Wednesday, January 22, 2025

ಯೂರೋಪ್ ಟೂರ್​ನಲ್ಲಿ ರಾಕಿಂಗ್ ದಂಪತಿ ಹಂಗಾಮ

ರಾಕಿಭಾಯ್ ಯಶ್ ಹಾಗೂ ಸ್ಯಾಂಡಲ್​ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಸಿಲ್ವರ್​ಸ್ಕ್ರೀನ್ ಜರ್ನಿಗೆ 14 ವರ್ಷಗಳ ಹರುಷ. ಇದೇ ಸುಸಂದರ್ಭದಲ್ಲಿ ರಾಕಿಂಗ್ ಕಪಲ್ ಮತ್ತೊಂದು ಕಲರ್​ಫುಲ್ ಸುದ್ದಿ ನೀಡಿದ್ದಾರೆ. ಅದೂ ಯೂರೋಪ್​ನಿಂದ ಅನ್ನೋದು ಮತ್ತಷ್ಟು ಇಂಟರೆಸ್ಟಿಂಗ್.

ಯಶ್- ರಾಧೆ ಸಿನಿಯಾನಕ್ಕೆ ಹದಿನಾಲ್ಕು ವರ್ಷದ ಹರುಷ

ಯೂರೋಪ್ ಟೂರ್​ನಲ್ಲಿ ರಾಕಿಂಗ್ ದಂಪತಿ ಹಂಗಾಮ

ಅಪ್ಪ ಬ್ಯಾಡ್ ಬಾಯ್.. ಅಮ್ಮ ಗುಡ್ ಗರ್ಲ್-​ ಯಥರ್ವ್​

ಮಕ್ಕಳೊಂದಿಗೆ ಪ್ರಾಣಿ ಪೆಟ್ ಸ್ಯಾಂಕ್ಚುರಿಯಲ್ಲಿ ರಾಕಿಭಾಯ್

ವರ್ಲ್ಡ್​ ಸಿನಿದುನಿಯಾದ ಸೆನ್ಸೇಷನಲ್ ಸೂಪರ್ ಸ್ಟಾರ್​ಗಳಲ್ಲಿ ರಾಕಿಭಾಯ್ ಯಶ್ ಕೂಡ ಒಬ್ರು. ಕೆಜಿಎಫ್ ಸಿನಿಮಾದಿಂದ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆದ ಟ್ರೆಂಡ್​ಸೆಟ್ಟರ್. ​ಇವ್ರ ವಿಷನ್ ಮತ್ತು ಪ್ಯಾಷನ್ ಸಹಸ್ರಾರು ಮಂದಿಗೆ ಸ್ಫೂರ್ತಿ. ಯೂತ್ಸ್​ಗೆ ಇವ್ರೇ ಐಕಾನ್. ಕನ್ನಡ ಚಿತ್ರರಂಗದ ಬ್ರಾಂಡ್ ಅಂಬಾಸಿಡರ್.

ಅಟೆನ್ಷನ್ ಪ್ಲೀಸ್.. ಬಂದ ಮಾಸ್ಟರ್​ಪೀಸ್ ಅನ್ನೋ ರೇಂಜ್​ಗೆ ಎಲ್ಲೆಲ್ಲೂ ಹವಾ ಇಟ್ಟಿದ್ದಾರೆ ನಮ್ಮ ನ್ಯಾಷನಲ್ ಸ್ಟಾರ್ ರಾಕಿಭಾಯ್ ಯಶ್. ಕನ್ನಡ ಸಿನಿಮಾವೊಂದು 1500 ಕೋಟಿ ಗಳಿಸಬಲ್ಲದು ಅನ್ನೋದನ್ನ ತೋರಿಸಿಕೊಟ್ಟ ಸ್ಟಾರ್ ಇವ್ರು. ಸದ್ಯ ಇವ್ರ ಮುಂದಿನ ಹೆಜ್ಜೆ ಏನು ಅನ್ನೋದು ನಿಗೂಢ. ಆದ್ರೆ ಸಿನಿಮೇತರವಾಗಿಯೂ ರಾಕಿಭಾಯ್ ಸದಾ ಸುದ್ದಿಯಲ್ಲಿರ್ತಾರೆ.

ಸದ್ಯ ಯೂರೋಪ್ ಟ್ರಿಪ್​ನಲ್ಲಿರೋ ಸ್ಯಾಂಡಲ್​ವುಡ್ ಸಿಂಡ್ರೆಲಾ ಹಾಗೂ ಮಾನ್​ಸ್ಟರ್ ರಾಕಿ, ಕಲರ್​ಫುಲ್ ಫೋಟೋಸ್ ಜೊತೆ ಬ್ಯೂಟಿಫುಲ್ ಮೆಮೊರೀಸ್ ಶೇರ್ ಮಾಡಿಕೊಂಡಿದ್ದಾರೆ. ಆದ್ರೆ ಅದಕ್ಕೂ ಮುನ್ನ ಇತ್ತೀಚೆಗಷ್ಟೇ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿ ಹದಿನಾಲ್ಕು ವರುಷ ಪೂರೈಸಿರೋ ರಾಕಿಂಗ್ ದಂಪತಿಗೆ ಶುಭಾಶಯ ಕೋರಿ ಬಿಡೋಣ.

ಹೌದು.. ಮೊಗ್ಗಿನ ಮನಸ್ಸು ಸಿನಿಮಾ ತೆರೆಕಂಡು ಇದೇ ಜುಲೈ 18ಕ್ಕೆ ಹದಿನಾಲ್ಕು ವರ್ಷ. ಕಿರುತೆರೆಯಿಂದ ಬೆಳ್ಳಿತೆರೆಗೆ ಯಶ್ ಹಾಗೂ ರಾಧಿಕಾ ಪಂಡಿತ್ ಕಾಲಿಟ್ಟಿದ್ದು ಇದೇ ಯೂತ್​ಫುಲ್ ಎಂಟರ್​ಟೈನರ್​ನಿಂದ. ಇದು ಮ್ಯೂಸಿಕಲ್ ಹಿಟ್ ಜೊತೆ ಹೆಂಗೆಳೆಯರ ಮನಸ್ಸು ಗೆದ್ದ ಸ್ನೇಹ, ಪ್ರೀತಿ, ಪ್ರೇಮ, ಪ್ರಣಯದ ದೃಶ್ಯಕಾವ್ಯ. ವೈಯಕ್ತಿಕವಾಗಿ ಈ ಚಿತ್ರ ನನಗೆ ಫಿಲ್ಮ್ ಫೇರ್, ಸ್ಟೇಟ್ ಅವಾರ್ಡ್​, ಲೈಫ್ ಪಾಟ್ನರ್ ಹೀಗೆ  ಸಾಕಷ್ಟು ನೀಡಿದೆ. ಇನ್ನೇನು ಕೇಳಲು ಸಾಧ್ಯ..? ಹೀಗಂತ ಸ್ವತಃ ರಾಧಿಕಾ ಪಂಡಿತ್ ಅವ್ರೇ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಇನ್ನು ಸಿನಿಮಾದಷ್ಟೇ ಕಲರ್​ಫುಲ್ ಯಶ್- ರಾಧಿಕಾರ ಪರ್ಸನಲ್ ಲೈಫ್. ಮಗ, ಮಗಳು, ಕುಟುಂಬದೊಂದಿಗೆ ಕ್ವಾಲಿಟಿ ಲೈಫ್. ಇದಕ್ಕಿಂತ ಖುಷಿ ಬೇರೇನಿದೆ ಅಲ್ಲವೇ..? ಮೂರು ತಿಂಗಳಿಗೊಮ್ಮೆ ಟ್ರಿಪ್ ಹೊರಡೋ ಇವ್ರು ಇಷ್ಟವಾದ ಲೊಕೇಷನ್ಸ್​ಗೆ ಮಕ್ಕಳ ಸಮೇತ ಸುತ್ತುತಾ ಇರ್ತಾರೆ. ರೀಸೆಂಟ್ ಆಗಿ ಮಕ್ಕಳ ಸಮೇತ ಪ್ರಾಣಿ ಪೆಟ್ ಸ್ಯಾಂಕ್ಚುರಿಗೆ ವಿಸಿಟ್ ಮಾಡಿದ್ರು ರಾಕಿಂಗ್ ದಂಪತಿ. ಅದ್ರ ವಿಡಿಯೋನ ಯಶ್ ಅವ್ರೇ ತಮ್ಮ ಪೇಜ್​ನಲ್ಲಿ ಅಪ್​ಲೋಡ್ ಮಾಡಿರೋದು ಮತ್ತಷ್ಟು ಇಂಟರೆಸ್ಟಿಂಗ್.

ಇನ್ನು ಮನೆಯಲ್ಲಿ ಮಕ್ಕಳಿಗೆ ರಾಕಿಭಾಯ್ ನಿರೀಕ್ಷೆಗೂ ಮೀರಿದಷ್ಟು ಟೈಂ ಕೊಡ್ತಾರೆ. ಮಗ ಯಥರ್ವ್​ ಹಾಗೂ ಮಗಳು ಐರಾ ಜೊತೆಗಿನ ಸಾಕಷ್ಟು ವಿಡಿಯೋಗಳನ್ನ ಆಗಾಗ ಹಂಚಿಕೊಳ್ತಾನೇ ಇರ್ತಾರೆ. ಆ ಪೈಕಿ ರೀಸೆಂಟ್ ಆಗಿ ಅಪ್ಪ ಬ್ಯಾಡ್ ಬಾಡ್, ಅಮ್ಮ ಗುಡ್ ಗರ್ಲ್​ ಅಂತ ವಿವಾದಾತ್ಮಕ ಹೇಳಿಕೆ ನೀಡೋ ಜೂನಿಯರ್ ರಾಕಿಭಾಯ್ ವಿಡಿಯೋ ಸಖತ್ ವೈರಲ್ ಆಗಿದೆ.

ಇವೆಲ್ಲವುಗಳ ಮಧ್ಯೆ ರಾಕಿಂಗ್ ದಂಪತಿ ತಮ್ಮ ಏಕಾಂತತೆಯನ್ನ ಯೂರೋಪ್ ಟೂರ್​ನಲ್ಲಿ ಕಳೆಯುತ್ತಿದ್ದಾರೆ. ಇದೇ ಮೊದಲ ಬಾರಿ ಮಕ್ಕಳನ್ನ ಮನೆಯಲ್ಲೇ ಬಿಟ್ಟು ಸತಿ-ಪತಿ ಒಟ್ಟಿಗೆ ತೆರಳಿರೋದು ವಿಶೇಷ. ಅಲ್ಲಿಂದ ಒಂದಷ್ಟು ಫೋಟೋಸ್ ಶೇರ್ ಮಾಡಿರೋ ರಾಧಿಕಾ ಪಂಡಿತ್, ಅಲ್ಲಿನ ವಿಶೇಷತೆಗಳನ್ನ ಸ್ಪೆಷಲ್ ಆಗಿ ಬಣ್ಣಿಸಿದ್ದಾರೆ. ಇವರಿಬ್ಬರೂ ಮತ್ತೆ ಒಟ್ಟಿಗೆ ಸಿನಿಮಾ ಮಾಡಲಿ, ಆ ಮೂಲಕ ಸಿಂಡ್ರೆಲಾ ಕಂಬ್ಯಾಕ್ ಆಗಲಿ ಅನ್ನೋದೇ ಎಲ್ಲರ ಆಶಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES