಬಂದ್ ಮಾಡಿದ್ದಾರೆ. ಕಾಂಗ್ರೆಸ್​​ಗೆ ನಿಜವಾಗಿಯೂ ನೆಲದ ಮೇಲೆ, ಸಂವಿಧಾನದ ಮೇಲೆ ಗೌರವ ಇಲ್ವೇ ಇಲ್ಲಾ ಎಂದು ವಾಗ್ದಾಳಿ ನಡೆಸಿದರು.

ಅಷ್ಟೇ ಅಲ್ಲದೇ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಡಿ ಕೆ ಶಿವಕುಮಾರ್ ಸೇರಿದಂತೆ ಹಲವರು ಬೇಲ್ ತಗೊಂಡೇ ಹೊರಗೆ ಇರುವಂತವರು. ಇನ್ನು ಮೊಹಮ್ಮದ್ ನಲಪಾಡ್ ಬಳಸುವ ಶಬ್ದ ಬಳಕೆ ಎಲ್ಲಾದರೂ ಸಾಧ್ಯನಾ..? ಅವ್ರು ಕೂಡ ಬೇಲ್ ಗಿರಾಕಿನೇ..?  ನೀವು ಪ್ರಾಮಾಣಿಕರು ಅಂದರೆ ವಿಚಾರಣೆ ಎದುರಿಸಿ ಯಾಕೆ ಎದುರುತ್ತೀರಾ..? ಜನರಿಗೆ ತೊಂದರೆ ಕೊಟ್ಟು ಯಾಕೆ ಪ್ರತಿಭಟನೆ ಮಾಡ್ತಿದ್ದೀರಾ..? ಎಂದು ಕಿಡಿಕಾಡಿದರು.

RELATED ARTICLES

Related Articles

TRENDING ARTICLES